More

    ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಯಂ ಸೇವಕರಿಗೆ ಟೀಶರ್ಟ್​

    ಕಲಬುರಗಿ : ಗುಲ್ಬರ್ಗ ವಿವಿ ಆವರಣದಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ಹಾಗೂ ಕಾರ್ಯಕ್ರಮಾಧಿಕಾರಿಗೆ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಎಸ್.ಬಿ.ಪಾಟೀಲ್ ಶಿಕ್ಷಣ ಸಂಸ್ಥೆಯಿಂದ ನೀಡಿದ ಟೀ ಶರ್ಟ್​ಗಳನ್ನು ಜಿಲ್ಲಾಧಿಕಾರಿ ಬಿ ಶರತ್ ಶನಿವಾರ ಬಿಡುಗಡೆಗೊಳಿಸಿದರು.
    ಈ ನಿಯೋಜಿತ ಸ್ವಯಂ ಸೇವಕರು ಶಿಸ್ತಿನಿಂದ ಕಾಣಲು ಮತ್ತು ಸ್ವಯಂ ಸೇವಕರೆಂದು ಸಾರ್ವಜನಿಕರು ಸರಳವಾಗಿ ಗುರುತಿಸಲು ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲರ ಪುತ್ರ, ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಕೈಲಾಶ್ ಪಾಟೀಲ್ ಸ್ವಯಂ ಸೇವಕರಿಗೆ ಟೀ ಶರ್ಟ್​ಗಳನ್ನು ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ವಿತರಿಸಿ, ಒಟ್ಟು ಐದು ಸಾವಿರ ಟೀ ಶರ್ಟ್​ಗಳನ್ನು ಸಮ್ಮೇಳನಕ್ಕೆ ದೇಣಿಗೆ ರೂಪದಲ್ಲಿ ನೀಡಲಾಗಿದೆ ಎಂದು ಹೇಳಿದರು.
    ಸಮ್ಮೇಳನವನ್ನು ಅಚ್ಚು ಕಟ್ಟಾಗಿ ನೆರವೇರಿಸಲು ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರು ನೇತೃತ್ವದ ಸ್ವಯಂ ಸೇವಕ ಮತ್ತು ನಿರ್ವಹಣಾ ಸಮಿತಿಯು ಸಮ್ಮೇಳನದ ವ್ಯವಸ್ಥೆಗಾಗಿ 3000 ಸ್ವಯಂ ಸೇವಕರನ್ನು ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಘಟಕದ ವತಿಯಿಂದ ನೇಮಕ ಮಾಡಲಾಗಿದೆ. ಸ್ವಯಂ ಸೇವಕರು ಮತ್ತು ನಿರ್ವಹಣಾ ಸಮಿತಿಯ ಕಾರ್ಯಧ್ಯಕ್ಷರೂ ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಶ್ರೀಶಕುಮಾರ ಎಚ್.ವೈ, ವಿವಿ ಎನ್ ಎಸ್ ಎಸ್ ಸಂಯೋಜಕ ಡಾ.ರಮೇಶ ಲಂಡನಕರ್ ಸಮಿತಿಯ ಸದಸ್ಯರಾದ ಡಾ.ಶರಣಪ್ಪ ಸೈದಾಪೂರ, ಚಂದ್ರಕಾಂತ ಪಾಟೀಲ್ ಸ್ಮಾರಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಹಾಗೂ ಸರ್ಕಾರಿ ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಪ್ರೊ.ರಾಜೇಶ ಅಜಬಸಿಂಗ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts