More

    ಭಾರತಕ್ಕೆ 1 ಮಿಲಿಯನ್ ಕರೊನಾ ಲಸಿಕೆ ನೀಡಲಿದೆ ಸ್ವೀಡನ್

    ಸ್ಟಾಕ್​​ಹೋಮ್​​: ವಿಶ್ವ ಸಂಸ್ಥೆಯ ಕೋವ್ಯಾಕ್ಸ್​ ಯೋಜನೆಯಡಿ ಈಗಾಗಲೇ ಅನೇಕ ರಾಷ್ಟ್ರಗಳಿಗೆ ಉಚಿತವಾಗಿ ಕರೊನಾ ಲಸಿಕೆ ನೀಡಿರುವ ಭಾರತಕ್ಕೆ ಸಹಾಯ ಮಾಡಲು ಇದೀಗ ಸ್ವೀಡನ್ ಮುಂದೆ ಬಂದಿದೆ. ಅದೇ ಯೋಜನೆಯಡಿ ಭಾರತಕ್ಕೆ 1 ಮಿಲಿಯನ್ ಡೋಸ್​ ಆಸ್ಟ್ರಾಜೆನೆಕಾ ಲಸಿಕೆಗಳನ್ನು ನೀಡುವುದಾಗಿ ಪ್ರಕಟಿಸಿದೆ.

    ಸ್ಕ್ಯಾಂಡಿನೇವಿಯಾದ ಈ ದೇಶದ ಅಂತರರಾಷ್ಟ್ರೀಯ ಅಭಿವೃದ್ದಿ ಸಹಕಾರ ಸಚಿವರಾದ ಪೆರ್​ ಓಲ್ಸನ್​ ಫ್ರಿದ್​ ಅವರು ಸ್ವೀಡಿಶ್​ ಸುದ್ದಿ ಸಂಸ್ಥೆ ಎಸ್​ವಿಟಿಗೆ ಇಂದು ಈ ಮಾಹಿತಿ ನೀಡಿದ್ದಾರೆ. ಆಸ್ಟ್ರಾಜೆನೆಕಾದ ಲಸಿಕೆಗಳನ್ನೇ ಭಾರತದಲ್ಲಿ ಸೀರಮ್​ ಇನ್ಸ್​ಟಿಟ್ಯೂಟ್​ ಕೋವಿಶೀಲ್ಡ್​ ಹೆಸರಲ್ಲಿ ಉತ್ಪಾದನೆ ಮಾಡುತ್ತಿದೆ.

    ಇದನ್ನೂ ಓದಿ: ಪ್ರಾಣವಾಯು ನೀಡಿದ ಸೌದಿ ಅರೇಬಿಯಾ !

    “ಕರೊನಾ ಸಾಂಕ್ರಾಮಿಕವು ಜಗತ್ತನ್ನು ಹೇಗೆ ಆವರಿಸಿಬಿಟ್ಟಿದೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಜನರು ಸಾಯುತ್ತಿದ್ದಾರೆ, ಬಡತನ ಹೆಚ್ಚುತ್ತಿದೆ ಮತ್ತು ಮಕ್ಕಳು ಇನ್ನೂ ಶಾಲೆಗೆ ವಾಪಸ್ಸಾಗಿಲ್ಲ” ಎಂದ ಫ್ರಿದ್​ ಅವರು, “ಈ ಸಾಂಕ್ರಾಮಿಕವನ್ನು ಎದುರಿಸಲು ಏನೇನು ಸಾಧ್ಯವೋ ಅದೆಲ್ಲ ಮಾಡಿ ಅದನ್ನು ಜಗತ್ತಿನಾದ್ಯಂತ ಸೆಣೆಸಬೇಕಿದೆ” ಎಂದು ಹೇಳಿದ್ದಾರೆ.

    ಸ್ವೀಡನ್​ನಲ್ಲಿ 65 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕರೊನಾ ಲಸಿಕೆ ನೀಡುತ್ತಿರುವುದರಿಂದ, ಈ ದೇಣಿಗೆಯಿಂದ ಅಲ್ಲಿನ ಲಸಿಕಾ ಅಭಿಯಾನದ ಮೇಲೆ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ ಎನ್ನಲಾಗಿದೆ. ಸ್ವೀಡನ್​ನ ಲಸಿಕಾ ಅಭಿಯಾನದ ಸಂಚಾಲಕ ರಿಚರ್ಡ್​ ಬರ್ಗ್​ಸ್ಟ್ರಾಮ್ ಅವರು, ಭಾರತಕ್ಕೆ ನೀಡಲು ಹೆಚ್ಚುವರಿ ಲಸಿಕೆ ಲಭ್ಯವಿದೆ ಎಂದಿದ್ದಾರೆ. “ಇದು ಒಂದು ಮಿಲಿಯನ್ ಅಷ್ಟೇ. ನಮ್ಮ ಬಳಿ ನಂತರದಲ್ಲಿ ಶೇರ್ ಮಾಡುವ ಸಲುವಾಗಿ ಇನ್ನೂ 4 ಅಥವಾ 5 ಮಿಲಿಯನ್ ಆಸ್ಟ್ರಾಜೆನೆಕಾ ಲಸಿಕೆಗಳಿವೆ” ಎಂದು ತಿಳಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ದುರಂತದ ನಡುವೆ ಒಂದು ವಿಚಿತ್ರ ಘಟನೆ : ತಾಯಿಯ ಶವ ತರಲು ಒಳಹೋದವಗೆ ಕಾದಿತ್ತು ಆಶ್ಚರ್ಯ !

    ತಂದೆಯನ್ನು ಕರೊನಾ ಬಲಿ ತೆಗೆದುಕೊಂಡಿತು… ಮೂರೇ ದಿನಗಳಲ್ಲಿ ಕೆಲಸಕ್ಕೆ ಮರಳಿದರು ಈ ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts