More

    ಶಿಕ್ಷಣ ಇಲಾಖೆ ಹೊಸ ಆದೇಶ: ಎಸ್​.ವಿ. ಸಂಕನೂರು ಬೇಸರ

    ಗದಗ: ಶಾಲಾ ಶಿಕ್ಷಣ ಇಲಾಖೆಯ(ಪದವಿಪೂರ್ವ) ದೈನಂದಿನ ಕಾರ್ಯಕ್ರಮಗಳನ್ನು ಪರಿಣಾಮಕಾರಿ ನಿರ್ವಹಿಸುವ ಸಲುವಾಗಿ ಜಿಪಂ ಸಿಇಓ ಅಥವಾ ಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ ಮೇಲುಸ್ತುವಾರಿ ನೀಡಿದ್ದನ್ನು ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ಖಂಡಿಸಿದ್ದಾರೆ.
    ಈ ಕುರಿತು ಪ್ರಕಟಣೆ ನೀಡಿರುವ ಅವರು, ಪದವಿ ಪೂರ್ವ ಹಂತದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಪ್ರತ್ಯೇಕವಾದ ಇಲಾಖೆ ಇರಬೇಕು ಎಂದು ಸಮಿತಿಗಳ ವರದಿಯ ಶಿಫಾರಸ್ಸಿನ ಮೇಲೆ ಅಂದಿನ ಶಿಕ್ಷಣ ಸಚಿವ ವೀರಪ್ಪ ಮೊಯ್ಲಿ ಅವರು ಹೊಸ ಇಲಾಖೆ ಸೃಷ್ಟಿಸಿದ್ದರು. ಹೀಗಿರುವಾಗ ಪದವಿಪೂರ್ವ ಹಂತದ ಮೇಲುಸ್ತುವಾರಿಯನ್ನು ಈಗಾಗಲೇ ಹೆಚ್ಚು ಕಾರ್ಯಭಾರ ಮತ್ತು ಒತ್ತಡ ಇರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ವಹಿಸುತ್ತಿರುವುದು ಸೂಕ್ತವಾದ ಕ್ರಮವಲ್ಲ. ಕರ್ನಾಟಕದಲ್ಲಿಯ ಪದವಿಪೂರ್ವ ಶಿಕ್ಷಣ ಇಡೀ ದೇಶಕ್ಕೆ ಮಾದರಿಯಾಗಿದೆ. ಸರ್ಕಾರದ ಈ ಕ್ರಮದಿಂದ ಪದವಿಪೂರ್ವ ಶಿಕ್ಷಣ ಅಧೋಗತಿಗೆ ಇಳಿಯುವಲ್ಲಿ ಸಂದೇಹವಿಲ್ಲ. ಈ ಆದೇಶ ಹಿಂಪಡೆಯದಿದ್ದರೆ ಪದವಿಪೂರ್ವ ಹಂತದ ಎಲ್ಲ ಸಂಘಟನೆಯವರು ಬೀದಿಗೆ ಇಳಿದು ಹೋರಾಟ ಮಾಡುವ ಪ್ರಸಂಗ ಬರಬಹುದು ಎಂದು ಸರಕಾರವನ್ನು ವಿಧಾನ ಪರಿಷತ್​ ಸದಸ್ಯ ಎಸ್​.ವಿ ಸಂಕನೂರ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts