More

    ತೆಲುಗು ಟೈಟಾನ್ಸ್‌ ವಿರುದ್ಧ ತಮಿಳ್‌ ತಲೈವಾಸ್‌ಗೆ ರೋಚಕ ಜಯ: ಪವನ್ ಸೆಹ್ರಾವತ್ ಪಡೆಗೆ ಸತತ ಸೋಲು

    ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ ಬುಧವಾರದ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ಹಾಗೂ ತೆಲುಗು ಟೈಟಾನ್ಸ್‌ ತಂಡಗಳು ಕೊನೆಯ ಹಂತದವರೆಗೂ ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಆದಾಗ್ಯೂ, ತಲೈವಾಸ್‌ ಆಟದ ಕೊನೆಯ ಹಂತದಲ್ಲಿ ತಮ್ಮ ಆಟವನ್ನು ಪರಿಪೂರ್ಣವಾಗಿ ಆಡಿದ ಹಿನ್ನೆಲೆಯಲ್ಲಿ 38-36 ರಿಂದ ಜಯದ ನಗೆ ಬೀರಿತು. ತಲೈವಾಸ್‌ ಪರ ನರೇಂದರ್‌ 10 ಅಂಕ ಗಳಿಸಿದರೆ, ಟೈಟಾನ್ಸ್‌ ಪರ ಪವನ್‌ ಶೆಹ್ರಾವತ್‌ ಹಾಗೂ ರಾಬಿನ್‌ ಚೌಧರಿ ತಲಾ 7 ಅಂಕ ಗಳಿಸಿದರು.

    3ನೇ ನಿಮಿಷದಲ್ಲಿ ನರೇಂದರ್‌ ಅವರನ್ನು ಅಜಿತ್‌ ಪವಾರ್‌ ಟ್ಯಾಕಲ್‌ ಮಾಡಿದ ಹಿನ್ನೆಲೆಯಲ್ಲಿಟೈಟಾನ್ಸ್‌ 3-1ರ ಮುನ್ನಡೆ ಕಂಡುಕೊಂಡಿತು. ದಿಟ್ಟ ರಕ್ಷ ಣಾತ್ಮಕ ಆಟವಾಡಿದ ಟೈಟಾನ್ಸ್‌ 7ನೇ ನಿಮಿಷದಲ್ಲಿಯೂ 6-4ರ ಮುನ್ನಡೆ ಕಾಯ್ದುಕೊಂಡಿತು. ನರೇಂದರ್‌ ಆವೇಗವನ್ನು ಬದಲಾಯಿಸಲು ಪ್ರಯತ್ನಿಸಿದರು, ಆದರೆ ಅವರು ನಿರಂತರವಾಗಿ ರೈಡ್‌ ಪಾಯಿಂಟ್‌ ಗಳನ್ನು ಸಂಗ್ರಹಿಸುವ ಮಾರ್ಗವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಕೆಲವು ಆಕರ್ಷಕ ರೈಡ್‌ ಮೂಲಕ ತಂಡದ ರಕ್ಷ ಣಾ ವಿಭಾಗದಲ್ಲಿರಾಬಿನ್‌ ಚೌಧರಿ ನೆರವಾದ ಕಾರಣ 11ನೇ ನಿಮಿಷದಲ್ಲಿ ಟೈಟಾನ್ಸ್‌ 10-8ರಲ್ಲಿಮುನ್ನಡೆ ಸಾಧಿಸಿತು.

    ಆದಾಗ್ಯೂ, ನರೇಂದರ್‌ ಮತ್ತು ಅಜಿಂಕ್ಯ ಪವಾರ್‌ ತಲಾ ಒಂದು ರೈಡ್‌ ಪಾಯಿಂಟ್‌ ಪಡೆದು ತಲೈವಾಸ್‌ ಸ್ಕೋರನ್ನು 12-12 ರಿಂದ ಸಮಗೊಳಿಸಲು ಸಹಾಯ ಮಾಡಿದರು. ತಮಿಳುನಾಡಿನ ತಂಡವು ಆವೇಗದಲ್ಲಿದಿಟ್ಟ ಹೋರಾಟ ನೀಡಿತು ಮತ್ತು ಟೈಟಾನ್ಸ ತಂಡದ ಮ್ಯಾಟ್‌ ಮೇಲೆ ಕೇವಲ ಒಬ್ಬ ಸದಸ್ಯನಿಗೆ ಇಳಿಸಿತು. ಆದರೆ, ಸಂಜೀವ್‌ ಎಸ್‌. ಅದ್ಭುತ ರೈಡ್‌ ಮೂಲಕ ಸಾಗರ್‌ ಮತ್ತು ಅಜಿಂಕ್ಯ ಪವಾರ್‌ ಅವರನ್ನು ಔಟ್‌ ಮಾಡಿ ಟೈಟಾನ್ಸ್‌ ತಂಡವನ್ನು ಸ್ಪರ್ಧೆಯಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದಾಗ್ಯೂ, ತಲೈವಾಸ್‌ ತಮ್ಮ ಎದುರಾಳಿಗಳ ಮೇಲೆ ನಿರಂತರ ಒತ್ತಡ ಹೇರಿತು ಮತ್ತು ವಿರಾಮಕ್ಕೆ ಸ್ವಲ್ಪ ಮೊದಲು ಟೈಟಾನ್ಸ್‌ ಆಟಗಾರರನ್ನು ಆಲ್‌ಔಟ್‌ ಮಾಡಿತು. ಮೊದಲಾರ್ಧದ ಅಂತ್ಯಕ್ಕೆ ತಮಿಳುನಾಡು ತಂಡ 20-17 ಅಂಕಗಳ ಮುನ್ನಡೆ ಸಾಧಿಸಿತ್ತು.

    ದ್ವಿತೀಯಾರ್ಧದ ಆರಂಭದ ನಿಮಿಷಗಳಲ್ಲಿಸೆಹ್ರಾವತ್‌ ಅದ್ಭುತ ರೈಡ್‌ ಬಾರಿಸಿ ಸ್ಕೋರನ್ನು 20-20ರಲ್ಲಿ ಸಮಬಲಗೊಳಿಸಿದರು. ನಂತರ ಉಭಯ ತಂಡಗಳು 26ನೇ ನಿಮಿಷದಲ್ಲಿ22-22ರ ಸಮಬಲ ಸಾಧಿಸಿದವು. ಸೆಹ್ರಾವತ್‌ ಡಿಫೆಂಡರ್‌ಗಳ ಮೇಲೆ ಜಿಗಿಯಲು ಪ್ರಯತ್ನಿಸಿದರು, ಆದರೆ ಸಾಹಿಲ್‌ ಗುಲಿಯಾ 32 ನೇ ನಿಮಿಷದಲ್ಲಿತಲೈವಾಸ್‌ಗೆ 25-24 ರಲ್ಲಿಮುನ್ನಡೆ ಸಾಧಿಸಲು ಸಹಾಯ ಮಾಡಿದರು.

    37ನೇ ನಿಮಿಷದಲ್ಲಿಪವಾರ್‌ ಕಲೆಹಾಕಿದ ಡಬಲ್‌ ಪಾಯಿಂಟ್ಸ್‌ನಿಂದ ತಲೈವಾಸ್‌ 32-28ರಲ್ಲಿ4 ಅಂಕಗಳ ಮುನ್ನಡೆ ಸಾಧಿಸಿತು. ಆದರೆ ಟೈಟಾನ್ಸ್‌ ಸೂಪರ್‌ ಟ್ಯಾಕಲ್‌ ನಡೆಸಿ 31-32ರಲ್ಲಿಹಿನ್ನಡೆ ತಗ್ಗಿಸಿತು. ಆದಾಗ್ಯೂ, ಪಂದ್ಯದ ಕೊನೆಯ ನಿಮಿಷದಲ್ಲಿಟೈಟಾನ್ಸ್‌ ತಂಡವನ್ನು ಆಲ್‌ ಔಟ್‌ ಮಾಡಿದ ತಲೈವಾಸ್‌ ಗೆಲುವಿನೊಂದಿಗೆ ಮ್ಯಾಟ್‌ನಿಂದ ಹೊರಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts