More

    ಟಾಕ್​ ಆಫ್​ ದಿ ಟೌನ್​ ಆದ ಲಲನೆಯರು; ಒಂದೇ ವೇದಿಕೆಯಲ್ಲಿ 40 ಸೂಪರ್ ಮಾಡೆಲ್ಸ್​

    ಬೆಂಗಳೂರು: ಕರೊನಾ ಆತಂಕ ದೂರ ಆಗುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ಫ್ಯಾಷನ್​ ಕಲರವ ಶುರುವಾಗಿದ್ದು, ಸಿನಿಮಾ ನಟ-ನಟಿಯರು, ಮಾಡೆಲ್​ಗಳು ಸೇರಿದಂತೆ ಹಲವರು ಟಾಕ್​ ಆಫ್​ ದಿ ಟೌನ್​ ಆಗಿದ್ದಾರೆ. ಮಾತ್ರವಲ್ಲ, ಒಂದೇ ವೇದಿಕೆಯಲ್ಲಿ 40 ಸೂಪರ್ ಮಾಡೆಲ್​ಗಳ ಮಾರ್ಜಾಲ ನಡಿಗೆ ಕಣ್ಮನ ಸೂರೆಗೊಂಡಿದೆ.

    ವೈಟ್​​ಫೀಲ್ಡ್​ನ ಮ್ಯಾರಿಯೆಟ್ ಹೋಟೆಲ್​ನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ‘ಟಾಕ್ ಆಫ್ ದಿ ಟೌನ್-2022’ ಫ್ಯಾಷನ್ ವೀಕ್ ಈ ಎಲ್ಲದ್ದಕ್ಕೂ ಸಾಕ್ಷಿಯಾಯಿತು. ಈ ಫ್ಯಾಷನ್ ವೀಕ್‌ನಲ್ಲಿ 40 ಸೂಪರ್ ಮಾಡೆಲ್‌ಗಳ ಮಾದಕ ಕ್ಯಾಟ್‌ವಾಕ್ ನೋಡುಗರಲ್ಲಿ ಮಿಂಚು ಹರಿಸಿತು. ಜಗಮಗಿಸುವ ವೇದಿಕೆ, ಮನಮೋಹಕ ಸಂಗೀತ, ಅದರ ತಾಳಕ್ಕೆ ತಕ್ಕಂತೆ ಲಲನೆಯರ ಮಾರ್ಜಾಲ ನಡಿಗೆ ಫ್ಯಾಷನ್ ಪ್ರಿಯರನ್ನು ಮಂತ್ರ ಮುಗ್ಧಗೊಳಿಸಿತು.

    ಜಯಂತಿ ಬಲ್ಲಾಳ್, ರೇಷ್ಮಾ ಕುನ್ಹಿ, ಸಮಂತಾ ಅರ್ಪಣಾ, ಮಾನವ್, ವೈಲ್ಡ್‌ಕ್ಯಾಟ್ ಮುಂತಾದ ಪ್ರಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್‌ಗಳು ವಿನ್ಯಾಸಗೊಳಿಸಿದ ದೇಶೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಹಲವು ಬಗೆಯ ನೂತನ ಶೈಲಿಯ ದಿರಿಸು, ಆಭರಣಗಳನ್ನು ಧರಿಸಿ ಮಾಡೆಲ್‌ಗಳು ರ‍್ಯಾಂಪ್ ಮೇಲೆ ಬಳುಕುತ್ತ ಹೆಜ್ಜೆ ಹಾಕಿದರು.

    ಇದನ್ನೂ ಓದಿ: ಅಪ್ಪು ಜನ್ಮದಿನದಂದು ‘ಜೇಮ್ಸ್​’ ಉತ್ಸವ; 31 ಕಟೌಟ್ಸ್​, ಹೆಲಿಕಾಪ್ಟರ್​​ನಲ್ಲಿ ಹೂಮಳೆ; ಇನ್ನೇನಿರಲಿದೆ ಅಲ್ಲಿ?

    ಸ್ಯಾಂಡಲ್‌ವುಡ್ ತಾರೆಯರಾದ ಶ್ವೇತಾ ಶ್ರೀವಾತ್ಸವ್, ಇತಿ ಆಚಾರ್ಯ, ಕಾರುಣ್ಯರಾಮ್, ಶ್ವೇತಾ ನಂದಿತಾ, ಕಾರ್ತಿಕ್ ಜಯರಾಮ್, ಬಾಲಿವುಡ್ ನಟ ಕೀತ್ ಸಿಕ್ವೇರಾ ವಿವಿಧ ಡಿಸೈನರ್ಸ್ ಗಳಿಗೆ ಶೋಸ್ ಟಾಪಾರ್ ಆಗಿ ಹೆಜ್ಜೆ ಹಾಕಿ ಟಾಕ್ ಆಫ್ ದಿ ಟೌನ್ ಫ್ಯಾಷನ್‌ ಶೋಗೆ ಮತ್ತಷ್ಟು ರಂಗು ತುಂಬಿದರು. ಟಗರು ಖ್ಯಾತಿಯ ಕಾಕ್ರೋಚ್ ಸುಧಿ ಸೇರಿ ಹಲವು ಸೆಲೆಬ್ರಿಟಿಗಳು ಈ ಫ್ಯಾಷನ್‌ ಶೋ ಕಣ್ತುಂಬಿಕೊಂಡರು.

    ಟಾಕ್​ ಆಫ್​ ದಿ ಟೌನ್​ ಆದ ಲಲನೆಯರು; ಒಂದೇ ವೇದಿಕೆಯಲ್ಲಿ 40 ಸೂಪರ್ ಮಾಡೆಲ್ಸ್​

    ಈ ವೇಳೆ ಮಾತನಾಡಿದ ನಟಿಯರಾದ ಕಾರುಣ್ಯರಾಮ್ ಹಾಗೂ ಇತಿ ಆಚಾರ್ಯ, ಮಹಿಳೆಯರೆಲ್ಲರೂ ಒಟ್ಟಿಗೆ ಕೂಡಿ ಈ ಫ್ಯಾಷನ್ ಶೋ ಆಯೋಜಿಸಿದ್ದು, ಸಖತ್ ಖುಷಿ ತಂದಿದೆ. ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲ ಅದ್ಭುತಗಳನ್ನು ಮಾಡಬಹುದು ಎಂಬುದನ್ನು ಶೋನ ಆಯೋಜಕಿ ನಂದಿನಿ ನಾಗರಾಜ್ ಮಾಡಿ ತೋರಿಸಿದ್ದಾರೆ ಎಂದರು.

    ಟಾಕ್​ ಆಫ್​ ದಿ ಟೌನ್​ ಆದ ಲಲನೆಯರು; ಒಂದೇ ವೇದಿಕೆಯಲ್ಲಿ 40 ಸೂಪರ್ ಮಾಡೆಲ್ಸ್​

    ಫ್ಯಾಷನ್ ವೀಕ್‌ನ ಆಯೋಜಕಿ ನಂದಿನಿ ನಾಗರಾಜ್ ಮಾತನಾಡಿ, ಒಳ್ಳೆಯ ಡಿಸೈನ್ಸ್ ಮತ್ತು ಡೈಮಂಡ್ ಕಲೆಕ್ಷನ್‌ಗಳನ್ನು ಒಂದೇ ವೇದಿಕೆಯಲ್ಲಿ ತೋರಿಸಬೇಕೆಂಬ ಹಂಬಲದಿಂದ ಈ ಶೋ ಆಯೋಜಿಸಲಾಗಿತ್ತು. ವಿಶ್ವಮಟ್ಟದ ಈ ಫ್ಯಾಷನ್ ಶೋಗೆ ಸ್ಯಾಂಡಲ್‌ವುಡ್, ಬಾಲಿವುಡ್ ಸೇರಿ ಎಲ್ಲೆಡೆಯಿಂದ ನಮಗೆ ಒಳ್ಳೆಯ ಸ್ಪಂದನೆ ಲಭಿಸಿದೆ ಎಂದರು.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಚೆನ್ನೈನ ಕರುಣ್ ರಾಮನ್ ಈ ಫ್ಯಾಷನ್‌ ಶೋನ ಡೈರೆಕ್ಟ್ ಮಾಡಿದ್ದು, ಧ್ರುವ ಪ್ರೊಡಕ್ಷನ್ ಪಾರ್ಟ್‌ನರ್ ಆಗಿದ್ದರು. ಸದಾಶಿವನಗರದ ಗಣೇಶ್ ಗೋಲ್ಡ್ ಆ್ಯಂಡ್​ ಡೈಮಂಡ್ ಜುವೆಲ್ಲರಿ, ಕೀರ್ತಿಲಾಲ್ಸ್ ಡೈಮಂಡ್ಸ್ ಆ್ಯಂಡ್​ ಗೋಲ್ಡ್ ಜ್ಯುವೆಲ್ಲರಿ ಈ ಫ್ಯಾಷನ್ ವೀಕ್‌ನ ಸಹ ಪ್ರಾಯೋಜಕರಾಗಿದ್ದರು.

    ನಿವೃತ್ತನಾಗಿದ್ರೂ ಲಂಚಕ್ಕಾಗಿ ಹೊರಗುತ್ತಿಗೆ ನೌಕರನಾಗಿ ಬಂದ; ಕಡೆಗೂ ಸಿಕ್ಕಿಬಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts