More

    ಇಂದು 175 ಥಿಯೇಟರ್‌ಗಳಲ್ಲಿ ಟಗರು ಪಲ್ಯ ರಿಲೀಸ್‌; ಗ್ರಾಮೀಣ ಸೊಗಡಿನ ಅನುಭವ ನೀಡುತ್ತಿರುವ ಚಿತ್ರ

    ಅಮೃತಾ ಪ್ರೇಮ್‌ ಹಾಗೂ ನಾಗಭೂಷಣ್‌ ನಟನೆಯ ಟಗರು ಪಲ್ಯ ಸಿನಿಮಾ ಇಂದು ತೆರೆ ಕಂಡಿದೆ. ಚಿತ್ರವನ್ನು ನಟ ಧನಂಜಯ್‌ ನಿರ್ಮಿಸಿದ್ದು ಉಮೇಶ್‌ ಕೃಪ ಆಕ್ಷನ್‌ ಕಟ್‌ ಹೇಳಿದ್ದಾರೆ.


    ಟಗರು ಪಲ್ಯ ಎಲ್ಲರೂ ಮೆಚ್ಚುವಂತ ಸಿನಿಮಾ. ಸಂಪ್ರದಾಯ, ಕನ್ನಡ ಭಾಷೆ ಎಲ್ಲವನ್ನೂ ಈ ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ. ಪ್ರತಿ ಪಾತ್ರಧಾರಿಗಳು ಅದ್ಭುತವಾಗಿ ನಟಿಸಿದ್ದಾರೆ. ಮನರಂಜನೆ ಜೊತೆಗೆ ನಮ್ಮ ರಾಜ್ಯದ ಒಂದು ಭಾಗದ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ. ನಾವು ಈ ವರ್ಷದಲ್ಲಿ ವಿತರಣೆ ಮಾಡುತ್ತಿರುವ ಬೆಸ್ಟ್ ಸಿನಿಮಾಗಳಲ್ಲಿ ಇದೂ ಒಂದು. ಟಗರು ಪಲ್ಯ, ಶುಕ್ರವಾರ ಒಟ್ಟು 175 ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದ್ದು, ಸಿಎಂ ಸಿದ್ದರಾಮಯ್ಯನವರೂ ಇಂದು ಸಿನಿಮಾ ವೀಕ್ಷಿಸಲಿದ್ದಾರೆ.


    ಒಂದು ಸಿನಿಮಾಗೆ ನಾಯಕ ನಾಯಕಿ ಎಷ್ಟು ಮುಖ್ಯವೋ ಅದೇ ರೀತಿ ಪೋಷಕ ಪಾತ್ರಗಳು ಅಷ್ಟೇ ಮುಖ್ಯ. ರಂಗಾಯಣ ರಘು, ತಾರಾ ಅವ್ರಂಥ ಅಧ್ಬುತ ನಟ ನಟಿ ಅದ್ಭುತ. ಈ ಬಾರಿ ಟಗರು ಪಲ್ಯ ಸಿನಿಮಾದಲ್ಲಿ ಇವರ ಜುಗಲ್‌ಬಂಧಿ ಇನ್ನೂ ಮಜವಾಗಿದೆಯಂತೆ. ಇವರ ಜೊತೆಗೆ ಶರತ್ ಲೋಹಿತಾಶ್ವ, ಬಿರಾದಾರ್ ಹಾಗೂ ಇನ್ನಿತರೆ ಪಾತ್ರಗಳೂ ನಿಮ್ಮನ್ನು ಇಡೀ ಸಿನಿಮಾ ಎಲ್ಲೂ ಬೋರ್ ಹೊಡೆಸದಂತೆ ಕತೆಯನ್ನು ಲೀಲಾಜಾಲವಾಗಿ ಮುಂದುವರೆಸಿಕೊಂಡು ಹೋಗುತ್ತೆ.


    ರಾಮಾ ರಾಮಾ ರೇ ಸರ್ಕಾರಿ ಹಿ.ಪ್ರಾ.ಶಾಲೆ, ಬಡವ ರಾಸ್ಕಲ್ ಮೊದಲಾದ ಸಿನಿಮಾಗಳಿಗೆ ಸಂಗೀತ ನೀಡಿದ್ದ ವಾಸುಕಿ ವೈಭವ್ ಟಗರು ಪಲ್ಯಕ್ಕೆ ಸಖತ್ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಈಗಾಗಲೇ ಟಗರು ಪಲ್ಯ ಟೈಟಲ್ ಟ್ರ್ಯಾಕ್, ಸೂರ್ಯ ಕಾಂತಿ ಮತ್ತು ಇತ್ತೀಚೆಗಷ್ಟೆ ರಿಲೀಸ್ ಆದ ಜೋಗಿ ಪ್ರೇಮ್ ಹಾಡಿರೋ ಸಂಬಂಧ ಅನ್ನೋ ಹಾಡು . ಪ್ರತಿ ಹಾಡಿನಲ್ಲೂ ಅದ್ಭುತ ಸಾಹಿತ್ಯ ಬರಿದಿದ್ದಾರೆ ಡಾಲಿ ಧನಂಜಯ್


    ವಿತರಕ ಕಾರ್ತಿಕ್ ಗೌಡ ಕೂಡ ಸಿನಿಮಾ ಬಗ್ಗೆ ಒಳ್ಳೆ ಮಾತುಗಳನ್ನಾಡಿದ್ದಾರೆ. ಇದು ಎಲ್ಲಾರ ಮೆಚ್ಚುಗೆಗೆ ಸೇರುವ ಸಿನಿಮಾ. ಸಂಪ್ರದಾಯ, ಕನ್ನಡ ಭಾಷೆ ಎಲ್ಲವೂ ಚಿತ್ರದಲ್ಲಿ ಚೆನ್ನಾಗಿದೆ. ಪ್ರತಿ ಪಾತ್ರವೂ ಅದ್ಭುತವಾಗಿದೆ. ಮನರಂಜನೆ ಜೊತೆಗೆ ನಮ್ಮ ರಾಜ್ಯದ ಒಂದು ಭಾಗದ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ನಾವು ಈ ವರ್ಷದಲ್ಲಿ ವಿತರಣೆ ಮಾಡ್ತಿರುವ ಬೆಸ್ಟ್ ಸಿನಿಮಾ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts