More

    ಗಜೇಂದ್ರಗಡ ತಾಲೂಕು ಕಚೇರಿಗಳು ಶೀಘ್ರ ಆರಂಭ

    ಗಜೇಂದ್ರಗಡ: ಪಟ್ಟಣದಲ್ಲಿ ಶೀಘ್ರವೇ ತಾಲೂಕು ಮಟ್ಟದ ಕಚೇರಿಗಳು ಕಾರ್ಯಾರಂಭವಾಗಲಿವೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

    ಪಟ್ಟಣದ ಕುಷ್ಟಗಿ ರಸ್ತೆಯ ಗಾಳಿ ಅವರ ವಾಣಿಜ್ಯ ಮಳಿಗೆಯಲ್ಲಿ ನೂತನ ಉಪಖಜಾನೆ ಕಾರ್ಯಾಲಯವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

    ‘ಪ್ರಕೃತಿ ವಿಕೋಪ ಹಾಗೂ ಕರೊನಾ ಸೇರಿದಂತೆ ಕೆಲ ಸಂಕಷ್ಟಗಳಿಂದಾಗಿ ನಿಗದಿತ ಸಂದರ್ಭದಲ್ಲಿ ಪಟ್ಟಣದಲ್ಲಿ ತಾಲೂಕು ಕೇಂದ್ರಗಳ ಆರಂಭಕ್ಕೆ ಹಿನ್ನಡೆಯಾಗಿದೆ. ಆದರೆ, ಈಗಾಗಲೇ ತಹಸೀಲ್ದಾರ್, ತಾಪಂ ಕಚೇರಿಗಳ ಸೇವೆ ಆರಂಭವಾಗಿದೆ. ಮಿನಿ ವಿಧಾನಸೌಧ, ನ್ಯಾಯಾಲಯ ಮತ್ತಿತರ ಕಟ್ಟಡಗಳ ನಿರ್ವಣಕ್ಕೆ ಜಾಗ ಕಾಯ್ದಿರಿಸುವ ಜತೆಗೆ ಮೊದಲ ಹಂತದ ಅನುದಾನ ಬಿಡುಗಡೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಹೀಗಾಗಿ ಸರ್ಕಾರದ ಯೋಜನೆಗಳ ಲಾಭವನ್ನು ಸಕಾಲದಲ್ಲಿ ತಲುಪಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

    ಪುರಸಭೆ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಸದಸ್ಯರಾದ ಕನಕಪ್ಪ ಅರಳಿಗಿಡದ, ರೂಪ್ಲೇಶ ರಾಠೋಡ, ಶರಣಪ್ಪ ಉಪ್ಪಿನಬೆಟಗೇರಿ, ಯಮನಪ್ಪ ತಿರಕೋಜಿ, ಅಶೋಕ ವನ್ನಾಲ, ಬಿ.ಎಂ. ಸಜ್ಜನರ, ಶಂಕರ ಇಂಜನಿ, ರವಿ ಶಿಂಗ್ರಿ, ಗುಲಾಂ ಹುನಗುಂದ, ಬಾಳು ಗೌಡರ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts