More

    ಕಣ್ಣಿನ ಕಾಳಜಿ ವಹಿಸಿರಿ

    ಕುಶಾಲನಗರ: ಮನುಷ್ಯನಿಗೆ ಕಣ್ಣು ಪ್ರಮುಖ ಅಂಗವಾಗಿದ್ದು, ಕಣ್ಣಿನ ಕುರಿತು ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಮಂಡೆಪಂಡ ಬೋಸ್ ಮೊಣ್ಣಪ್ಪ ಸಲಹೆ ನೀಡಿದರು.

    ಕುಶಾಲನಗರದ ಕೊಡವ ಸಮಾಜದಲ್ಲಿ ಮಂಗಳವಾರ ಮೈಸೂರಿನ ಟೈಟಾನ್ ಎಕ್ಸ್‌ಪ್ರೆಸ್ ಆಪ್ಟಿಕಲ್ಸ್ ಮತ್ತು ಕೊಡವ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಮೊಬೈಲ್ ಬಳಕೆ ಹೆಚ್ಚಾಗುತ್ತಿರುವ ಕಾರಣ ಕಣ್ಣು ದೃಷ್ಟಿ ಕ್ಷೀಣಿಸುತ್ತಿದೆ. ಅವಶ್ಯವಿದ್ದಾಗ ಮಾತ್ರ ಮೊಬೈಲ್ ಬಳಸುವಂತೆ ಸಲಹೆ ನೀಡಿದರು.

    ವೈದ್ಯೆ ಡಾ.ಸುಷ್ಮಾ ಕಣ್ಣಿನ ಜಾಗ್ರತೆಗೆ ಬೇಕಾದ ಸಲಹೆ ಬಗ್ಗೆ ವಿವರಿಸಿದರು.

    ಶಿಬಿರದಲ್ಲಿ ಒಟ್ಟು 42 ಜನರು ಕಣ್ಣು ಪರೀಕ್ಷೆ ಮಾಡಿಸಿಕೊಂಡರು.

    ಕೊಡವ ಸಮಾಜದ ಉಪಾಧ್ಯಕ್ಷ ಪುಲಿಯಂಡ ಎಂ.ಚಂಗಪ್ಪ, ಕಾರ್ಯದರ್ಶಿ ವಾಚಿಂರ ಮನು ನಂಜುಂಡ, ಖಜಾಂಚಿ ಚಿಂಗಪ್ಪ,
    ನಿರ್ದೇಶಕ ಧರಣಿ, ಕನ್ನಿಕೆ, ನಂದಾ ಸುರೇಶ್, ತಿಮ್ಮಯ್ಯ, ಮುದ್ದಪ್ಪ, ಸುಗುಣ, ಶಿವಪ್ರಸಾದ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts