More

    ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ: ಕರ್ನಾಟಕಕ್ಕೆ ಇಂದು ಮಧ್ಯಪ್ರದೇಶ ಎದುರಾಳಿ

    ಡೆಹ್ರಾಡೂನ್: ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯ ಇ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಗುರುವಾರ ಮಧ್ಯಪ್ರದೇಶ ತಂಡದ ಸವಾಲು ಎದುರಿಸಲಿದೆ. ಅಭಿಮನ್ಯು ಕ್ರಿಕೆಟ್ ಆಕಾಡೆಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ತಮಿಳುನಾಡು ವಿರುದ್ಧದ ಮೊದಲ ಪಂದ್ಯ ಭಾರಿ ಮಳೆಯಿಂದಾಗಿ ರದ್ದುಗೊಂಡಿದ್ದರಿಂದ ಮಯಾಂಕ್ ಅಗರ್ವಾಲ್ ಪಡೆ ಅಂಕ ಹಂಚಿಕೊಂಡಿತ್ತು. ಇತ್ತ ಮಧ್ಯಪ್ರದೇಶ ತಂಡ ಆಡಿರುವ 2 ಪಂದ್ಯಗಳಲ್ಲಿ ಒಂದೂ ಸೋಲು ಕಂಡಿದ್ದು, ಇನ್ನೊಂದು ಪಂದ್ಯ ಮಳೆಗೆ ಆಹುತಿಯಾಗಿದೆ. ಕರ್ನಾಟಕ ತಂಡ ಅನುಭವಿ ಹಾಗೂ ಯುವ ಆಟಗಾರರಿಂದ ಕೂಡಿದ್ದು, ಐಪಿಎಲ್‌ನಲ್ಲಿ ಕಣಕ್ಕಿಳಿಯುವ ಆಟಗಾರರ ಬಲವಿದೆ. ಕಳೆದ ಆವೃತ್ತಿಯಲ್ಲಿ ಕ್ವಾರ್ಟರ್‌ೈನಲ್‌ನಲ್ಲಿ ಹೊರಬಿದ್ದಿದ್ದ ಕರ್ನಾಟಕ ಈ ಬಾರಿ ಉತ್ತಮ ನಿರ್ವಹಣೆ ತೋರುವ ಹಂಬಲದಲ್ಲಿದೆ.
    ಮಹಾರಾಜ ಟ್ರೋಫಿಯಲ್ಲಿ ಅಬ್ಬರಿಸಿದ ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಬಳಿಕ ನೆದರ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿಯೂ ಮಿಂಚಿ ಭರ್ಜರಿ ಾರ್ಮ್‌ನಲ್ಲಿದ್ದಾರೆ. ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ತ್ರಿವಳಿ ವೇಗಿಗಳಾದ ವಿದ್ವತ್ ಕಾವೇರಪ್ಪ, ವಿ. ಕೌಶಿಕ್ ಹಾಗೂ ವೈಶಾಕ್ ವಿಜಯ್‌ಕುಮಾರ್ ಜತೆಗೆ ಪ್ರಸಿದ್ಧ ಕೃಷ್ಣ ತಂಡ ಸೇರ್ಪಡೆ ತಂಡಕ್ಕೆ ಮತ್ತಷ್ಟು ಬಲ ನೀಡಿದೆ. ಆದರೆ ಹನ್ನೊಂದರ ಬಳಗ ಆಯ್ಕೆ ಸವಾಲೆನಿಸಿದೆ. ಶ್ರೇಯಸ್ ಗೋಪಾಲ್ ಕೇರಳ ತಂಡಕ್ಕೆ ವಲಸೆ ಹೋಗಿರುವುದರಿಂದ ರಾಜ್ಯ ತಂಡಕ್ಕೆ ಅನುಭವಿ ಸ್ಪಿನ್ನರ್ ಕೊರತೆ ಇದೆ.

    ಆರಂಭ: ಸಂಜೆ 4.30
    ನೇರಪ್ರಸಾರ: ಜಿಯೋ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts