More

    2ನೇ ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ತಮಿಳುನಾಡು

    ಅಹಮದಾಬಾದ್: ಯುವ ಸ್ಪಿನ್ನರ್ ಎಂ.ಸಿದ್ದಾರ್ಥ್ (20ಕ್ಕೆ 4) ಮಾರಕ ದಾಳಿ ಹಾಗೂ ಬ್ಯಾಟ್ಸ್‌ಮನ್‌ಗಳು ಸಂಘಟಿತ ಹೋರಾಟದ ಲವಾಗಿ ತಮಿಳುನಾಡು ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡ 7 ವಿಕೆಟ್‌ಗಳಿಂದ ಬರೋಡ ತಂಡವನ್ನು ಮಣಿಸಿತು. ಕಳೆದ ಬಾರಿ ಕರ್ನಾಟಕ ಎದುರು ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದ ತಮಿಳುನಾಡು ತಂಡ, ಟೂರ್ನಿಯಲ್ಲಿ ಅಜೇಯ ಸಾಧನೆಯೊಂದಿಗೆ ಪ್ರಶಸ್ತಿ ಗೆದ್ದುಕೊಂಡಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬರೋಡ ತಂಡ, ವಿಷ್ಣು ಸೋಲಂಕಿ (49ರನ್, 55 ಎಸೆತ, 1 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್‌ಗೆ 120 ರನ್ ಪೇರಿಸಿತು. ಪ್ರತಿಯಾಗಿ ತಮಿಳುನಾಡು ತಂಡ 18 ಓವರ್‌ಗಳಲ್ಲಿ 3 ವಿಕೆಟ್‌ಗೆ 123 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಬರೋಡ ನೀಡಿದ ಸಾಧಾರಣ ಮೊತ್ತದ ಗೆಲುವಿನ ಗುರಿ ಬೆನ್ನಟ್ಟಿದ ತಮಿಳುನಾಡು ತಂಡ ಆರಂಭದಲ್ಲೇ ಜಗದೀಶನ್ (14) ವಿಕೆಟ್ ಕಳೆದುಕೊಂಡಿತು. ಬಳಿಕ ಹರಿ ನಿಶಾಂತ್ (35), ಅಪರಾಜಿತ್ (29*), ದಿನೇಶ್ ಕಾರ್ತಿಕ್ (22) ಹಾಗೂ ಶಾರೂಕ್ ಖಾನ್ (18) ಒಳಗೊಂಡ ಬ್ಯಾಟಿಂಗ್ ಪಡೆ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿತು.

    ಬರೋಡ: 9 ವಿಕೆಟ್‌ಗೆ 120 (ಕೇದಾರ್ ದೇವಧರ್ 16, ವಿಷ್ಣು ಸೋಲಂಕಿ 49, ಅತಿತ್ ಸೇತ್ 29, ಭಾರ್ಗವ್ ಭಟ್ 12*, ಎಂ.ಸಿದ್ದಾರ್ಥ್ 20ಕ್ಕೆ 4, ಬಾಬಾ ಅಪರಾಜಿತ್ 16ಕ್ಕೆ 1, ಸೋನು ಯಾದವ್ 29ಕ್ಕೆ 1, ಎಂ.ಮೊಹಮದ್ 16ಕ್ಕೆ 1). ತಮಿಳುನಾಡು: 18 ಓವರ್‌ಗಳಳ್ಲಿ 3 ವಿಕೆಟ್‌ಗೆ 123 (ಹರಿ ನಿಶಾಂತ್ 35, ಜಗದೀಶನ್ 13, ಅಪರಾಜಿತ್ 29*, ದಿನೇಶ್ ಕಾರ್ತಿಕ್ 22, ಶಾರೂಕ್ ಖಾನ್ 18*, ಅತಿತ್ ಸೇತ್ 20ಕ್ಕೆ 1, ಮೆರಿವಾಲಾ 34ಕ್ಕೆ 1).

    * 14: ತಮಿಳುನಾಡು ತಂಡ, 14 ವರ್ಷಗಳ ಬಳಿಕ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದುಕೊಂಡಿತು. 2006-07ರಲ್ಲಿ ಚೊಚ್ಚಲ ಆವೃತ್ತಿಯಲ್ಲೇ ಕಡೇ ಬಾರಿಗೆ ಚಾಂಪಿಯನ್ ಆಗಿತ್ತು.

    * 2: ತಮಿಳುನಾಡು ತಂಡ, 2ನೇ ಬಾರಿಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ 4ನೇ ತಂಡ ಎನಿಸಿಕೊಂಡಿತು. ಇದಕ್ಕೂ ಮೊದಲು ಕರ್ನಾಟಕ, ಗುಜರಾತ್ ಹಾಗೂ ಬರೋಡ ತಂಡಗಳು ತಲಾ 2 ಬಾರಿ ಪ್ರಶಸ್ತಿ ಜಯಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts