More

    ತಾಲೂಕು ಮಟ್ಟದ ಮೊದಲ ಮಹಾವಿದ್ಯಾಲಯ

    ಸಿಂಧನೂರು: ಉತ್ತರ ಕರ್ನಾಟಕದಲ್ಲಿ ಶಿಕ್ಷಣಕ್ಷೇತ್ರ ವೇಗವಾಗಿ ಬೆಳೆಯುತ್ತಿರುವುದರಿಂದ ಹಿಂದುಳಿದ ಪಟ್ಟದಿಂದ ದೂರ ಸರಿಯುತ್ತಿರುವುದು ಶ್ಲಾಘನೀಯ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

    ಇದನ್ನೂ ಓದಿ: ಆದರ್ಶ ಶಿಕ್ಷಣ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರಕವಿ ಕುವೆಂಪುರ ಜನ್ಮ ಶತಮಾನೋತ್ಸವ ಆಚರಣೆ

    ನಗರದ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಸುವರ್ಣ ಸಾಂಸ್ಕೃತಿಕ ಮಹೋತ್ಸವ ಹಾಗೂ ‘ಮುನ್ನುಡಿ ಮಣಿ ತೋರಣ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

    ಉ.ಕ ಭಾಗದಲ್ಲಿಯೇ ಮೊಟ್ಟ ಮೊದಲ ತಾಲೂಕು ಮಟ್ಟದ ಮಹಾವಿದ್ಯಾಲಯ ಆಗಿದ್ದು, ಆರಂಭದಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸಿದ್ದರು. ಈಗ ಅದೇ ಮಹಾವಿದ್ಯಾಲಯದಲ್ಲಿ 40ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಜ್ಞಾನ ದಾಸೋಹ ಪಡೆದಿರುವುದು ಹೆಮ್ಮೆಯ ಸಂಗತಿ.

    ಶಿಕ್ಷಣ ಪ್ರೇಮಿಯಾಗಿದ್ದ ಮಾಜಿ ಶಾಸಕ ಅಮರೇಗೌಡ ಗದ್ರಟಗಿಯವರನ್ನು ಸ್ಮರಿಸಿಕೊಳ್ಳಬೇಕು. ಈ ಭಾಗದಲ್ಲಿ ಶೈಕ್ಷಣಿಕವಾಗಿ ಹಿಂದುಳಿಯಬಾರದೆಂದು ಆಶಯ ಹೊಂದಿದ್ದ ಅವರ ಬದುಕು ಆದರ್ಶ ಎಂದರು.

    ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಶಿಕ್ಷಣದಲ್ಲಿ ಜಾತಿ ವ್ಯವಸ್ಥೆಯಲ್ಲಿ ಇರಬಾರದು. ಶೈಕ್ಷಣಿಕದಲ್ಲಿನ ವರ್ತಮಾನವನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಾಮೂಹಿಕವಾಗಿ ಎಲ್ಲರಿಗೂ ಸಿಗುವಂತ ಜ್ಞಾನವಾಗಬೇಕು. ಅಂದಾಗ ನಮ್ಮ ಜಿಡ್ಡು ವ್ಯವಸ್ಥೆಗೆ ಬೆಳಕು ಸಿಗಲಿದೆಂದರು.

    ಡಿವೈಎಸ್‌ಪಿ ಎಸ್.ಬಿ.ತಳವಾರ, ನಿವೃತ್ತ ಪ್ರಾಧ್ಯಾಪಕ ಹನುಮಂತಪ್ಪ, ನಿವೃತ್ತ ಪ್ರಾಂಶುಪಾಲ ಎನ್.ಬಿ.ಸಿದ್ದಪ್ಪ , ನಿವೃತ್ತ ಪ್ರಾಂಶುಪಾಲ ಶಾಶ್ವತಸ್ವಾಮಿ ಮುಕ್ಕುಂದಿ, ವಕೀಲ ಪ್ರಹ್ಲಾದಗುಡಿ, ಸಹಾಯಕ ಪ್ರಾಧ್ಯಾಪಕ ಎಂ.ಶಿವಯ್ಯ, ಪ್ರಾಚಾರ್ಯ ಪ್ರಹ್ಲಾದರಡ್ಡಿ,

    ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ್, ನಗರಸಭೆ ಮಾಜಿ ಅಧ್ಯಕ್ಷ ಸೈಯ್ಯದ್ ಜಾಫರ ಜಹಗೀರದಾರ, ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎಚ್.ಕಂಬಳಿ, ಎಸ್.ದೇವೆಂದ್ರಗೌಡ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ವೈ.ನರೇಂದ್ರನಾಥ, ವೆಂಕನಗೌಡ ಗದ್ರಟಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts