More

    ಜೂ.5ರವರೆಗೆ ಸ್ವಚ್ಛ ನಗರ ಅಭಿಯಾನ: ಪಶು ವೈದ್ಯ ಡಾ.ಕೆ.ಎಸ್.ಜಯರಾಂ ಚಾಲನೆ

    ಮಂಡ್ಯ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ ಜೂ.5ರವರೆಗೆ ಮರುಬಳಕೆ ಮಾಡಬಹುದಾದ ವಸ್ತುಗಳ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
    ನನ್ನ ಜೀವನ, ನನ್ನ ಸ್ವಚ್ಛ ನಗರ ಯೋಜನೆಯಡಿ ರೆಡ್ಯೂಸ್, ರೀಯೂಸ್ ಮತ್ತು ರೀಸೈಕಲ್ ಅಭಿಯಾನ ಮಾಡಲಾಗುತ್ತಿದೆ. ನಗರಸಭೆ ಕಚೇರಿ ಆವರಣ, ಮಹಾವೀರ ವೃತ್ತ, ನಗರಸಭಾ ಮಳಿಗೆ ಸಂಖ್ಯೆ-23, ಪಿಡಬ್ಲುೃಡಿ ಕ್ವಾಟ್ರಸ್, ಜೈನರ ಕಾಲನಿ, 6ನೇ ಕ್ರಾಸ್, ಅಶೋಕ ನಗರ, ಸ್ವರ್ಣಸಂದ್ರ, ರಂಗಮಂದಿರ, ಪೇಟೆ ಬೀದಿ, ಹಳೇ ತಾಲೂಕು ಕಚೇರಿ ಹತ್ತಿರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
    ಸಾರ್ವಜನಿಕರು ಪುನರ್ ಬಳಕೆ ತ್ಯಾಜ್ಯವನ್ನು ನೀಡಬಹುದಾಗಿರುತ್ತದೆ. ಸಂಗ್ರಹಣಾ ಕೇಂದ್ರಗಳಿಗೆ ತ್ಯಾಜ್ಯ ವಸ್ತುಗಳಾದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಉಪಯೋಗಿಸಿದ ಪ್ಲಾಸ್ಟಿಕ್ ಸಾಮಗ್ರಿಗಳು, ಪ್ಲಾಸ್ಟಿಕ್ ಆಟಿಕೆಗಳು, ಹಳೇ ಜೀನ್ಸ್/ಯುನಿಫಾರಂ/ ಸೀರೆ/ಚಪ್ಪಲಿ ಹಾಗೂ ನ್ಯೂಸ್ ಪೇಪರ್/ಹಳೇ ಪುಸ್ತಕಗಳನ್ನು ಕೇಂದ್ರಕ್ಕೆ ನೀಡಬಹುದು. ಅಭಿಯಾನಕ್ಕೆ ರಾಯಭಾರಿಯೂ ಆಗಿರುವ ಪಶುವೈದ್ಯ ಡಾ.ಕೆ.ಎಸ್.ಜಯರಾಂ ಚಾಲನೆ ನೀಡಿದರು.
    ಪೌರಾಯುಕ್ತ ಆರ್.ಮಂಜುನಾಥ್ ಮಾತನಾಡಿ, ನಗರದಲ್ಲಿ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದೆ. ಭಾಗವಹಿಸಿದವರಿಗೆ ನಗರಸಭೆ ವತಿಯಿಂದ ಪರಿಸರ ಸ್ನೇಹಿ ವಸ್ತುಗಳು ಹಾಗೂ ಡಿಜಿಟಲ್ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.
    ನಗರಸಭೆ ಇಂಜಿನಿಯರ್‌ಗಳಾದ ರವಿಕುಮಾರ್, ರುದ್ರೇಗೌಡ, ಆರೋಗ್ಯ ನಿರೀಕ್ಷಕ ಚೆಲುವರಾಜು, ನಗರಸಭೆ ನಾಮನಿರ್ದೇಶಿತ ಸದಸ್ಯರಾದ ಚಂದ್ರು, ಪ್ರಸನ್ನ, ಕ್ರಾಂತಿ ಮಂಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts