More

    ಹುಬ್ಬಳ್ಳಿ ರೈಲ್ವೆಯಲ್ಲಿ ಗನ್​ ತೋರಿಸಿ ಕೆಲಸ ಮಾಡಿಸ್ತಾರಾ?!

    ಹುಬ್ಬಳ್ಳಿ: ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ರೈಲ್ವೇ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ನಿತ್ಯವೂ ಗನ್​ ಪಾಯಿಂಟ್​ ಮೇಲೆ ಕೆಲಸ ಮಾಡುತ್ತಿದ್ದಾರೆ. ಹೌದು! ಇದು ಹುಬ್ಬಳ್ಳಿ ರೈಲ್ವೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಸಿಬ್ಬಂದಿ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕಥೆ

    ಪೌರ ಕಾರ್ಮಿಕರು ಗನ್ ತೋರಿಸಿ ಕೆಲಸ ಮಾಡಿಸ್ತಾರೆ ಎಂದು ಗುತ್ತಿಗೆದಾರರ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ. ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸ್ವಚ್ಚತಾ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಗುತ್ತಿಗೆದಾರರಿಂದ ಜೀವ ಭಯ ಕಾಡುತ್ತಿದೆ. ಸದ್ಯ ಜೀವ ಭಯದಲ್ಲೇ ನೂರಾರು ರೈಲ್ವೇ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

    ಪೌರಕಾರ್ಮಿಕರನ್ನು ಗುತ್ತಿಗೆದಾರರು ತಮ್ಮ ಗನ್ ಮ್ಯಾನ್ ಮುಂದಿಟ್ಟುಕೊಂಡು ಜೀವ ಬೆದರಿಕೆ ಹಾಕಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದೆ. ಕಿಂಗ್ಸ್ ಸೆಕ್ಯೂರಿಟಿ ಎನ್ನುವ ಕಂಪನಿ ರೈಲ್ವೆ ಇಲಾಖೆ ಅಡಿಯಲ್ಲಿ ಗುತ್ತಿಗೆ ಪಡೆದಿದ್ದು ಅವರ ಕೆಳಗೆ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

    ‘ನಮ್ಮ ಜೀವಕ್ಕೆ ಭದ್ರತೆಯೇ ಇಲ್ಲ ನ್ಯಾಯ ಕೊಡಿಸಿ ಪ್ಲೀಸ್’ ಎಂದು ಪೌರಕಾರ್ಮಿಕರು ಅಂಗಲಾಚುತ್ತಿದ್ದಾರೆ. ಕೆಲಸದಲ್ಲಿ ಸಾಕಷ್ಟು ಮಾನಸಿಕ ಹಿಂಸೆ ಹಾಗೂ ದೈಹಿಕ ಹಿಂಸೆಯನ್ನು ಅನುಭವಿಸುವ ಕುರಿತು ಪೌರಕಾರ್ಮಿಕರು ಕಣ್ಣೀರು ಹಾಕುತ್ತಿದ್ದಾರೆ. ಅತ್ತ ಕಡಿಮೆ ಸಂಬಳ ಪಡೆದು ಸರ್ಕಾರದ ಯಾವುದೇ ಸೌಲಭ್ಯವಿಲ್ಲದೇ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ಈಗ ಪ್ರಾಣ ಭಯವನ್ನೂ ಎದುರಿಸುತ್ತಿದ್ದಾರೆ.

    ಕಿಂಗ್ಸ್ ಸೆಕ್ಯೂರಿಟಿ ಕಂಪೆನಿಯ ಗುತ್ತಿಗೆದಾರ ವಿನೀತ್ ತಿವಾರಿ ಎನ್ನುವವರ ವಿರುದ್ಧ ಸದ್ ಪೌರಕಾರ್ಮಿಕರು ಗಂಭೀರ ಆರೋಪ ಮಾಡಿದ್ದಾರೆ. ಈಗ ನೈಋತ್ವ ರೈಲ್ವೆ ವಲಯದ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ 150ಕ್ಕೂ ಅಧಿಕ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ .

    ಮೊಟ್ಟ ಮೊದಲ ಬಾರಿಗೆ ಜಗತ್ತಿನೆದುರು ಮಗಳ ಮುಖ ಬಹಿರಂಗಪಡಿಸಿದ ಕಿಮ್​ ಜಾಂಗ್​ ಉನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts