More

    ನನ್ನನ್ನು ಜೈಲಿಗೆ ಕಳುಹಿಸಲು ಪ.ಬಂಗಾಳ ಸರ್ಕಾರ 295 ಕೋಟಿ ರೂ. ವ್ಯಯಿಸಿದೆ: ಸುವೆಂದು ಅಧಿಕಾರಿ

    ಪ.ಬಂಗಾಳ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ ತನನ್ನು ಜೈಲಿಗೆ ಕಳುಹಿಸಲು 295 ಕೋಟಿ ರೂ. ವೆಚ್ಚ ಮಾಡಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ನೇರ ಆರೋಪ ಎಸಗಿದ್ದಾರೆ.

    ಇದನ್ನೂ ಓದಿ: ಪುಣೆಯಲ್ಲಿ ಸೆ.14,16 ರಂದು ಆರ್​ಎಸ್​ಎಸ್ ಬೈಠಕ್; ಚರ್ಚೆಯಾಗಲಿರುವ 5 ಪ್ರಮುಖ ವಿಷಯಗಳು ಇಂತಿವೆ…

    ಈ ಬಗ್ಗೆ ಮಾತನಾಡಿದ ಸುವೆಂದು ಅಧಿಕಾರಿ, “ಕೇಂದ್ರ ಸರ್ಕಾರ ಚಂದ್ರಯಾನ-3 ಮಿಷನ್‌ ಅನ್ನು ಚಂದ್ರನ ಬಳಿ ಕಳುಹಿಸಲು 615 ಕೋಟಿ ರೂ.ಗಳನ್ನು ಖರ್ಚು ಮಾಡಿತು. ಅದರಂತೆಯೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ನನ್ನನ್ನು ಜೈಲಿಗೆ ಹಾಕಲು 295 ಕೋಟಿ ರೂ. ಹಣವನ್ನು ವ್ಯಯಿಸಿದೆ” ಎಂದು ಆರೋಪಿಸಿದರು.

    ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್​ ಪಕ್ಷದಲ್ಲಿದ್ದ ವೇಳೆ ಅವರ ವಿರುದ್ಧ ಒಂದು ಪ್ರಕರಣವಿತ್ತು. ಟಿಎಂಸಿ ತ್ಯಜಿಸಿ ಬಿಜೆಪಿ ಸೇರಿದ ನಂತರ ಕೇಸ್​ಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಈ ಹಿಂದೆಯೂ ನ್ಯಾಯಾಲಯಗಳು ಸುವೆಂದು ಅಧಿಕಾರಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದವು ಎಂದು ಹೇಳಲಾಗಿದೆ.

    ಇದನ್ನೂ ಓದಿ: ಜೆಜೆಎಂ ಕಾಮಗಾರಿಗೆ ರಸ್ತೆ ಹಾಳು; ಪತ್ರ ಬರೆದರೂ ಸ್ಪಂದಿಸದ ಅಧಿಕಾರಿಗಳು; ಕೆಡಿಪಿ ಸಭೆಯಲ್ಲಿ ಪಿಡಬ್ಲೂೃಡಿ ಅಧಿಕಾರಿಗಳ ಆರೋಪ

    ಪೊಲೀಸರು ತಮ್ಮ ವಿರುದ್ಧ ಸಲ್ಲಿಸಿರುವ ಎಫ್‌ಐಆರ್‌ಗಳನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ ಬಿಜೆಪಿ ನಾಯಕ, ಮಮತಾ ಬ್ಯಾನರ್ಜಿ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಭದ್ರಪಡಿಸಿಕೊಳ್ಳಲು ದುಬೈಗೆ ತೆರಳಿದ್ದಾರೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).

    ‘ಜವಾನ್’​ ಸಕ್ಸಸ್ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್​ ನಟನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಿಯಾಮಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts