More

    ಖಜೂರಿ ಪಿಡಿಒ ಅಮಾನತು ಮಾಡಿ

    ಆಳಂದ: ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಖಜೂರಿ ಗ್ರಾಮ ಪಂಚಾಯಿತಿ ಪಿಡಿಒ ಸಮರ್ಪಕವಾಗಿ ಯೋಜನೆ ಅನುಷ್ಠಾನಕ್ಕೆ ತಂದಿಲ್ಲ. ಹೀಗಾಗಿ ಕೂಡಲೇ ಪಿಡಿಒ ಅವರನ್ನು ಅಮಾನತು ಮಾಡಿ ಎಂದು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಜಿಪಂ ಸಿಇಒಗೆ ಸೂಚನೆ ನೀಡಿದರು.

    ಖಜೂರಿಯ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿ, ನಿಂಬರ್ಗಾ, ಮಾದನಹಿಪ್ಪರಗಾ ಹೋಬಳಿಗಳಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಜರುಗಿದೆ. ಆದರೆ ಖಜೂರಿಯಲ್ಲಿ ಯಾವುದೇ ವ್ಯವಸ್ಥೆ ಮಾಡಿಲ್ಲ. ಕೂರಲು ಸ್ಥಳವಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಪಿಡಿಒ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಕಿಡಿಕಾರಿದರು.

    ಗ್ರಾಪಂ ಅಧ್ಯಕ್ಷೆ ಸುನೀತಾ ಮಗರೆ, ಉಪಾಧ್ಯಕ್ಷ ತಿಪ್ಪಣ್ಣ ಬಂಡೆ, ತಹಸೀಲ್ದಾರ್ ಯಲ್ಲಪ್ಪ ಸುಬೇದಾರ, ತಾಪಂ ಇಒ ಮಾನಪ್ಪ ಕಟ್ಟಿಮನಿ, ಪ್ರಮುಖಾರ ಶ್ರೀಕಾಂತ ಮೇಗಂಜಿ, ಮಹಾದೇವ ಪಂಚಮುಖಿ, ರಾಜಶೇಖರ ಪಾಟೀಲ್ ಚಿತಲಿ, ಅಶೋಕ ಸಾವಳೇಶ್ವರ, ಮೋಹನಗೌಡ ಪಾಟೀಲ್, ಭೀಮರಾವ ಢಗೆ, ಶಿವಲಿಂಗಪ್ಪ ಬಂಗರಗಿ, ಸಿದ್ದಣ್ಣ ಬಂಗರಗಿ, ಮಹಾದೇವಪ್ಪ ವಾಡೆ, ಪ್ರತಾಪ ಕುಲಕರ್ಣಿ, ನಂದಕುಮಾರ ಕುಲಕರ್ಣಿ, ಗಂಗಾಧರ ಕುಂಬಾರ ಇತರರಿದ್ದರು.

    ಖಜೂರಿಯಲ್ಲಿ ಉನ್ನತ ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರವೇ ಡಿಗ್ರಿ ಕಾಲೇಜು ಮಂಜೂರು ಮಾಡಲಾಗುವುದು. ಜಿಲ್ಲೆಗೆ ೧೨೪ ಕೋಟಿ ರೂ. ಬೆಳೆ ವಿಮೆ ಹಣ ಬಂದಿದ್ದು, ಅದರಲ್ಲಿ ನಮ್ಮ ತಾಲೂಕಿಗೆ ೬೨ ಕೋಟಿ ರೂ. ಬಂದಿದೆ.
    | ಬಿ.ಆರ್.ಪಾಟೀಲ್, ಮುಖ್ಯಮಂತ್ರಿ ಸಲಹೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts