More

    ‘ಕರೊನಾವನ್ನು ಮೋದಿಯವರು ಬಳಸಿಕೊಳ್ಳುತ್ತಿದ್ದಾರೆ’ ಎಂದ ಕಾಂಗ್ರೆಸ್​ಗೆ ‘ನಾವು ಇಟಲಿಯಿಂದ ಬಂದ ವೈರಸ್​ ವಿರುದ್ಧ ಹೋರಾಡ್ತಿದ್ದೇವೆ’ ಎಂದು ತಿರುಗೇಟು ನೀಡಿದ ಬಿಜೆಪಿ

    ನವದೆಹಲಿ: ಇಡೀ ದೇಶ ಕರೊನಾ ವೈರಸ್​ ವಿರುದ್ಧ ಒಗ್ಗಟ್ಟಾಗಿ ನಿಂತು ಹೋರಾಡುತ್ತಿದೆ. ಎಲ್ಲ ಪಕ್ಷದವರೂ ಕರೊನಾ ನಿಯಂತ್ರಣಕ್ಕಾಗಿ ಒಟ್ಟಾಗಿದ್ದಾರೆ. ಆದರೆ ಈ ಮಧ್ಯೆ ತಮಿಳುನಾಡು ರಾಜ್ಯ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಕೆ.ಎಸ್​. ಅಳಗಿರಿ ಅವರು ಅದರಲ್ಲೂ ರಾಜಕೀಯ ಮಿಶ್ರಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕರೊನಾ ವೈರಸ್​ನ್ನು ಬಳಸಿಕೊಳ್ಳುತ್ತಿದ್ದಾರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಭಾರತ ಹಾಗೂ ತಮಿಳುನಾಡಿನಲ್ಲಿ ಕರೊನಾ ವೈರಸ್​ನ್ನು ಎದುರಿಸಲು ನಾವೆಲ್ಲರೂ ಸಿದ್ಧರಾಗಿರಬೇಕು. ಆದರೆ ನನಗೆ ವೈಯಕ್ತಿಕವಾಗಿ ಒಂದು ಅನುಮಾನ ಕಾಡುತ್ತಿದೆ. ಇಷ್ಟು ದಿನ ಬಹುದೊಡ್ಡ ಗಲಾಟೆಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮೋದಿ ಸರ್ಕಾರ ಈ ಕರೊನಾ ವೈರಸ್​ ಅಸ್ತ್ರವನ್ನು ಬಳಸಿಕೊಳ್ಳಬಹುದು. ನಾನೇನು ಕರೊನಾ ವೈರಸ್​ನ್ನು ರಾಜಕೀಯಗೊಳಿಸುತ್ತಿಲ್ಲ. ಇದೊಂದು ಬಹುದೊಡ್ಡ ಸಮಸ್ಯೆ ಹೌದು. ಆದರೂ ಮೋದಿ ಸರ್ಕಾರ ಸಿಎಎ ವಿರೋಧಿ ಪ್ರತಿಭಟನೆಯ ವಿರುದ್ಧ ಈ ವೈರಸ್​ನ್ನು ಬಳಸಿಕೊಳ್ಳಬಹುದು ಎಂಬುದು ನನ್ನ ಸಂಶಯ ಎಂದು ಹೇಳಿದ್ದಾರೆ.

    ಅಳಗಿರಿ ಅವರ ಹೇಳಿಕೆಗೆ ಬಿಜೆಪಿ ಕೂಡ ಅಷ್ಟೇ ತೀವ್ರವಾಗಿ ಪ್ರತಿಕ್ರಿಯೆ ನೀಡಿದೆ. ತಮಿಳುನಾಡಿನ ಬಿಜೆಪಿಯ ಮಾಧ್ಯಮ ಸಲಹೆಗಾರ ನಾರಾಯಣ ತಿರುಪತಿ ಅಳಗಿರಿಯವರ ಮಾತನ್ನು ತೀವ್ರವಾಗಿ ಖಂಡಿಸಿದ್ದು, ಇದೊಂದು ಹಾಸ್ಯಾಸ್ಪದ ಹೇಳಿಕೆ ಎಂದಿದ್ದಾರೆ. ಕಾಂಗ್ರೆಸ್ ನಾಯಕರಿಂದ ಮಾತ್ರ ಇಂತಹ ಕೀಳುಮಟ್ಟದ ಹೇಳಿಕೆಗಳನ್ನು ನಾವು ನಿರೀಕ್ಷೆ ಮಾಡಬಹುದು. ನಾವು ಇಟಲಿಯಿಂದ ಬಂದಿರುವ ಕರೊನಾ ವೈರಸ್​ ವಿರುದ್ಧ ಹೋರಾಡುತ್ತಿದ್ದೇವೆ ಎಂಬುದನ್ನು ಕೆ.ಎಸ್​.ಅಳಗಿರಿ ಅರ್ಥ ಮಾಡಿಕೊಳ್ಳಬೇಕು ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್​)

    ಮುಖ್ಯಮಂತ್ರಿ ಯಡಿಯೂರಪ್ಪನವರ ಭೇಟಿ ಈಗ ಮೊದಲಿನಷ್ಟು ಸುಲಭವಲ್ಲ…ಸಿಎಂ ಕಚೇರಿಯ ಕಟ್ಟುನಿಟ್ಟಿನ ಸೂಚನೆಗಳಿವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts