More

    ಪ್ರತಿಭೆ ಅನಾವರಣಕ್ಕೆ ವೇದಿಕೆ ಅಗತ್ಯ

    ನಿಪ್ಪಾಣಿ: ನನ್ನ ಜನ್ಮದಿನ ನಿಮಿತ್ತ ಯುವ ಪ್ರತಿಭೆಗಳನ್ನು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಹ್ಯಾಜ್ ಟ್ಯಾಲೆಂಟ್ ಆಯೋಜಿಸಿದ್ದೇವೆ. ಪ್ರತಿಭೆ ಅನಾವರಣಗೊಳಿಸಲು ಜೊಲ್ಲೆ ಗ್ರೂಪ್ ಉತ್ತಮ ವೇದಿಕೆಯಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಅಭಿಪ್ರಾಯಪಟ್ಟರು.

    ತಾಲೂಕಿನ ಮಾಂಗೂರ ಗ್ರಾಮದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಜನ್ಮದಿನ ಪ್ರಯುಕ್ತ ಜೊಲ್ಲೆ ಗ್ರೂಪ್ ವತಿಯಿಂದ ಈಚೆಗೆ ಏರ್ಪಡಿಸಿದ್ದ ಕಾರದಗಾ ಹ್ಯಾಜ್ ಟ್ಯಾಲೆಂಟ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.


    ಸ್ಪರ್ಧೆಯಲ್ಲಿ 75 ವರ್ಷದ ವೃದ್ಧರೂ ಸ್ಪರ್ಧಿಸುತ್ತಿರುವುದರಿಂದ ಆಯೋಜನೆ ಮಾಡಿದ್ದು ಸಾರ್ಥಕವೆನಿಸುತ್ತಿದೆ. ಸಂತಾನರಹಿತ ಮಹಿಳೆಯರು ಕನ್ಹೇರಿ ಸಿದ್ಧಗಿರಿಮಠದಲ್ಲಿರುವ ಐವಿಎ್ ಕೇಂದ್ರದ ಪ್ರಯೋಜನ ಪಡೆದುಕೊಳ್ಳುವಂತೆ ಮಹಿಳೆಯರಿಗೆ ಸಲಹೆ ನೀಡಿದರು.

    ಕನ್ಹೇರಿ ಜನನಿ ಐವಿಎ್ ಸೆಂಟರ್‌ನ ಮುಖ್ಯ ವೈದ್ಯೆ ಡಾ. ವರ್ಷಾ ಪಾಟೀಲ ಮಾತನಾಡಿ, ಹಲವಾರು ಕಾರಣಗಳಿಂದ ಅನೇಕ ಬಡ ಮಹಿಳೆಯರು, ಸಂತಾನವಿಲ್ಲದ ದಂಪತಿ ಗರ್ಭಧಾರಣೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಾಯ್ತನದಿಂದ ವಂಚಿತರಾಗಿರುವ ಹೆಣ್ಣು ಮಕ್ಕಳಿಗಾಗಿ ಕನ್ಹೇರಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹಾಗೂ ಜೊಲ್ಲೆ ಗ್ರೂಪ್ ವತಿಯಿಂದ ಜನನಿ ಐವಿಎ್ ಸೆಂಟರ್ ಪ್ರಾರಂಭಿಸಲಾಗಿದೆ. ಅತ್ಯುನ್ನತ ತಂತ್ರಜ್ಞಾನದ ಸಲಕರಣೆಗಳನ್ನು ಆಸ್ಪತ್ರೆ ಹೊಂದಿದ್ದು, ಕೇವಲ 5 ಸಾವಿರದಿಂದ 75 ಸಾವಿರ ರೂ ವೆಚ್ಚದಲ್ಲಿ ಚಿಕಿತ್ಸೆ ನೀಡಲಿದೆ ಎಂದು ತಿಳಿಸಿದರು.

    ಡಾ.ವರ್ಷಾ ಪಾಟೀಲ ಅವರನ್ನು ಶಾಸಕಿ ಶಶಿಕಲಾ ಜೊಲ್ಲೆ ಸತ್ಕರಿಸಿದರು. ಗ್ರಾಪಂ ಉಪಾಧ್ಯಕ್ಷ ನಿತೇಶ ಖೋತ, ಗ್ರಾಪಂ ಸದಸ್ಯರಾದ ಸುಜಾತಾ ಚೌಗಲೆ, ರಾಜು ಕುರಾಡೆ, ಸಂದೀಪ ಪಾಟೀಲ, ದತ್ತಾ ರಾಜಹಂಸ, ಕೃಷಿಪ್ರಿಯಾ ಮಹಿಳಾ ಎ್ಪಿಒ ಅಧ್ಯಕ್ಷೆ ಚಂದನಾ ಮುರಾಬಟ್ಟೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts