More

    ಅಪಘಾತಗಳ ತಡೆಗೆ ಕ್ರಮಕೈಗೊಳ್ಳಿ

    ಚಿತ್ರದುರ್ಗ: ಅಪಘಾತಗಳನ್ನು ನಿಯಂತ್ರಿಸಲು ಜಿಲ್ಲೆಯಲ್ಲಿರುವ ಅಪಘಾತ ವಲಯಗಳಲ್ಲಿ ಪರಿಹಾರ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಡಿಸಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಅಪಘಾತ ವಲಯಗಳಲ್ಲಿ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಕಾಮಗಾರಿಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ರಾ.ಹೆ.ಪ್ರಾಧಿಕಾರದವರು ಪ್ರಸ್ತಾ ವನೆ ಸಲ್ಲಿಸಿ ಕಾಲಹರಣ ಮಾಡುತ್ತಿದ್ದಾರೆ. ತಾತ್ಕಾಲಿಕ ಪರಿಹಾರ ಕಾಮಗಾರಿಗಳಿಗೆ 9 ತಿಂಗಳು ಬೇಕಾದರೆ, ಶಾಶ್ವತ ಕೆಲಸಗಳನ್ನು ಯಾವಾಗ ಕೈಗೆತ್ತಿಕೊಳ್ಳುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

    ಜೆಎಂಐಟಿ ವೃತ್ತ, ಬಸವೇಶ್ವರ ಆಸ್ಪತ್ರೆ, ಡಾನ್‌ಬೋಸ್ಕೊ ಶಾಲೆ ಮೊದಲಾದೆಡೆ ಅಪಘಾತ ವಲಯಗಳನ್ನು ಗುರುತಿಸಲಾಗಿದ್ದರೂ ಇಲ್ಲಿ ಪರಿಹಾರ ಕೆಲಸಗಳಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಡಿಸಿ, ಸಭೆಗೆ ಗೈರಾದ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಿಳಿಸಿದರು.

    ಎಸ್ಪಿ ಕೆ.ಪರಶುರಾಮ್ ಮಾತನಾಡಿ, ಜೆಎಂಐಟಿ ವೃತ್ತ ಬಳಿ ರಸ್ತೆ ದಾಟುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತದೆ. ಈ ವೃತ್ತವನ್ನು ಅಭಿವೃದ್ಧಿ ಪಡಿಸಿ ಸಿಗ್ನಲ್ ಲೈಟ್ ಅಳವಡಿಸಬೇಕಿದೆ ಎಂದರು.
    ರಾ.ಹೆ. 48ಕ್ಕೆ ನಿರ್ಮಿಸಿರುವ ಬೈಪಾಸ್‌ನಲ್ಲಿ ಭಾರೀ ವಾಹನಗಳು ಸಂಚರಿಸುತ್ತಿವೆ. ಆದ್ದರಿಂದಲೇ ಜೆಎಂಐಟಿ ವೃತ್ತದಿಂದ ಚಳ್ಳಕೆರೆ ಗೇಟ್‌ವರೆಗೆ ನಗರದಲ್ಲಿ ಹಾದುಹೋಗಿರುವ ಹೆದ್ದಾರಿ ನಿರ್ವಹಣೆಗೆ ಪ್ರಾಧಿಕಾರದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಬೇಸರಿಸಿದರು.

    ಬೈಪಾಸ್ ನಿರ್ಮಾಣದಿಂದಾಗಿ ನಗರದಲ್ಲಿರುವ ರಾ.ಹೆ.ಯನ್ನು ಡಿನೋಟಿಫೈ ಮಾಡಿ, ನಗರ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಲಾಗುತ್ತದೆ ಎಂಬ ರಾ.ಹೆ.ಪ್ರಾಧಿಕಾರದ ಅಧಿಕಾರಿ ರವಿತೇಜ ಪ್ರತಿಕ್ರಿಯೆಗೆ, ಇನ್ನೂ ಹಸ್ತಾಂತರವಾಗಿಲ್ಲ, ಪರಿಹಾರ ಕಾಮಗಾರಿ ಕೈಗೊಳ್ಳಿ ಎಂದು ಎಸ್ಪಿ ಸೂಚಿಸಿದರು.

    ಸಮಿತಿ ಸದಸ್ಯ ಕಾರ್ಯದರ್ಶಿ,ಲೋಕೋಪಯೋಗಿ ಇಲಾಖೆ ಇಇ ಟಿ. ಎಸ್.ಮಲ್ಲಿಕಾರ್ಜುನ್,ಆರ್‌ಟಿಒ ಪ್ರಮುಥೇಶ್,ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಸತೀಶ್‌ರೆಡ್ಡಿ,ಕುಡಾ ಆಯುಕ್ತ ಸೋಮಶೇಖರ್ ಮತ್ತಿತರ ಅಧಿಕಾರಿಗಳಿದ್ದರು.

    *ರಸ್ತೆ ಸರಿಪಡಿಸಲು ತಿಂಗಳ ಗಡುವು
    ನಗರದಾದ್ಯಂತ ಒಳಚರಂಡಿ ಕಾಮಗಾರಿಯಿಂದಾಗಿ ಉಬ್ಬು-ತಗ್ಗು ನಿರ್ಮಾಣವಾಗಿ, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಸಂಚಾರ ಠಾಣೆ ಪಿಐ ರಾಜು ಹೇಳಿದರು. ಒಂದು ತಿಂಗಳ ಒಳಗೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಡಿಸಿ ಗಡುವು ವಿಧಿಸಿದರು. ನಗರದಲ್ಲಿ ಹಿಂದಿದ್ದ 31 ಆಟೋ ನಿಲ್ದಾಣಗಳ 13ಕ್ಕೆ ಕುಸಿದಿದೆ ಎಂದು ರಾಜು ಮಾಹಿತಿ ನೀಡಿದರು. ಹೊಸ ನಿಲ್ದಾಣಗಳಿಗೆ ಸ್ಥಳ ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಡಿಸಿ ಹೇಳಿದರು.

    *ನಿರ್ಲಕ್ಷೃ ಧೋರಣೆ ಸಲ್ಲದು
    ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅವಘಡ ಸಂಭವಿಸಿದ ವೇಳೆ 108 ಆಂಬುಲೆನ್ಸ್ ಸರ್ವಿಸ್ ತಕ್ಷಣ ಸಿಗುವಂತಾಗಬೇಕು ಹಾಗೂ ಗಾಯಾಗಳುಗಳನ್ನು ಬೇರೆ ಆಸ್ಪತ್ರೆಗಳಿಗೆ ಸಾಗ ಹಾಕುವ ಧೋರಣೆ ಕೈ ಬಿಟ್ಟು ಪ್ರಾಮಾಣಿಕವಾಗಿ ಚಿಕಿತ್ಸೆ ನೀಡುವಂತೆ ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಎಸ್ಪಿ ಪರಶುರಾಮ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts