More

    ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಒಪ್ಪಿಗೆ

    ಚೆನ್ನೈ: ಕರೊನಾದಿಂದಾಗಿ ದೇಶದೆಲ್ಲೆಡೆ ವಿಧಿಸಲಾಗಿದ್ದ ಲಾಕ್​ಡೌನ್​ ಕ್ರಮೇಣ ಸಡಿಲಗೊಂಡರೂ, ಚಿತ್ರಮಂದಿರಗಳಿಗೆ ಮಾತ್ರ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಅಕ್ಟೋಬರ್​ 15ರಿಂದ ಚಿತ್ರಪ್ರದರ್ಶನ ಪ್ರಾರಂಭಿಸಬಹುದು ಎಂಬ ಅನುಮತಿ ನೀಡಲಾಗಿತ್ತಾದರೂ, ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.

    ಇದನ್ನೂ ಓದಿ: ಕಂಗನಾ ಚಿತ್ರಕ್ಕೆ ಜಪಾನ್​ ಛಾಯಾಗ್ರಾಹಕ …

    ಎಲ್ಲಿಯವರೆಗೂ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶವಿಲ್ಲವೋ, ಅಲ್ಲಿಯವರೆಗೂ ನಿರೀಕ್ಷಿತ ಮತ್ತು ದೊಡ್ಡ ಸ್ಟಾರ್​ಗಳ ಚಿತ್ರಗಳು ಬಿಡುಗಡೆಯಾಗುವುದಿಲ್ಲ ಮತ್ತು ಎಲ್ಲಿಯವರೆಗೂ ನಿರೀಕ್ಷಿತ್ ಚಿತ್ರಗಳ ಬಿಡುಗಡೆ ಸಾಧ್ಯವಿಲ್ಲವೋ, ಅಲ್ಲಿಯವರೆಗೂ ಚಿತ್ರಮಂದಿರಗಳು ಭರ್ತಿಯಾಗುವಂತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಇದನ್ನು ಮನಗಂಡಿರವ ತಮಿಳುನಾಡು ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದೆ. ತಕ್ಷಣಕ್ಕೆ ಜಾರಿಗೆ ಬರುವಂತೆ, ತಮಿಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲೂ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ಇದರಿಂದ ಚಿತ್ರರಂಗದವರು ನಿಟ್ಟುಸಿರುಬಿಟ್ಟಿದ್ದು, ಮುಂದಿನ ದಿನಗಳಲ್ಲಿ ಹಲವು ದೊಡ್ಡ ಬಜೆಟ್​ನ ತಮಿಳು ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.

    ಇದನ್ನೂ ಓದಿ: ಕೆಜಿಎಫ್​ ಚಾಪ್ಟರ್​ 2’ ಯೂನಿವರ್ಸಲ್ ಟೀಸರ್!; ಶುರುವಾಯ್ತು ದಿನಗಣನೆ

    ಇತ್ತೀಚೆಗಷ್ಟೇ, ವಿಜಯ್​ ಅಭಿನಯದ ‘ಮಾಸ್ಟರ್​’ ಚಿತ್ರವು ಜನವರಿ 13ಕ್ಕೆ ಬಿಡುಗಡೆಯಾಗಲಿದೆ ಎಂದು ಘೋಷಣೆಯಾಗಿತ್ತು. ಅಷ್ಟೇ ಅಲ್ಲ, ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅನುಮತಿ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಕರೊನಾ ಕೇಸ್​ಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

    ಆರು ವರ್ಷದಲ್ಲಿ ಅಕ್ಷಯ್ ಕುಮಾರ್ ಗಳಿಕೆ ಎಷ್ಟು ಸಾವಿರ ಕೋಟಿ ಗೊತ್ತ!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts