More

    ಮಂಗಲಕರ ಆಚಾರವೇ ಶೋಭೆ

    ಮಂಗಲಕರ ಆಚಾರವೇ ಶೋಭೆ

    ಪ್ರಧಾನ ಇಂದ್ರಿಯವಾದ ಕಣ್ಣುಗಳನ್ನು ಸಂರಕ್ಷಿಸಿಕೊಳ್ಳಬೇಕಾದ್ದು ವ್ಯಕ್ತಿಯ ಮೂಲ ಕರ್ತವ್ಯ. ನೇತ್ರಗಳ ಆರೈಕೆ ಹೇಗೆ, ದೃಷ್ಟಿಶಕ್ತಿ ಕುಗ್ಗದಂತೆ ಎಚ್ಚರ ವಹಿಸುವ ಕುರಿತು ವಿವರವಾಗಿ ತಿಳಿಸಿರುವ ಆಯುರ್ವೆದವು ಸದ್​ವೃತ್ತವನ್ನು ತಿಳಿಹೇಳುವ ಸಂದರ್ಭದಲ್ಲಿ ಉದಯ ಹಾಗೂ ಅಸ್ತಮಾನ ಕಾಲದಲ್ಲಿ ಸೂರ್ಯನನ್ನು ದಿಟ್ಟಿಸಿ ನೋಡಬಾರದು ಎಂದು ಆದೇಶಿಸಿದೆ! ನೋಡಲು ಅಷ್ಟೇನೂ ಕಷ್ಟವಾಗದ, ಆಗಸವು ಅಂದವಾಗಿ ಕಾಣುವ ಆ ಹೊತ್ತಿನಲ್ಲಿ ಸೂರ್ಯನನ್ನು ನೋಡಲು ಹಾತೊರೆಯುವವರಿರುತ್ತಾರೆ. ಆಗ ಸೂರ್ಯನನ್ನೇ ಕೇಂದ್ರೀಕರಿಸಿ ದೃಷ್ಟಿಯನ್ನು ನೆಡದೆ ಆಗಸವನ್ನು ಸಮಗ್ರವಾಗಿ ನೋಡಿ ಆನಂದಿಸಬಹುದಲ್ಲ? ಸೂರ್ಯನ ಪ್ರಖರ ಕಿರಣಗಳಿಂದ ಕಣ್ಣುಗಳ ಶಕ್ತಿಯನ್ನು ಕಳೆದುಕೊಳ್ಳುವಂತೆ ಆಗಬಾರದೆಂಬ ಕಾಳಜಿ ಇಲ್ಲಿದೆ. ಸೂರ್ಯನು ಪ್ರಖರವಾಗಿರುವ ಸಮಯದಲ್ಲಿ ಹೇಗಿದ್ದರೂ ನೋಡುವುದು ಕಷ್ಟಕರ, ಕಣ್ಣಿಗೆ ಹಾನಿಕರ ವಿಚಾರ. ಸೂರ್ಯಗ್ರಹಣವನ್ನು ನೋಡಬಾರದೆಂಬ ಕಟ್ಟಾಜ್ಞೆಯನ್ನೂ ವಿಧಿಸಿದೆ! ಅಂದಮೇಲೆ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು ಎಂದು ಇಂದಿನ ವಿಜ್ಞಾನ ವಿಶೇಷವಾಗಿ ಹೇಳುತ್ತಿರುವುದು ಹೊಸ ವಿಚಾರವೇನಲ್ಲ. ಅಮಂಗಳಕರವಾದುದನ್ನು, ಅಹಿತಕರವಾದುದನ್ನು, ಪ್ರಜ್ವಲಿಸುತ್ತಿರುವ ಬೆಂಕಿ ಅಥವಾ ಬೆಳಕನ್ನು ಸತತವಾಗಿ ಹಾಗೂ ಸೂಕ್ಷ ್ಮಾಗಿ ದಿಟ್ಟಿಸಿ ನೋಡಬಾರದು ಎಂಬ ಎಚ್ಚರಿಕೆಯನ್ನೂ ಭಾವಪ್ರಕಾಶ ಗ್ರಂಥದಲ್ಲಿ ಕಾಣಬಹುದು.

    ಮನಸ್ಸಿಗೆ ಹಿತವಲ್ಲದ, ಅಪ್ರಶಸ್ತವಾದ ಹಾಗೂ ಹೊಳೆಯುತ್ತಿರುವ ವಸ್ತುಗಳನ್ನಾಗಲೀ ತೀಕ್ಷ್ಣವಾದ ಬೆಳಕನ್ನಾಗಲೀ ನೋಡಬಾರದು ಎಂಬ ಆಜ್ಞೆ ಮಾಡಿರುವ ಚರಕಸಂಹಿತೆ ಸದಾಚಾರದ ಬಗ್ಗೆ ಬಹಳಷ್ಟು ಬೆಳಕು ಚೆಲ್ಲಿದೆ. ಸ್ವಾಸ್ಥ್ಯನ್ನು ಬಯಸುವ ವ್ಯಕ್ತಿಯು ನಿಶ್ಚಿಂತ – ನಿರ್ಭೀತನಾಗಿರಬೇಕು, ಮಾನವಂತ – ಬುದ್ಧಿವಂತನಾಗಿರಬೇಕು, ಉತ್ಸಾಹ – ದಕ್ಷತೆ – ತಾಳ್ಮೆಯಿರಬೇಕು, ಧರ್ಮಕರ್ಮಗಳಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಆಸ್ತಿಕನಾಗಿರಬೇಕು! ಜೀವನದಲ್ಲಿ ಸರ್ವನಿಯಂತ್ರಕ ಪರಮಶಕ್ತಿಯ ಬಗ್ಗೆಯೇ ನಂಬಿಕೆಯಿಲ್ಲದಿದ್ದರೆ ಇನ್ಯಾವುದರ ಮೇಲೆ ನಂಬಿಕೆಯಿಡಲು ಸಾಧ್ಯ? ಸ್ವ ನಿಯಂತ್ರಣ ಹಾಗೂ ಸಚ್ಚಾರಿತ್ರ್ಯುಳ್ಳ ವಶ್ಯಾತ್ಮಾ ಹಾಗೂ ಧರ್ವತ್ಮಾ ಆಗಿರಲೇಬೇಕು. ಇಂದ್ರಿಯಗಳು ಹೇಳಿದಂತೆ ಕೇಳುವವನಾಗದೆ, ಚಂಚಲ ಮನಸ್ಸಿನ ದಾಸನಾಗದೆ, ಅತಿಯಾದ ಇಂದ್ರಿಯಲೋಲುಪತೆ ಇರದೆ ಬದುಕಿದರೆ ಮಾತ್ರ ಇವೆಲ್ಲವೂ ಸಿದ್ಧಿಸುತ್ತವೆ. ಕೋಪ ಬರಿಸುವ, ಹರ್ಷ ಉಕ್ಕಿ ಹರಿಸುವ, ಶೋಕದಿಂದ ಮಡುಗಟ್ಟಿಸುವ ಕೆಲಸಗಳಲ್ಲಿ ತೊಡಗುವುದೂ ಶ್ರೇಯಸ್ಕರವಲ್ಲ.

    ಇದನ್ನೂ ಓದಿ: ಕರೊನಾಕ್ಕೆ ಸಿದ್ಧವಾಗಿದೆ ಆಯುರ್ವೇದದ 4 ಮದ್ದು; ಕ್ಲಿನಿಕಲ್​ ಪ್ರಯೋಗಕ್ಕೆ ಸಿದ್ಧತೆ

    ಯಾವುದೇ ವಿಚಾರದಲ್ಲಿ ಉತ್ತಮರ ವಿರುದ್ಧ ಹೋಗಬಾರದು, ಕೆಳಗಿನವರ ಜೊತೆ ಸಲುಗೆಯೂ ಸಲ್ಲದು! ಗೌರವವಿಲ್ಲದವರ ಜೊತೆ ಇರಲೂಬಾರದು, ಇತರರಿಗೆ ಭಯ ಹುಟ್ಟಿಸುವ ಕೆಲಸದಲ್ಲೂ ತೊಡಗಬಾರದು. ರತ್ನ, ಘೃತ, ಪೂಜ್ಯರು, ಮಂಗಲವಸ್ತು ಹಾಗೂ ಹೂವುಗಳನ್ನು ಮುಟ್ಟದೆ ಮನೆಯಿಂದ ಹೊರಹೋಗಬಾರದು! ಪೂಜ್ಯ, ಮಂಗಳವಸ್ತುಗಳ ಎಡಬದಿಯಿಂದ ಹೊರಡಬಾರದು! ಇದೆಂತಹ ಮೂಢನಂಬಿಕೆ ಎನಿಸಬಹುದು. ದೇವಪೂಜಾದಿಗಳನ್ನು ಮಾಡಿ, ಹಿರಿಯರಿಗೆ ಗೌರವ ನೀಡಿ, ತುಳಸಿಗಿಡಕ್ಕೆ ಪ್ರದಕ್ಷಿಣೆ ಹಾಕಿ ಸಾಗಬೇಕೆಂದು ಮಾರ್ವಿುಕವಾಗಿ ಹೇಳಿದ್ದನ್ನು ಅರ್ಥೈಸಿಕೊಂಡರೆ ನಾವ್ಯಾರೂ ಮೂಢರಾಗುವುದಿಲ್ಲ. ಮಂಗಲಕರ ಆಚಾರವೇ ವ್ಯಕ್ತಿಗೆ ಶೀಲ ಹಾಗೂ ಶೋಭೆ.

    ಮಂಗಲಕರ ಆಚಾರವೇ ಶೋಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts