More

    ತಯಾರಾಯ್ತು ಖಾದಿ ಪಿಪಿಇ ಕಿಟ್‌: ವಿದೇಶಿ ಕಿರಿಕಿರಿಯಿಂದ ವೈದ್ಯರಿನ್ನು ನಿರಾಳ

    ಮುಂಬೈ: ಕರೊನಾ ವೈರಸ್‌ನಿಂದ ಕಂಗೆಟ್ಟಿರುವ ಜನಸಮೂಹ ಒಂದೆಡೆಯಾದರೆ, ದಿನವೂ ಸೋಂಕಿತರ ಶುಶ್ರೂಷೆಯಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿ ಮಾತಂತೂ ಕೇಳುವುದೇ ಬೇಡ.

    ಸೋಂಕಿನ ಭಯದಲ್ಲಿಯೇ ಇರುವುವುದ ಒಂದೆಡೆಯಾದರೆ, ಪ್ಲಾಸ್ಟಿಕ್‌ಯುಕ್ತ ಪಿಪಿಇ ಕಿಟ್‌ ಅನ್ನು ಅಡಿಯಿಂದ ಮುಡಿಯವರೆಗೂ ಧರಿಸಿ ಅವರು ಅನುಭವಿಸುವ ಹಿಂಸೆ ದೇವರಿಗೇ ಪ್ರೀತಿ. ದಿನಪೂರ್ತಿ ಈ ಕಿಟ್‌ ಧರಿಸಿ ವೈದ್ಯರು ಅನುಭವಿಸುವ ಚಿತ್ರಹಿಂಸೆ ಅಷ್ಟಿಷ್ಟಲ್ಲ.

    ಇಲ್ಲಿಯವರೆಗೆ ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಪಿಪಿಇ ಕಿಟ್‌ ತರಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ದುಬಾರಿ ಬೆಲೆ ತೆತ್ತು ವೈದ್ಯಕೀಯ ಹಿಂಸೆ ನೀಡುವ ಈ ಕಿಟ್‌ನಿಂದ ಮುಕ್ತಿ ಪಡೆಯುವ ಸಂಬಂಧ ಇದೀಗ ಖಾದಿ ಕಿಟ್‌ ತಯಾರಿಸುವ ನಿಟ್ಟಿನಲ್ಲಿ ಭಾರತ ಒಂದಡಿ ಮುಂದೆ ಹೋಗಿದ್ದು, ಅದರಲ್ಲಿ ಸಂಪೂರ್ಣ ಯಶ ಸಾಧಿಸಿದೆ.

    ಇದನ್ನೂ ಓದಿ: ದೇಶಭಕ್ತಿಯ ಈ ಪರಿ! ಉಪವಾಸವಾದರೂ ಸತ್ತೇವು, ಉದ್ಯೋಗಕ್ಕೆ ಧಿಕ್ಕಾರ ಎಂದ ಜೊಮಾಟೊ ಸಿಬ್ಬಂದಿ!

    ಸ್ವದೇಶಿಯ ಮಾತು ಕೇಳಿಬರುತ್ತಿರುವ ಈ ಹೊತ್ತಿನಲ್ಲಿ ವೈದ್ಯರು ನಿರಾಳರಾಗುವಂಥ ಸುದ್ದಿಯನ್ನು ಮಹಾರಾಷ್ಟ್ರದ ಮಹಾತ್ಮಾಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆ ನೀಡಿದೆ. ಮಹಾರಾಷ್ಟ್ರ ಸೇವಾ ಗ್ರಾಮದಲ್ಲಿ ಇದನ್ನು ತಯಾರಿಸಲಾಗುತ್ತಿದೆ.

    ಇಲ್ಲಿಯ ಸಿಬ್ಬಂದಿ ಖಾದಿಯ ಪಿಪಿಇ ಕಿಟ್‌ ತಯಾರಿಸಿದ್ದಾರೆ. ಒಂದಿನಿತು ಪ್ಲಾಸ್ಟಿಕ್‌ ಇಲ್ಲದೇ ಸಂಪೂರ್ಣ ಖಾದಿಮಯವಾಗಿರುವ ಈ ಕಿಟ್‌ ಧರಿಸುವುದರಿಂದ ವೈದ್ಯರು ನೆಮ್ಮದಿಯಿಂದ ಇರಬಹುದು ಎನ್ನುವುದು ಸಂಸ್ಥೆಯ ಮಾತು. ಅಷ್ಟೇ ಅಲ್ಲದೇ, ಇಲ್ಲಿಯವರೆಗೆ ಬಳಕೆ ಮಾಡಲಾಗುತ್ತಿರುವ ಕಿಟ್‌ ಒಮ್ಮೆ ಧರಿಸಿದರೆ ಅದು ಪುನಃ ಬಳಕೆ ಕಷ್ಟವಾಗಿತ್ತು. ಆದರೆ ಖಾದಿಯಿಂದ ತಯಾರಾಗಿರುವ ಕಿಟ್‌ 20 ಬಾರಿ ತೊಳೆದು ಪುನಃ ಧರಿಸಬಹುದಾಗಿದೆ.

    ವೈದ್ಯರ ಸಲುವಾಗಿ ಗುಜರಾತ್‌ನಿಂದ ಖಾದಿ ಗೌನ್‌ ಕೂಡ ತರಿಸಲಾಗಿದ್ದು, ವೈದ್ಯರು ಇದನ್ನು ಮೇಲುಗಡೆ ಹಾಕಿಕೊಳ್ಳಬಹುದಾಗಿದೆ. ಖಾದಿಯಿಂದ ಕಿಟ್‌ ತಯಾರಾಗಿರುವ ಹಿನ್ನೆಲೆಯಲ್ಲಿ ಇದನ್ನು ಧರಿಸುವವರು ತುಂಬಾ ಆರಾಮ ಅನುಭವ ಪಡೆಯುತ್ತಾರೆ. ಇದು ತುಂಬಾ ಮೆತ್ತಗೆ ಇರುವ ಕಾರಣ, ಯಾವುದೇ ತೊಂದರೆ ಆಗುವುದಿಲ್ಲ ಎನ್ನುತ್ತಾರೆ ಡಾ.ರಾಹುಲ್‌ ನಾರಂಗ್‌. ಇದಕ್ಕೆ ಡಿಆರ್‌ಡಿಒ ಕೂಡ ಅನುಮತಿ ನೀಡಿದೆ.

    ಆ್ಯಪ್‌ ಮೂಲಕ ಟಿ.ವಿ ಚಾನೆಲ್‌ ಆಯ್ಕೆ: ಟೆಲಿಕಾಂ ಪ್ರಾಧಿಕಾರದಿಂದ ಗುಡ್‌ ನ್ಯೂಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts