More

  ಬೈಪೋಲಾರ್ ಕಾಯಿಲೆಯಿಂದ ಸುಶಾಂತ್ ನರಕಯಾತನೆ; ಧನುಷ್​ ಸಿನಿಮಾದಲ್ಲಿದೆ ಉತ್ತರ!

  ಸುಶಾಂತ್​ಗೆ ವಿಚಿತ್ರ ಕಾಯಿಲೆ ಇತ್ತೆಂಬುದನ್ನು ಈಗಷ್ಟೇ ಮನೋವೈದ್ಯರು ಖಚಿತಪಡಿಸಿದ್ದಾರೆ. ಸೂಕ್ತ ದಾಖಲೆಗಳನ್ನೂ ನೀಡಿದ್ದಾರೆ. ಸುಶಾಂತ್​ ಅವರ ಸ್ಥಿತಿಯನ್ನೂ ವೈದ್ಯರು ವಿವರಿಸಿದ್ದರು. ಹಾಗಾದರೆ, ಆ ಕಾಯಿಲೆ ಹೇಗಿರುತ್ತದೆ? ಅದರ ಲಕ್ಷಣಗಳೇನು? ಆ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯ ಮನಸ್ಥಿತಿ ಹೇಗಿರುತ್ತದೆ? ಹೀಗೆ ಒಂದಷ್ಟು ಪ್ರಶ್ನೆಗಳು ಸಹಜವಾಗಿ ಮೂಡಬಹುದು. ಇದೀಗ ಈ ಕಾಯಿಲೆಯ ಬಗ್ಗೆಯೇ ಕಾಲಿವುಡ್​ನಲ್ಲಿ ಸಿನಿಮಾವೊಂದು ನಿರ್ಮಾಣವಾಗಿತ್ತು. ಆ ಚಿತ್ರದ ಕಥಾನಾಯಕನ ಸ್ಥಿತಿಯೇ ಸುಶಾಂತ್ ಅವರನ್ನೂ ಆವರಿಸಿತ್ತು ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: ಸುಶಾಂತ್​ಗಿತ್ತು ವಿಚಿತ್ರ ಕಾಯಿಲೆ; ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಸೈಕಿಯಾಟ್ರಿಸ್ಟ್ !

  ಹಾಗಾದರೆ ಯಾವುದಾ ಸಿನಿಮಾ? ಧನುಷ್ ಅಭಿನಯದ ‘3‘ ಸಿನಿಮಾದಲ್ಲಿ ಕಥಾನಾಯಕ ಬೈಪೋಲಾರ್ ಕಾಯಿಲೆಯಿಂದಲೇ ಬಳಲುತ್ತಿರುತ್ತಾನೆ. ಆ ಕಾಯಿಲೆಯನ್ನೇ ಪ್ರಧಾನವಾಗಿಟ್ಟುಕೊಂಡು ಸಿನಿಮಾ ಮಾಡಿದ್ದರಂತೆ ನಿರ್ದೇಶಕರು. ಹೌದು, ನಿರ್ದೇಶಕಿ ಐಶ್ವರ್ಯಾ ಧನುಷ್ ಹೆಣೆದ ‘3‘ ಚಿತ್ರದಲ್ಲಿ ಖಿನ್ನತೆಯ ಬಗ್ಗೆ ಹೆಚ್ಚು ಹೇಳಲಾಗಿತ್ತು. ಒಮ್ಮೊಮ್ಮೆ ಚೆನ್ನಾಗಿರುವ ನಾಯಕ ಒಮ್ಮಿಂದೊಮ್ಮೆ ಬದಲಾಗಿ ಬಿಡುತ್ತಾನೆ. ಮಾನಸಿಕ ಸ್ಥಿಮಿತ ಕಳೆದುಕೊಂಡು, ಖಿನ್ನತೆಗೆ ಜಾರುತ್ತಿರುತ್ತಾನೆ. ಅಷ್ಟೇ ಅಲ್ಲ ಹಲವು ಬಾರಿ ಆತ್ಮಹತ್ಯೆಗೂ ಪ್ರಯತ್ನಿಸಿರುತ್ತಾನೆ.

  ಇದನ್ನೂ ಓದಿ: ಗೇಮ್​ ಆಫ್ ಥ್ರೋನ್ಸ್ ರೀತಿಯಲ್ಲಿ ಮಹಾಭಾರತ; ನೆಟ್​ಫ್ಲಿಕ್ಸ್​ನಲ್ಲಿ ಆಮೀರ್ ಮಹಾಸರಣಿ!

  ಈಗಷ್ಟೇ ವೈದ್ಯರು ಸುಶಾಂತ್​ಗೆ ಬೈಪೋಲಾರ್ ಕಾಯಿಲೆ ಇರುವ ಬಗ್ಗೆ ಹೇಳಿಕೆ ನೀಡಿದ್ದೇ ತಡ, ಧನುಷ್​ ಅವರ ಈ ಸಿನಿಮಾ ಬಗ್ಗೆ ಟಾಕ್ಸ್ ಶುರುವಾಗಿದ್ದು, ಚರ್ಚೆಗೆ ಕಾರಣವಾಗಿದೆ. ಅಂದಹಾಗೆ, ಈ ಕಾಯಿಲೆಗೆ ತುತ್ತಾದರೆ, ಖಿನ್ನತೆಯ ಪ್ರಮಾಣ ಮತ್ತು ಆರೋಗ್ಯದಲ್ಲಿ ತೀವ್ರ ಸ್ವರೂಪದ ಏರಿಳಿತ ಕಂಡುಬರುತ್ತದೆ. ಇದಕ್ಕೆ ಮ್ಯಾನಿಕ್​ ಡಿಪ್ರೆಷನ್​ ಎಂದೂ ಕರೆಯುತ್ತಾರೆ. ಈ ಕಾಯಿಲೆ ಬಗ್ಗೆ ಸುಶಾಂತ್​ಗೆ ಗೊತ್ತಿದ್ದರೂ, ಕೇವಲ ಎರಡರಿಂದ ಮೂರು ಸಲ ಮಾತ್ರ ಚಿಕಿತ್ಸೆಗೆ ಬಂದಿದ್ದರು ಎಂದು ವೈದ್ಯರು ಸುಶಾಂತ್​ ಹೆಲ್ತ್ ಕಂಡಿಷನ್​ ಬಗ್ಗೆ ಮಾಹಿತಿ ನೀಡಿದ್ದರು. (ಏಜೆನ್ಸೀಸ್​)

  ಶಾರುಖ್​ ಬಂಗಲೆಗೆ ಪ್ಲಾಸ್ಟಿಕ್​ ಹೊದಿಕೆ; ಕರೊನಾಕ್ಕೆ ಹೆದರಿದರಾ ಬಾಜಿಗಾರ್​?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts