More

    ಚರ್ಚೆಗೆ ಗ್ರಾಸವಾದ ಬಾಲಕಿ ಬಿಡುಗಡೆ ಪ್ರಕರಣ

    ಗೋಕಾಕ: ನಗರದಲ್ಲಿ ಆತಂಕ ಮೂಡಿಸಿದ್ದ ಭಜಂತ್ರಿ ಗಲ್ಲಿಯ ಎಂಟು ವರ್ಷದ ಬಾಲಕಿಗೆ ಕರೊನಾ ಸೋಂಕು ತಗುಲಿದ್ದ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಬಾಲಕಿಯನ್ನು ಏಳು ದಿನ ಹೋಂ ಕ್ವಾರಂಟೈನ್‌ಗೆ ಸೂಚಿಸಿ ಬಿಡುಗಡೆಗೊಳಿಸಿದ್ದು, ಜನರಲ್ಲಿ ಸಂಶಯಕ್ಕೆ ಎಡೆಮಾಡಿದೆ. ಬಾಲಕಿಯ ಸಂಪರ್ಕಕ್ಕೆ ಬಂದ 33 ಜನ ಇನ್ನೂ ಗೋಕಾಕದಲ್ಲಿ ಕ್ವಾರಂಟೈನ್‌ಲ್ಲಿದ್ದಾರೆ.

    ಗೋಕಾಕ ನಗರದ ಭಜಂತ್ರಿ ಗಲ್ಲಿ, ತಾಲೂಕಿನ ಕೌಜಲಗಿಯಲ್ಲಿ ಬಾಲಕಿಯ ಸಂಪರ್ಕಕ್ಕೆ ಬಂದಿರುವ ಜನ ಬಾಲಕಿಯ ವೈದ್ಯಕೀಯ ವರದಿಯನ್ನೇ
    ಪ್ರಶ್ನಿಸುತ್ತಿದ್ದಾರೆ. ಆಡಳಿತ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಪಾಸಿಟಿವ್ ವರದಿ ಬಂದ ಬಾಲಕಿಯನ್ನು ಬಿಡುಗಡೆಗೊಳಿಸಿ ನಮ್ಮನ್ನು ಏಕೆ ಕ್ವಾರಂಟೈನ್‌ನಲ್ಲಿ ಇಟ್ಟಿದ್ದೀರಿ ಎಂದು ವಾದಿಸುತ್ತಿದ್ದಾರೆ.

    ತಾಲೂಕು ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ, ಜು.1 ರ ಸರ್ಕಾರದ ಹೊಸ ನಿಯಮಾವಳಿ ಪ್ರಕಾರ ಬಾಲಕಿಯನ್ನು ಬಿಡುಗಡೆ ಮಾಡಲಾಗಿದೆ. ಜೂ.23 ರಂದು ಆಕೆಯ ಗಂಟಲು ಸ್ವಾೃಬ್ ಟೆಸ್ಟ್ ತೆಗೆದುಕೊಳ್ಳಲಾಗಿತ್ತು. 10 ದಿನಗಳ ನಂತರ ಆಕೆಗೆ ಯಾವುದೇ ಕರೊನಾ ಲಕ್ಷಣಗಳಿಲ್ಲದಿದ್ದರೆ ಬಿಡುಗಡೆಮಾಡಬೇಕು ಎಂಬುದು ನಿಯಮ. ಆ ಪ್ರಕಾರ ಬಾಲಕಿಯನ್ನು ಬಿಡುಗಡೆಗೊಳಿಸಲಾಗಿದೆ. ಅಂತೆಯೇ ಆಕೆಯ ಸಂಪರ್ಕಕ್ಕೆ ಬಂದ ಈಗ ಕ್ವಾರಂಟೈನ್‌ಲ್ಲಿರುವ ಜನರ ಸ್ವಾೃಬ್ ತೆಗೆದುಕೊಂಡು ವರದಿ ಬಂದ ನಂತರ ಅವರ ಬಿಡುಗಡೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    2,387 ಜನರ ವರದಿ ಬಾಕಿ: ಬೆಳಗಾವಿ: ಕರೊನಾ ವೈರಸ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 2,387 ಜನರ ಗಂಟಲು ದ್ರವದ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಜಿಲ್ಲೆಯಲ್ಲಿ 28,989 ಜನರ ಮೇಲೆ ನಿಗಾ ವಹಿಸಲಾಗಿದೆ. 8,627 ಜನರು 14 ದಿನ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 74 ಜನರನ್ನು ಐಸೋಲೇಟೆಡ್ ವಾರ್ಡ್‌ನಲ್ಲಿರಿಸಲಾಗಿದೆ.

    5,805 ಜನ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 14,483 ಜನ 28 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 27,693 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದೆ. 24,349 ಮಾದರಿಗಳು ನೆಗೆಟಿವ್ ಬಂದಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts