More

    ಟೇಲರ್ ಕಲ್ಯಾಣ ಮಂಡಳಿ ಜಾರಿಗೆ ಒತ್ತಾಯ

    ಮುಂಡರಗಿ: ಕಟ್ಟಡ ಕಾರ್ವಿುಕರ ಕಲ್ಯಾಣ ಮಂಡಳಿಯ ಮಾದರಿಯಲ್ಲಿ ಟೇಲರ್ ಕಲ್ಯಾಣ ಮಂಡಳಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ತಾಲೂಕು ಟೇಲರ್ ಮತ್ತು ಸಹಾಯಕರ ಫೆಡರೇಷನ್ ನೇತೃತ್ವದಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಆಶಪ್ಪ ಪೂಜಾರಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

    ತಾಲೂಕು ಟೇಲರ್ ಮತ್ತು ಸಹಾಯಕರ ಫೆಡರೇಷನ್ ಸಂಚಾಲಕ ದ್ಯಾಮಣ್ಣ ಮಡಿವಾಳರ ಮಾತನಾಡಿ, ‘ಟೇಲರ್ ವೃತ್ತಿ ಮಾಡುವವರು ಅಸಂಘಟಿತ ವಲಯದವರಾಗಿದ್ದು, ಯಾವುದೇ ಸವಲತ್ತುಗಳು ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಟೇಲರ್ ವೃತ್ತಿಯಲ್ಲಿ ಪುರುಷರು ಹಾಗೂ ಮಹಿಳೆಯರು ಇದ್ದಾರೆ. ಮನೆಗಳಲ್ಲಿ ಬಟ್ಟೆ ಹೊಲಿಯುವ, ಶಾಪ್​ಗಳಲ್ಲಿ ಬಟ್ಟೆ ಹೊಲಿಯುವ, ಸಣ್ಣ ಗಾರ್ವೆಂಟ್ಸ್ ಘಟಕಗಳಲ್ಲಿ ಟೇಲರಿಂಗ್ ಮಾಡುವಂತಹ ಟೇಲರ್​ಗಳು ರಾಜ್ಯದಲ್ಲಿ ಸುಮಾರು 20 ಲಕ್ಷದಷ್ಟಿದ್ದಾರೆ’ ಎಂದರು.

    ಟೇಲರ್ ವೃತ್ತಿಯಲ್ಲಿ ತೊಡಗಿರುವ ಇವರೆಲ್ಲ ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ. ಸರ್ಕಾರದ ಯಾವುದೇ ಸವಲತ್ತುಗಳು ಸಿಗದೆ ಜೀವನ ನಡೆಸುವುದು ಕಷ್ಟಕರವಾಗಿದೆ. ಬೇರೆ ರಾಜ್ಯಗಳಲ್ಲಿ ಟೇಲರ್​ಗಳ ಕಲ್ಯಾಣ ಮಂಡಳಿ ಜಾರಿಯಲ್ಲಿವೆ. ಆದ್ದರಿಂದ ರಾಜ್ಯದಲ್ಲೂ ಇಂತಹ ಮಂಡಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

    ಐ.ಎ. ಉಸ್ತಾದ್, ಎಸ್.ಎಚ್. ವಡ್ಡಟ್ಟಿ, ಲಕ್ಷ್ಮೀ ಮಾಗಡಿ, ಹೇಮಾ ಪೂಜಾರ, ನಿರ್ಮಲಾ ಹೊನ್ನೂರು, ಮಮ್ತಾಜ್​ಬೇಗಂ ಅಳವಂಡಿ, ಶೋಭಾ ಬಡಿಗೇರ, ಮಂಜುಳಾ ಅಡವಳ್ಳಿ, ವಿಜಯಲಕ್ಷ್ಮೀ ಚಕ್ರಸಾಲಿ, ಪ್ರಭಾಕರ ವಾಲಿಕಾರ, ಜಮೀರ ಅಣ್ಣಿಗೇರಿ, ಸೈಯದ್​ಬಾಷಾ ವಡ್ಡಟ್ಟಿ, ಅಲ್ಲಾಭಕ್ಷಿ ಸುಟಕನವರ, ನೂರ್​ಅಹ್ಮದ್ ಧರ್ವಯತ, ಪರಶುರಾಮ ತಿಗರಿ, ಹುಸೇನಭಾಷಾ ಮಕಾನದಾರ, ಹಸನ್ ಉಸ್ತಾದ್, ನಜೀರ್ ಬೇವೂರ, ಆರ್.ಆರ್. ಮಕಾಂದಾರ, ಮಹ್ಮದ್ ಸುಂಕದ, ಖಾಜಾಹುಸೇನ ಮಕಾನದಾರ, ನಿಸಾರ್ ಅಹ್ಮದ್ ಕರ್ನಾಚಿ, ಮುನ್ನಾ ಸುಂಕದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts