More

    ಸತ್ಸಗದಿಂದ ಸಜ್ಜನ ವ್ಯಕ್ತಿಯಾಗಲು ಸಾಧ್ಯ; ಪ್ರಕಾಶ ಕೋಳಿವಾಡ

    ರಾಣೆಬೆನ್ನೂರ: ಸತ್ಸಂಗದಿಂದ ಎಂತಹ ವ್ಯಕ್ತಿಯಾಗಿದರೂ ಸಜ್ಜನ ವ್ಯಕ್ತಿಯಾಗಿ ಪರಿವರ್ತನೆ ಹೊಂದಲು ಸಾಧ್ಯ ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಸಾಕ್ಷಿಯಾಗಿದ್ದಾರೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
    ನಗರದ ತಾಪಂ ಸಭಾಭವನದಲ್ಲಿ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ದರೋಡೆಕೋರನಾಗಿದ್ದ ರತ್ನಾಕರನು ನಾರದ ಮುನಿಗಳ ಉಪದೇಶದಿಂದ ಮಹರ್ಷಿಯಾಗಿ ರಾಮಾಯಣದಂತಹ ಮೇರು ಕೃತಿಯನ್ನು ರಚಿಸಿದರು. ಮಹಾತ್ಮರು, ಶರಣರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಅವರು ಎಲ್ಲ ಸಮಾಜದವರಿಗೂ ಆದರ್ಶಪ್ರಾಯರು. ರಾಮಾಯಣ ನಮಗೆ ಸಹನೆ, ತಾಳ್ಮೆ, ಭಾತೃತ್ವ, ಪಿತೃವಾಕ್ಯ ಪರಿಪಾಲನೆಯಂತಹ ಸಂಗತಿಗಳನ್ನು ತಿಳಿಸಿಕೊಟ್ಟಿದೆ. ಆದ್ದರಿಂದ ಅದರಲ್ಲಿನ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವಾಲ್ಮೀಕಿಯವರಿಗೆ ಗೌರವ ಸಲ್ಲಿಸಬೇಕಾಗಿದೆ ಎಂದರು.
    ಮಹರ್ಷಿ ವಾಲ್ಮೀಕಿ ಜೀವನ ಕುರಿತು ತಾಲೂಕು ಕಸಾಪ ಕಾರ್ಯದರ್ಶಿ ಜಗದೀಶ ಹುಳ್ಳಾಳ ಉಪನ್ಯಾಸ ನೀಡಿದರು. ಸಮಾರಂಭಕ್ಕೂ ಮುನ್ನ ನಗರದ ತಳವಾರ ಗಲ್ಲಿ ಬಳಿಯಿಂದ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಮೆರವಣಿಗೆ ಮೂಲಕ ತಾಪಂ ಕಚೇರಿವರೆಗೆ ತರಲಾಯಿತು.
    ನಗರಸಭೆ ಸದಸ್ಯರಾದ ಪ್ರಭಾವತಿ ತಿಳವಳ್ಳಿ, ಪ್ರಕಾಶ ಪೂಜಾರ, ಜಯಶ್ರೀ ಪಿಸೆ, ಶಶಿಧರ ಬಸೇನಾಯ್ಕರ, ಕೆಸಿಸಿ ಬ್ಯಾಂಕ್ ನಿರ್ದೇಶಕ ತಿರಪತಿ ಅಜ್ಜನವರ, ಮಳ್ಳೆಪ್ಪ ನಿಂಗಜ್ಜನವರ, ಸಣ್ಣತಮ್ಮಪ್ಪ ಬಾರ್ಕಿ, ಬಸವರಾಜ ತಳವಾರ, ಚಂದ್ರಣ್ಣ ಬೇಡರ, ಹನುಮಂತಪ್ಪ ಬ್ಯಾಲದಹಳ್ಳಿ, ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ, ನೀಲಕಂಠಪ್ಪ ಕುಸಗೂರ, ತಹಸೀಲ್ದಾರ ಹನುಮಂತಪ್ಪ ಶಿರಹಟ್ಟಿ, ಬಿಇಒ ಎಂ.ಎಚ್. ಪಾಟೀಲ, ತಾಪಂ ಇಒ ಸುಮಲತಾ ಎಸ್.ಪಿ. ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts