More

    ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ

    ಜಮಖಂಡಿ: ಪಕ್ಷವೊಂದರ ಸಮಾವೇಶದಲ್ಲಿ ಕೆಲವು ದುಷ್ಕರ್ಮಿಗಳು ಪತ್ರಿಕೆಗಳನ್ನು ಸುಟ್ಟಿರುವುದನ್ನು ವಿರೋಧಿಸಿ ಸ್ಥಳೀಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಎಸಿ ಸಂತೋಷ ಕಾಮಗೌಡ ಹಾಗೂ ಉಪವಿಭಾಗೀಯ ಎಸ್‌ಪಿ ಶಾಂತವೀರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

    ನಗರದ ಐತಿಹಾಸಿಕ ಪೋಲೋ ಮೈದಾನದ ತಾಲೂಕು ಕ್ರೀಡಾಂಗಣದಲ್ಲಿ ಕಳೆದ ಮಾ.13 ರಂದು ಸಂಜೆ 7.00 ಗಂಟೆಗೆ ರಾಜಕೀಯ ಪಕ್ಷವೊಂದರ ಸಮಾವೇಶದಲ್ಲಿ ಎರಡು ಪತ್ರಿಕೆಗಳನ್ನು ಕೆಲವು ದುಷ್ಕರ್ಮಿಗಳು ಸುಟ್ಟು ಹಾಕಿ ಪತ್ರಿಕಾ ಸ್ವಾತಂತ್ರೃದ ಕಗ್ಗೊಲೆ ಮಾಡಿರುವ ಘಟನೆಯನ್ನು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಮಖಂಡಿ ಘಟಕ ತೀವ್ರವಾಗಿ ಖಂಡಿಸಿದೆ. ಈ ಘಟನೆ ಕುರಿತು ಕೂಡಲೇ ತನಿಖೆ ಮಾಡಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
    ತನಿಖೆಗೆ ವಿಳಂಬ ನೀತಿ ಅನುಸರಿಸಿ ದುಷ್ಕರ್ಮಿಗಳು ಪಾರಾಗುವಂತಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಮನವಿ ಸಲ್ಲಿಸಿದರು.

    ಕಾನಿಪ ಸಂಘದ ಗೌರವಾಧ್ಯಕ್ಷ ಪೀರ ಕೊಡತಿ, ಮೋಹನ ಸಾವಂತ, ಅಧ್ಯಕ್ಷ ಎಂ.ಎನ್.ನದಾಫ್, ಉಪಾಧ್ಯಕ್ಷ ಗುರುರಾಜ ಅರಕೇರಿ, ಕಾರ್ಯದರ್ಶಿ ಗೋಪಾಲ ಪಾಟೀಲ, ಖಜಾಂಚಿ ನಾಗೇಶ ಜತ್ತಿ, ಸದಸ್ಯರಾದ ಶಿವಾನಂದ ಕೊಣ್ಣೂರ, ಬಸವರಾಜ ಕಾನಗೊಂಡ, ರಾಯನಗೌಡ ಹೊನಗೌಡ, ಸಂಗಮೇಶ ಬಿರಾದಾರ, ರಫೀಕ ಮಾರ್ಕಪನಹಳ್ಳಿ, ಭೀಮಸಿ ಗುಮ್ಮಕ್ಕನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts