More

    ಮತ್ತೆ ಶುರುವಾಗಲಿದೆ ಮಿಡತೆ ದಾಳಿ : ಭಾರತಕ್ಕೆ ಎಫ್​ಎಒ ಎಚ್ಚರಿಕೆ

    ಜೈಸಲ್ಮೇರ್: ಜಗತ್ತಿಗೇ ಇದು ವಿಷಮಕಾಲ ಎನ್ನಬಹುದು. ಭಾರತಕ್ಕೂ ಅಷ್ಟೇ. COVID-19 ಸಾಂಕ್ರಾಮಿಕ ರೋಗದ ಜತೆ ಜತೆಗೇ ಇದು ಹಲವು ಅಪಾಯಗಳನ್ನು ಎದುರಿಸುತ್ತಿದೆ. ಅವುಗಳ ಪೈಕಿ ಮಿಡತೆ ದಾಳಿ ಒಂದು.
    ವಿಶ್ವಸಂಸ್ಥೆಯ ಏಜೆನ್ಸಿಯಾದ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ದಕ್ಷಿಣ ಆಫ್ರಿಕಾದಿಂದ ಮಿಡತೆಗಳು ರಾಜಸ್ಥಾನಕ್ಕೆ ಬರಲಿವೆ ಎಂದು ಎಚ್ಚರಿಕೆ ನೀಡಿದೆ.
    ಎಫ್‌ಎಒದ ಈ ಎಚ್ಚರಿಕೆಯ ಸೂಚನೆಯಿಂದ ರೈತರು ಮತ್ತು ಅಧಿಕಾರಿಗಳು ಆತಂಕಕ್ಕೊಳಗಾಗಿದ್ದಾರೆ.
    ಸುದ್ದಿಸಂಸ್ಥೆಯೊಂದರ ವರದಿಯ ಪ್ರಕಾರ, ಮಿಡತೆಗಳ ಹಿಂಡು ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಜೈಸಲ್ಮೇರ್-ಬಾರ್ಮರ್ ಅನ್ನು ಪ್ರವೇಶಿಸುತ್ತವೆ.

    ಇದನ್ನೂ ಓದಿ:  ದೇಶಾದ್ಯಂತ ಆಗಸ್ಟ್​​ನಲ್ಲಿ ಸಿನಿಮಾ ಥಿಯೇಟರ್​ ತೆರೆಯಲು ಸಿದ್ಧತೆ; ಮಾಲೀಕರೇ ಒಪ್ಪುತ್ತಿಲ್ಲ…!

    ಏತನ್ಮಧ್ಯೆ, ಜೈಸಲ್ಮರ್ ಆಡಳಿತಾಧಿಕಾರಿಗಳು ಮಿಡತೆ ದಾಳಿ ಎದುರಿಸಲು ಕ್ರಮ ಕೈಗೊಳ್ಳಲಾರಂಭಿಸಿದ್ದಾರೆ. ಕೀಟಗಳ ದಾಳಿಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಇಲಾಖೆ, ಮಿಡತೆ ನಿಯಂತ್ರಣ ಇಲಾಖೆ ಅಧಿಕಾರಿಗಳು ಸಭೆ ಕರೆಯಲಿದ್ದಾರೆ.
    ಕೀಟ ನಿಯಂತ್ರಣಕ್ಕಾಗಿ ರೈತರಿಗೆ ಕೀಟನಾಶಕ ಮತ್ತು ಟ್ರಾಕ್ಟರುಗಳನ್ನು ವಿತರಿಸಲು ಆಡಳಿತವು ಯೋಜಿಸುತ್ತಿದೆ ಎಂದು ಜೈಸಲ್ಮೇರ್ ಜಿಲ್ಲಾಧಿಕಾರಿ ಆಶಿಶ್ ಮೋದಿ ತಿಳಿಸಿದ್ದಾರೆ.
    ಜಿಲ್ಲಾಧಿಕಾರಿಗಳೂ ಕೂಡ ಬಿಎಸ್​ಎಫ್ ಸಹಾಯ
    ಯಾಚಿಸಲಿದ್ದಾರೆ. ಗುರುವಾರ ಮಿಡತೆ ಹಿಂಡುಗಳು ಪಾಕಿಸ್ತಾನ ಗಡಿ ಸಮೀಪದ ಕೆಲ್ನೋರ್‌ನಿಂದ ಬಾರ್ಮರ್‌ಗೆ ಪ್ರವೇಶಿಸಿವೆ.
    ಕೀಟನಾಶಕಗಳನ್ನು ಸಿಂಪಡಿಸಲು ಮತ್ತು ಸೆಡ್ವಾ ಮತ್ತು ಬೇತು ಪ್ರದೇಶಗಳಲ್ಲಿನ ಮಿಡತೆ ದಂಡನ್ನು ನಾಶಮಾಡಲು ಎಂಐ -17 ಚಾಪರ್ ಬಳಸುವ ಭಾರತೀಯ ವಾಯುಪಡೆಯ ಸಹಾಯವನ್ನು ಪಡೆಯಲಾಗಿದೆ. ಡ್ರೋನ್‌ಗಳು ಮತ್ತು ಇತರ ಸ್ಪ್ರೇ ವಾಹನಗಳನ್ನು ಕೂಡ ಬಳಸಲಾಗಿದೆ.

    ಇದನ್ನು ಓದಿ: ರಾಮಮಂದಿರ ನಿರ್ಮಾಣ: ಭೂಮಿಪೂಜಾ ದಿನವನ್ನು ದೀಪಾವಳಿಯಂತೆ ಆಚರಿಸಲು ವಿಎಚ್​​ಪಿ ಕರೆ

    “ಜೋಧ್‌ಪುರದ ಐಎಎಫ್ ಚಾಪರ್ ಬಳಸಿ ಸೆಡ್ವಾ, ಸಾವೌ, ಮೂಲ್‌ರಾಜ್, ಬೇತೂ, ಡಿಪ್ಲಾ ಮತ್ತು ನವತಲಾದಲ್ಲಿ ಅಂದಾಜು 900 ಹೆಕ್ಟೇರ್ ಭೂಮಿಯಲ್ಲಿ ನಾವು ಮಿಡತೆ ದಂಡನ್ನು ನಿಯಂತ್ರಿಸಲಾಗಿದೆ
    ಮಿಡತೆಗಳು ಪೂರ್ವಕ್ಕೆ ಚಲಿಸುತ್ತಿವೆ ಮತ್ತು ಭಾರತ ಮತ್ತು ಪಾಕಿಸ್ತಾನ ಎರಡರಲ್ಲೂ ಬೇಸಿಗೆ ಕೃಷಿ ಉತ್ಪಾದನಾ ಪ್ರದೇಶಗಳನ್ನು ತಲುಪಲು ಹಿಂದೂ ಮಹಾಸಾಗರದಾದ್ಯಂತ ಚಲಿಸಬಹುದು ಎಂದು ವರದಿ ತಿಳಿಸಿದೆ.

    ಕಾಮೆಡ್​​-ಕೆ: ಪದವಿ ಪ್ರವೇಶ ಪರೀಕ್ಷೆ ಆಗಸ್ಟ್ 19 ಕ್ಕೆ ನಿಗದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts