More

    ಬಂದರು ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ

    ಕಾರವಾರ: ಬಜೆಟ್​ನಲ್ಲಿ ಜಿಲ್ಲೆಯ ಮೀನುಗಾರಿಕೆ ಬಂದರುಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ರಾಜು ತಾಂಡೇಲ ಅವರು ಮೀನುಗಾರಿಕೆ ಇಲಾಖೆಯ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

    ಜಿಲ್ಲೆಯಲ್ಲಿ 130 ಕಿಲೋ ಮೀಟರ್ ಕಡಲ ತೀರವಿದೆ. ಭಟ್ಕಳ, ಹೊನ್ನಾವರ, ತದಡಿ, ಬೇಲೆಕೇರಿ ಮತ್ತು ಕಾರವಾರದಲ್ಲಿ ಮೀನುಗಾರಿಕೆ ಬಂದರುಗಳಿದ್ದರೂ ದಕ್ಷಿಣ ಕನ್ನಡ ಮತ್ತು ಉಡುಪಿ ಮಾದರಿಯಲ್ಲಿ ಅಭಿವೃದ್ಧಿಯಾಗಿಲ್ಲ. ಬಂದರುಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಎಲ್ಲ ಬಂದರುಗಳ ಸಮೀಪ ಹೂಳಿನ ಸಮಸ್ಯೆ ಇದೆ. ಹಾಗಾಗಿ, ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕೆ ಬಂದರುಗಳ ಅಧ್ಯಯನ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಿತಿಯೊಂದನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ಬಂದರುಗಳಲ್ಲಿ ಹೂಳು ತೆಗೆಯಲು ಕ್ರಮ ವಹಿಸಬೇಕು. ಬೋಟ್​ಗಳಿಂದ ಮೀನು ಇಳಿಸಲು ಕ್ರೇನ್ ವ್ಯವಸ್ಥೆ ಮಾಡಬೇಕು. ಫಿಶ್ ಲ್ಯಾಂಡಿಂಗ್ ಕೇಂದ್ರಗಳು, ಬಲೆ ದುರಸ್ತಿ ಶೆಲ್ಟರ್​ಗಳು, ಹರಾಜು ಹಾಲ್​ಗಳು ಮತ್ತು ಒಣ ಮೀನು ತಯಾರಿಕೆ

    ವೇದಿಕೆಗಳ ನಿರ್ವಣಕ್ಕೆ ರಾಜ್ಯ ಸರ್ಕಾರ ವಿಶೇಷ ಕಾರ್ಯಕ್ರಮವನ್ನು ರೂಪಿಸಬೇಕು. ಜಿಲ್ಲೆಯ ಎಲ್ಲ ಮೀನುಗಾರಿಕೆ ಬಂದರುಗಳಿಗೆ ಆಧುನಿಕ ಸ್ಪರ್ಶ ನೀಡಬೇಕು. ಮೀನುಗಾರಿಕೆ ಬಂದರುಗಳಲ್ಲಿ ಮೀನು ಹೊರುವ ಮಹಿಳೆಯರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು ಅವರಿಗೆ ವಿಶೇಷ ಪ್ಯಾಕೇಜ್ ಅಥವಾ ಆರ್ಥಿಕವಾಗಿ ಅವರಿಗೆ ನೆರವಾಗುವಂತಹ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಮೀನುಗಾರಿಕೆ ದೋಣಿಗಳ ನಿರ್ವಣಕ್ಕೆ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಯೋಜನೆಗಳನ್ನು ಹೆಚ್ಚಿಸಬೇಕು. ತೆರಿಗೆ ಮುಕ್ತ ಡೀಸೆಲ್ ಒದಗಿಸುವ ಮೂಲಕ ಮೀನುಗಾರರಿಗೆ ಇಂಧನವನ್ನು ಕೈಗೆಟುಕುವಂತೆ ಮಾಡಬೇಕು. ಮೀನುಗಾರರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಯೋಜನೆಗಳನ್ನು ಸರ್ಕಾರ ಸಿದ್ಧಪಡಿಸಬೇಕು. ಮೀನುಗಾರಿಕೆ ಬಂದರುಗಳಲ್ಲಿ ಮೀನು ಕೆಡದಂತೆ ಸಂಗ್ರಹಿಸಿಡಲು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವಂತೆ ಕೋಲ್ಡ್ ಸ್ಟೋರೇಜ್​ಗಳನ್ನು ನಿರ್ವಿುಸಬೇಕು. ಮೀನುಗಳು ಮತ್ತು ಇಲ್ಲಿಯ ಮೀನಿನ ಉತ್ಪನ್ನಗಳಿಗೆ ವಿದೇಶದಲ್ಲಿ ಸಾಕಷ್ಟು ಬೇಡಿಕೆ ಇದ್ದು, ರಫ್ತು ಮಾಡಲು ವಿಶೇಷ ಯೋಜನೆ ರೂಪಿಸುವ ಮೂಲಕ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts