More

    ಮಕ್ಕಳ ಪಾಲಿನ ಕ್ಷೀರ ಭಾಗ್ಯದ ಹಾಲನ್ನೂ ಬಿಡದ ಖದೀಮರು…

    ಬೆಳಗಾವಿ: ಬಡವರ ಮಕ್ಕಳಿಗೆ ಸೇರಬೇಕಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್​ಅನ್ನು ಇವರು ಕಾಳ ಸಂತೆಯಲ್ಲಿ ಮಾರಾಟ ಮಾಡಿದ್ದಾರೆ.

    ಈ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು ಸ್ವೀಟ್ಸ್ ಮಾರ್ಟ್ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ಸಂದರ್ಭ ಅಕ್ರಮವಾಗಿ ಕೂಡಿಟ್ಟ ಕ್ಷೀರ ಭಾಗ್ಯ ಯೋಜನೆಯ 32 ಕೆಜಿ ಹಾಲಿನ ಪೌಡರ್ ಜಪ್ತಿ ಮಾಡಿದ್ದಾರೆ.

    ಬೆಳಗಾವಿ ತಾಲೂಕಿನ ಹಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗುರುಸಿದ್ದೇಶ್ವರ ಸ್ವೀಟ್ಸ್ ಅಂಗಡಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಡವರ ಮಕ್ಕಳಿಗೆ ಕಾಡುವ ಅಪೌಷ್ಟಿಕತೆ ನಿವಾರಿಸಲು ಸರ್ಕಾರದಿಂದ ಕ್ಷೀರ ಭಾಗ್ಯ ಯೋಜನೆ ಜಾರಿ ಮಾಡಲಾಗಿತ್ತು. ಆದರೆ ಬಡವರ ಮಕ್ಕಳಿಗೆ ಸೇರಬೇಕಾದ ಹಾಲಿನ ಪೌಡರ್ ಕೆಲವು ಸ್ವೀಟ್ ಮಾರ್ಟ್ ಅಂಗಡಿಗಳಲ್ಲಿ ಖೋವಾ ಹಾಗೂ ಇನ್ನಿತರ ಪೇಡೆಗಳನ್ನ ತಯಾರಿಸಲು ಬಳಕೆ ಮಾಡಲಾಗುತ್ತಿದೆ.

    ಅಕ್ರಮವಾಗಿ ಕೂಡಿಟ್ಟ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪೌಡರ್ ಜಪ್ತಿ ಮಾಡಿರುವ ಅಧಿಕಾರಿಗಳು ಇದೀಗ ಅಂಗಡಿ ಮಾಲೀಕರ ವಿರುದ್ಧ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಡವರ ಮಕ್ಕಳ ಪೌಷ್ಟಿಕ ಕೊರತೆಯನ್ನು ನಿವಾರಿಸಲು ಸರ್ಕಾರದಿಂದ ಕ್ಷೀರ ಭಾಗ್ಯ ಯೋಜನೆ ಜಾರಿಗೆ ತಂದಿದರೂ ಇದರ ಪ್ರಯೋಜನ ಪಡೆದುಕೊಳ್ಳುತ್ತಿರುವುದು ಮಾತ್ರ ಇಂಥಹ ಕಳ್ಳಕಾಕರು ಎಂಬುದು ವಿಷಾದದ ಸಂಗತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts