More

    ಎಲ್ಲರಿಗೂ ಒಂದೇ ಕಾನೂನು ಮಾಡುವುದಾದರೆ ನಮ್ಮ ಒಪ್ಪಿಗೆ ಇದೆ; ಸ್ವರ್ಣವಲ್ಲಿ ಶ್ರೀಗಳು ಹೀಗಂದಿದ್ದೇಕೆ?

    ಉಡುಪಿ: ಎಲ್ಲರಿಗೂ ಒಂದೇ ರೀತಿಯ ಕಾನೂನು ಮಾಡುವುದಾದರೆ ನಮ್ಮ ಒಪ್ಪಿಗೆ ಎನ್ನುವ ಮೂಲಕ ಸ್ವರ್ಣವಲ್ಲಿಯ ಶ್ರೀಗಳು ಕಾನೂನು ತಾರತಮ್ಯದ ವಿರುದ್ಧ ದನಿ ಎತ್ತಿದ್ದಾರೆ. ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ತೀರ್ಥರು ಉಡುಪಿಯಲ್ಲಿ ಇಂಥದ್ದೊಂದು ಪ್ರತಿಕ್ರಿಯೆ ನೀಡುವ ಜತೆಗೆ ಹಿಂದೂಗಳ ಮೇಲೆ ಮಾತ್ರ ಏಕೆ ಹೇರಿಕೆ ಎಂದೂ ಪ್ರಶ್ನಿಸಿದ್ದಾರೆ.

    ಉಡುಪಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸ್ವರ್ಣವಲ್ಲಿ ಶ್ರೀಗಳು, ಹುಡುಗಿಯ ವಿವಾಹದ ಕನಿಷ್ಠ ವಯಸ್ಸು 21ಕ್ಕೆ ಏರಿಸುವ ಕಾನೂನು ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿಲುವಿಗೆ ಆಕ್ಷೇಪ ವ್ಯಕ್ತಪಡಿದ್ದಾರೆ. ಮಾತ್ರವಲ್ಲ, ಇದು ಹಿಂದೂಗಳಿಗೆ ಮಾತ್ರ ಅನ್ವಯಿಸುವುದಾದರೆ ತಮ್ಮ ವಿರೋಧವಿದೆ ಎಂಬುದನ್ನೂ ಹೇಳಿದ್ದಾರೆ.

    ಇದನ್ನೂ ಓದಿ: ಸರ್ಕಾರಿ ಕಚೇರಿಯಲ್ಲೇ ಮಹಿಳಾ ಅಧಿಕಾರಿಗೆ ಧಮ್ಕಿ; ‘ನೀನು ಎಲ್ಲಿಗೆ ಹೋದ್ರೂ ಬಿಡಲ್ಲ’ ಎಂದಿದ್ದ ಆರ್​​ಟಿಐ ಕಾರ್ಯಕರ್ತನ ಬಂಧನ

    ಮುಸಲ್ಮಾನ ಮತ್ತು ಕ್ರೈಸ್ತರಿಗೆ ಪ್ರತ್ಯೇಕ ವಿವಾಹ ಕಾನೂನುಗಳಿವೆ. ಮುಸ್ಲಿಮರಲ್ಲಿ ಬರೀ 15 ವರ್ಷ ದಾಟಿದರೆ ಮದುವೆ ಆಗಲು ಅವಕಾಶವಿದೆ. ಆದರೆ ಇಲ್ಲಿ ಹಿಂದೂಗಳ ವಿವಾಹ ವಯೋಮಿತಿ ಮಾತ್ರ ಹೆಚ್ಚಿಸಲಾಗುತ್ತಿದೆ. ಈ ಮೂಲಕ ಕಾನೂನನ್ನು ಹಿಂದೂಗಳ ಮೇಲೆ ಮಾತ್ರ ಹೇರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಎಲ್ಲರಿಗೂ ಒಂದೇ ರೀತಿ ಕಾನೂನು ಮಾಡುವುದಾದರೆ ಮಾತ್ರ ನಮ್ಮ ಒಪ್ಪಿಗೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಮುಖ್ಯಮಂತ್ರಿಗೇ ಶಾಪ ಹಾಕಿದ ಸ್ವಾಮೀಜಿ: ಒಂದೇ ತಿಂಗಳಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರಂತೆ ಬೊಮ್ಮಾಯಿ!

    ಇನ್ನು ರಾಜ್ಯ ಹಾಗೂ ದೇಶದಲ್ಲಿ ಹಿಂದೂಪರ ಸರಕಾರವಿದೆ. ಆದರೆ ಹಿಂದೂಗಳ ದೇವಾಲಯ ನಿರ್ವಹಣೆಗೆ ಸರಿಯಾದ ಕಾನೂನು ಮಾಡಲಾಗಿಲ್ಲ. ಹಿಂದೂ ದೇವಾಲಯಗಳನ್ನು ದೇವಸ್ಥಾನದ ಭಕ್ತರೇ ನಿರ್ವಹಿಸಬೇಕು. ಧಾರ್ಮಿಕ ಕ್ಷೇತ್ರಗಳಿಗೆ ಸರಕಾರದಿಂದ ಸ್ವಾಯತ್ತತೆ ಸಿಗಬೇಕು. ಮುಸ್ಲಿಂ ಧಾರ್ಮಿಕ ಕೇಂದ್ರಗಳನ್ನು ವಕ್ಫ್ ಬೋರ್ಡ್ ನಿರ್ವಹಿಸುತ್ತದೆ. ಅದೇ ರೀತಿಯ ಒಂದು ಸಂಸ್ಥೆ ಹಿಂದೂ ದೇವಾಲಯಗಳಿಗೂ ಬೇಕು. ಕರ್ನಾಟಕ ಸರ್ಕಾರ ಈ ಬಗ್ಗೆ ಒಂದು ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಿ, ಆ ನಿರ್ಧಾರ ಇತರ ರಾಜ್ಯಗಳಿಗೂ ಮಾದರಿಯಾಗಲಿ ಎಂದೂ ಸ್ವರ್ಣವಲ್ಲಿ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸ್ನಾನಕ್ಕೆ ಹೋಗಿದ್ದವನನ್ನು ಹಾಗೇ ಠಾಣೆಗೆ ಕರೆದೊಯ್ದ ಪೊಲೀಸರು; ಪಕ್ಕದ ಮನೆಯವರ ಜತೆ ಜಗಳವಾಡಿದ್ದ ರೌಡಿಶೀಟರ್​ ಮರ್ಯಾದೆ ಬೀದಿಪಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts