More

    ಮಣಿಪುರ ಹಿಂಸಾಚಾರ ಪ್ರಕರಣ: ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿ ಕಣ್ಣೀರಿಟ್ಟ ಸ್ವಾತಿ ಮಲಿವಾಲ್

    ನವದೆಹಲಿ: ದೆಹಲಿ ಮಹಿಳಾ ಆಯೋಗದ (DCW) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಇತ್ತೀಚೆಗೆ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ತೊಂದರೆಗೆ ಒಳಗಾದ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ, ದೈರ್ಯ ಹೇಳಿದ್ದಾರೆ.

    ಇದನ್ನೂ ಓದಿ: ಪ್ರತಿದಿನ ಒಂದು ಕೋಟಿ ಲೀ. ಹಾಲು ಉತ್ಪಾದನೆ ಗುರಿ : ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಹೇಳಿಕೆ

    ಕುಟುಂಬದ ಸದಸ್ಯರನ್ನು ತಬ್ಬಿಕೊಂಡು ಭಾವುಕರಾದ ಸ್ವಾತಿ ಮಲಿವಾಲ್, ಘಟನೆ ಕುರಿತು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡ ಅವರು, “ಮಣಿಪುರದಲ್ಲಿ ಕ್ರೌರ್ಯಕ್ಕೆ ಬಲಿಯಾದ ಹೆಣ್ಣುಮಕ್ಕಳ ಕುಟುಂಬವನ್ನು ಭೇಟಿ ಮಾಡಿದೆ. ನೊಂದವರ ಕಣ್ಣೀರು ಅವರನ್ನು ದೀರ್ಘಕಾಲ ನಿದ್ದೆ ಮಾಡಲು ಬಿಡುವುದಿಲ್ಲ. ಇಲ್ಲಿಯವರೆಗೂ ಸಂತ್ರಸ್ತರನ್ನು ಭೇಟಿಯಾಗಲು ಯಾರು ಬಂದಿಲ್ಲ” ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

    “ಮಣಿಪುರದಲ್ಲಿ ಬೆತ್ತಲೆ ಮೆರವಣಿಗೆಗೆ ತುತ್ತಾದ ಇಬ್ಬರು ಮಹಿಳೆಯರಿಗೆ ಇನ್ನೂ ರಾಜ್ಯದಿಂದ ಯಾವುದೇ ಕೌನ್ಸೆಲಿಂಗ್ ಅಥವಾ ಪರಿಹಾರ ದೊರೆತಿಲ್ಲ. ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ” ಎಂದು ಸ್ವಾತಿ ಹೇಳಿದರು. ಚುರಾಚಂದ್‌ಪುರ, ಮೊಯಿರಾಂಗ್ ಮತ್ತು ಇಂಫಾಲ್ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ ಸ್ವಾತಿ ಮಲಿವಾಲ್​​, ಹಿಂಸಾಚಾರದಿಂದ ಬದುಕುಳಿದವರೊಂದಿಗೆ ಸಂವಾದ ನಡೆಸಿದ್ದಾರೆ,(ಏಜೆನ್ಸೀಸ್).

    ನಿರೀಕ್ಷೆ ಮೂಡಿಸಿದ ಡಾರ್ಲಿಂಗ್​ ಕೃಷ್ಣ ಅಭಿನಯದ ‘ಕೌಸಲ್ಯ ಸುಪ್ರಜಾ ರಾಮ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts