More

  ಮೆಕ್ಕೆಜೋಳದ ರಾಶಿಗೆ ತಾಡಪತ್ರೆ ಮುಚ್ಚಲು ಹೋದ ರೈತ ಹಾವು ಕಚ್ಚಿ ಸಾವು

  ಗುತ್ತಲ: ಹಾವು ಕಡಿದು ರೈತರೊಬ್ಬರು ಮೃತಪಟ್ಟ ಘಟನೆ ಪಟ್ಟಣದಲ್ಲಿ ಗುರುವಾರ ಸಂಭವಿಸಿದೆ.
  ಮಹೇಶಪ್ಪ ಹನುಮಂತಪ್ಪ ಜಾಲಣ್ಣನವರ (55) ಮೃತ ರೈತ.
  ಇವರು ಜಮೀನಿನಲ್ಲಿನ ಮೆಕ್ಕೆಜೋಳ ತೆನೆಯ ರಾಶಿಗೆ ತಾಡಪತ್ರೆ ಮುಚ್ಚಲು ಹೋದಾಗ ಹಾವು ಕಡಿದಿದೆ. ಕೂಡಲೇ ಅವರನ್ನು ಗುತ್ತಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts