More

    ದೀದಿ ವಿರುದ್ಧ 6 ಕ್ರಿಮಿನಲ್ ಕೇಸ್ : ನಾಮಪತ್ರಕ್ಕೆ ಆಕ್ಷೇಪಣೆ ಸಲ್ಲಿಸಿದ ಅಧಿಕಾರಿ

    ಕೊಲ್ಕತಾ : ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ನಂದೀಗ್ರಾಮ ಕ್ಷೇತ್ರದಿಂದ ಸ್ಪರ್ಧಿಸಲು ಟಿಎಂಸಿ ನಾಯಕಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ಸಲ್ಲಿಸಿರುವ ನಾಮಪತ್ರಕ್ಕೆ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಆಕ್ಷೇಪ ಸಲ್ಲಿಸಿದ್ದಾರೆ. ಬ್ಯಾನರ್ಜಿ ಅವರು ತಮ್ಮ ವಿರುದ್ಧ ಇರುವ 6 ಕ್ರಿಮಿನಲ್ ಪ್ರಕರಣಗಳನ್ನು ಮರೆಮಾಚಿದ್ದಾರೆ ಎಂದು ಇತ್ತೀಚೆಗೆ ಟಿಎಂಸಿಯಿಂದ ಬಿಜೆಪಿ ಸೇರಿದ ಅಧಿಕಾರಿ, ಆರೋಪಿಸಿದ್ದಾರೆ.

    “ಬ್ಯಾನರ್ಜಿ ಅವರು ಟಿಎಂಸಿ ಅಭ್ಯರ್ಥಿಯಾಗಿ ಸಲ್ಲಿಸಿರುವ ಅಫಿಡೆವಿಟ್​ನಲ್ಲಿ ಅವರ ವಿರುದ್ಧ ಇರುವ ಆರು ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆ ತಿಳಿಸಿಲ್ಲ. ಅಸ್ಸಾಂನಲ್ಲಿ 2018 ರಲ್ಲಿ ದಾಖಲಾಗಿರುವ ಐದು ಎಫ್​.ಐ.ಆರ್.ಗಳು ಮತ್ತು ಒಂದು ಸಿಬಿಐ ಎಫ್​.ಐ.ಆರ್​. ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ” ಎಂದಿರುವ ಅಧಿಕಾರಿ, ಈ ಬಗ್ಗೆ ಎಲ್ಲ ಪುರಾವೆಗಳನ್ನು ಒದಗಿಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಕ್ರಿಕೆಟ್ ಆಟಗಾರನಂತೆ ಮೈದಾನಕ್ಕೆ ಹೋಗುತ್ತಿದ್ದ… ಆದರೆ ಮಾಡುತ್ತಿದ್ದುದು ಬೇರೆಯೇ ಕೆಲಸ !

    ಟಿಎಂಸಿಯ ಹಿರಿಯ ನಾಯಕರಾಗಿದ್ದ ಸುವೇಂದು ಅಧಿಕಾರಿ, ಕಳೆದ ಡಿಸೆಂಬರ್​ನಲ್ಲಿ ಬಿಜೆಪಿ ಸೇರಿದ್ದರು. ಈಗ ಬಿಜೆಪಿಯು ಅವರನ್ನು ನಂದೀಗ್ರಾಮದ ಅಭ್ಯರ್ಥಿಯಾಗಿ ಬ್ಯಾನರ್ಜಿ ವಿರುದ್ಧ ಕಣಕ್ಕಿಳಿಸಿದೆ.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿ, “ಮೋದಿಜಿ ಆಗಲಿ, ಮಮತಾ ಜಿ ಆಗಲಿ, ನಾನಾಗಲಿ – ಎಲ್ಲರಿಗೂ ನಿಯಮಗಳು ಒಂದೇ. ನಾನು ಎಲ್ಲಾ ಪುರಾವೆ ಒದಗಿಸಿ ನನ್ನ ಕರ್ತವ್ಯ ಮಾಡಿದ್ದೇನೆ. ಚುನಾವಣಾ ಆಯೋಗವು ಇದನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ನಂಬಿದ್ದೇನೆ” ಎಂದರು. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    “ಪೆಟ್ಟು ಬಿದ್ದ ಹುಲಿ ಹೆಚ್ಚು ಅಪಾಯಕಾರಿ” : ಮಮತಾ ಬ್ಯಾನರ್ಜಿ ಎಚ್ಚರಿಕೆ

    ಕರೊನಾ ನಿಯಮ ಉಲ್ಲಂಘನೆ : ಬಾಲಿವುಡ್ ನಟಿ ವಿರುದ್ಧ ಮುಂಬೈ ಪಾಲಿಕೆ ದೂರು

    “ನನ್ನ ಹೆಲಿಕಾಪ್ಟರ್ ಕೆಟ್ಟಿತ್ತು… ಆದರೆ ನಾನದನ್ನು ಸಂಚು ಎನ್ನುವುದಿಲ್ಲ…”

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts