More

    ‘ತಲ್ಕಿ’ ನಾಟಕ ಪ್ರದರ್ಶನ ಜು.21ರಂದು

    ಲೈಂಗಿಕ ಅಲ್ಪಸಂಖ್ಯಾತರು ಸ್ಥಾಪಿಸಿರುವ ಬೆಂಗಳೂರಿನ ಪಯಣ ಸಂಸ್ಥೆ ವತಿಯಿಂದ ಜು.21ರಂದು ಸಂಜೆ 6.30ಕ್ಕೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಲೈಂಗಿಕ ಅಲ್ಪಸಂಖ್ಯಾತರೇ ಅಭಿನಯಿಸುತ್ತಿರುವ ‘ತಲ್ಕಿ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕಿ ಚಾಂದಿನಿ ತಿಳಿಸಿದರು.

    ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದ ನೋವು, ನಲಿವು, ಸಂಸ್ಕೃತಿಯನ್ನು ಈ ನಾಟಕ ಒಳಗೊಂಡಿದೆ. ನಟಿಸುತ್ತಿರುವವರೆಲ್ಲರೂ 50 ವರ್ಷ ಮೀರಿದವರೇ ಆಗಿದ್ದಾರೆ. ನಾಟಕದ ಕೆಲ ಸನ್ನಿವೇಶಗಳಲ್ಲಿ ಈ ಸಮುದಾಯದವರೇ ಬಳಸುವ ವಿಶಿಷ್ಟವಾದ ಲಿಪಿ ಇಲ್ಲದ ಭಾಷೆ ಬಳಕೆಯೂ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆ ವೇಳೆ ಲೈಂಗಿಕ ಅಲ್ಪಸಂಖ್ಯಾತರಿಗೂ ಮಾನ್ಯತೆ ನೀಡಿರುವುದು ಸಂತಸ ತಂದಿದೆ. ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣದ ಸೌಲಭ್ಯವಿದೆ. ಅಲ್ಲದೆ, ಗೃಹಲಕ್ಷ್ಮೀ ಯೋಜನೆಯ ಪ್ರಯೋಜನವೂ ದೊರೆಯುತ್ತಿದೆ. ಹೀಗಾಗಿ ಕೊನೆಗೂ ಲೈಂಗಿಕ ಅಲ್ಪಸಂಖ್ಯಾತರನ್ನು ಮಹಿಳೆ ಎಂದು ಗುರುತಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸವಿತಾ, ತ್ರಿಮೂರ್ತಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts