More

    ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಶತಕದ ದಾಖಲೆ ಸರಿಗಟ್ಟಿದ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್

    ಸಿಲ್ಹೆಟ್: ಮಾಜಿ ನಾಯಕ ಕೇನ್ ವಿಲಿಯಮ್ಸನ್ (104 ರನ್, 205 ಎಸೆತ, 11 ಬೌಂಡರಿ) ಸಿಡಿಸಿದ ಟೆಸ್ಟ್ ಕ್ರಿಕೆಟ್‌ನ 29ನೇ ಶತಕದ ನೆರವಿನಿಂದ ಪ್ರವಾಸಿ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶಕ್ಕೆ ಪ್ರತಿರೋಧ ತೋರಿದೆ.

    ಪಂದ್ಯದ ಎರಡನೇ ದಿನವಾದ ಬುಧವಾರ ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ 85.1 ಓವರ್‌ಗಳಲ್ಲಿ 310 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಕೇನ್ ವಿಲಿಯಮ್ಸನ್ ಹಾಗೂ ಗ್ಲೆನ್ ಫಿಲಿಪ್ಸ್ (42) ಆರನೇ ವಿಕೆಟ್‌ಗೆ ಪೇರಿಸಿದ 78 ರನ್‌ಗಳ ಜತೆಯಾಟದ ನೆರವಿನಿಂದ ನ್ಯೂಜಿಲೆಂಡ್ ದಿನದಂತ್ಯಕ್ಕೆ 84 ಓವರ್‌ಗಳಲ್ಲಿ 8ವಿಕೆಟ್‌ಗೆ 266 ರನ್ ಕಲೆಹಾಕಿದ್ದು, ಇನ್ನೂ 44 ರನ್‌ಗಳ ಹಿನ್ನಡೆಯಲ್ಲಿದೆ. ಕೈಲ್ ಜೇಮಿಸನ್ (7*) ಜತೆ ನಾಯಕ ಟಿಮ್ ಸೌಥಿ (1) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಬಾಂಗ್ಲಾದೇಶ: 85.1 ಓವರ್‌ಗಳಲ್ಲಿ 310.
    ನ್ಯೂಜಿಲೆಂಡ್: 84 ಓವರ್‌ಗಳಲ್ಲಿ 266 (ಲಾಥಮ್ 21, ವಿಲಿಯಮ್ಸನ್ 104, ಡೆರಿಲ್ 41, ಫಿಲಿಪ್ಸ್ 42, ತೈಜುಲ್ ಇಸ್ಲಾಂ 89ಕ್ಕೆ4).

    29: ಕೇನ್ ವಿಲಿಯಮ್ಸನ್ ಸಕ್ರಿಯ ಆಟಗಾರರಲ್ಲಿ ಹೆಚ್ಚು ಟೆಸ್ಟ್ ಶತಕಗಳಿಸಿದ ವಿರಾಟ್ ಕೊಹ್ಲಿ (29) ದಾಖಲೆ ಸರಿಗಟ್ಟಿದರು. ಜೋ ರೂಟ್ (30), ಸ್ಟೀವನ್ ಸ್ಮಿತ್ (32) ಮೊದಲೆರಡು ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 111 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದರೆ, ವಿಲಿಯಮ್ಸನ್ 95 ಪಂದ್ಯ ತೆಗೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts