More

    ಟೇಲೆಂಡ್‌ ಭಾಗಕ್ಕೂ ಎಡದಂಡೆ ನೀರು ತಲುಪಲು ರೈತರು ಸಹಕರಿಸಲಿ; ತುಂಗಭದ್ರಾ ಕಾಡಾ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಮನವಿ

    ಸಿಂಧನೂರು: ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗಳಿಗೆ 4,150 ಕ್ಯೂಸೆಕ್ ನೀರು ಬಿಡಲಾಗಿದ್ದು, ಇದರ ಸದುಪಯೋಗ ನಾಲೆಯ ಪ್ರತಿಯೊಬ್ಬ ರೈತರಿಗೂ ತಲುಪಬೇಕು ಎಂದು ತುಂಗಭದ್ರಾ ಕಾಡಾಧ್ಯಕ್ಷ ಆರ್. ಬಸನಗೌಡ ಮನವಿ ಮಾಡಿದ್ದಾರೆ.

    ತುಂಗಭದ್ರಾ ಜಲಾಶಯದ ಒಳ ಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಹರ್ಷದಾಯಕದ ಸಂಗತಿ. ಆ.8ರಂದು 80 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಈಗಾಗಲೇ ಜಲಾಶಯದಲ್ಲಿ 46 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಎಡದಂಡೆ ನಾಲೆಗಳಿಗೆ ಜು. 25 ರಿಂದ ನೀರು ಬಿಡಲಾಗಿದ್ದು, ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ಎಲ್ಲ ಕುಡಿವ ನೀರಿನ ಕೆರೆಗಳು ಭರ್ತಿಯಾಗಿದೆ. ಆ.3 ರಿಂದಲೆ ಎಡದಂಡೆ ಉಪಕಾಲುವೆಗಳಿಗೆ ರೈತರು ಬೆಳೆ ಬೆಳೆಯಲು ಬಿಡುಗಡೆಗೊಳಿಸಲಾಗಿದೆ. ರೈತರು ತಮ್ಮ ಹೊಲಗಳಲ್ಲಿ ಬೆಳೆಗಳನ್ನು ಬೆಳೆಯಲು ತಮಗೆ ಬೇಕಾಗುವಷ್ಟು ನೀರು ಪಡೆಯಬೇಕು. ನೀರನ್ನು ಅನಾವಶ್ಯಕವಾಗಿ ವ್ಯರ್ಥ ಮಾಡಬಾರದು.

    ಮೇಲ್ಭಾಗದ ರೈತರು ತಮ್ಮ ಬೆಳೆಗಳಿಗೆ ಬೇಕಾಗುವಷ್ಟು ನೀರು ಪಡೆದು ಕೊನೇ ಭಾಗದ ರೈತರು ಬೆಳೆ ಬೆಳೆಯಲು ನೀರು ತಲುಪಿಸಬೇಕಾಗಿರುವುದು ಪ್ರತಿಯೊಬ್ಬರ ರೈತರ ಜವಾಬ್ದಾರಿಯಾಗಿದೆ. ಅಧಿಕಾರಿಗಳಿಗೆ ಸಹಕಾರ ನೀಡಿ ಕೊನೇ ಭಾಗಕ್ಕೂ ನೀರು ತಲುಪಲು ಅನುಕೂಲ ಮಾಡಿಕೊಡಬೇಕು ಎಂದು ಹೇಳಿಕೆಯಲ್ಲಿ ರೈತರಿಗೆ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts