More

    ಖಿನ್ನತೆಗೆ ಒಳಗಾಗಿದ್ದ ಸುಶಾಂತ್​ ಅರೆಹುಚ್ಚರಂತಾಗಿದ್ದರು, ತಾಯಿಯಂತೆ ರಿಯಾ ಆರೈಕೆ ಮಾಡುತ್ತಿದ್ದರು

    ನವದೆಹಲಿ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ದ್ವಿವ್ಯಕ್ತಿತ್ವ ಸಮಸ್ಯೆಯಿಂದ ಬಳಲುತ್ತಿದ್ದರು. ತೀವ್ರ ತರದ ಖಿನ್ನತೆಯಿಂದಾಗಿ ಅರೆಹುಚ್ಚನಂತಾಗಿದ್ದರು. ಅವರಿಗೆ ಇಂಥ ಅಟ್ಯಾಕ್​ ಆದಾಗಲೆಲ್ಲ ತಾಯಿಯಂತೆ ಅಕ್ಕರೆ ತೋರಿ, ಅವರನ್ನು ಆರೈಕೆ ಮಾಡಿದ್ದು ನಟಿ ರಿಯಾ ಚಕ್ರವರ್ತಿ ಎಂದು ಸುಶಾಂತ್​ಗೆ ಮಾನಸಿಕ ಚಿಕಿತ್ಸೆ ಕೊಡುತ್ತಿದ್ದ ಡಾ. ಸುಸಾನ್​ ವಾಕರ್​​ ಹೇಳಿದ್ದಾರೆ.

    ರಿಯಾ ಚಕ್ರವರ್ತಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದ್ದ. ಅವರನ್ನು ಮೂಲೆಗುಂಪು ಮಾಡಲು ಸಂಚು ರೂಪಿಸಿದಂತೆ ಕಾಣುತ್ತಿದ್ದೆ. ಆದರೆ, ರಿಯಾ ಅವರಿಗೆ ಸುಶಾಂತ್​ ಬಗ್ಗೆ ತುಂಬಾ ಕಾಳಜಿ, ಪ್ರೀತಿಯಿತ್ತು. ಅವರು ಮಾನಸಿಕವಾಗಿ ಕುಸಿದಾಗಲೆಲ್ಲ ಸುಶಾಂತ್​ಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಅವರ ಬಗ್ಗೆ ಮಿತಿಮೀರಿ ಕೆಸೆರೆಚಾಟ ನಡೆಯುತ್ತಿದ್ದು, ಅವರನ್ನು ಮೂಲೆಗುಂಪು ಮಾಡಲು ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡುವುದು ಸೂಕ್ತ ಎಂಬ ಕಾರಣಕ್ಕಾಗಿ ತಾವು ಸುದ್ದಿಗಾರರ ಮುಂದೆ ಬಂದಿರುವುದಾಗಿ ಡಾ. ಸುಸಾನ್​ ವಾಕರ್​ ಸ್ಪಷ್ಟಪಡಿಸಿದ್ದಾರೆ.

    ಒಬ್ಬ ಮಾನಸಿಕ ರೋಗ ತಜ್ಞೆಯಾಗಿ ಮತ್ತು ಮಾನಸಿಕಚಿಕಿತ್ಸಕಳಾಗಿ 2019ರ ನವೆಂಬರ್​ ಮತ್ತು ಡಿಸೆಂಬರ್​ನಲ್ಲಿ ಸುಶಾಂತ್​ ಮತ್ತು ರಿಯಾ ಅವರನ್ನು ಭೇಟಿಯಾಗಿದ್ದೆ. ಈ ವರ್ಷದ ಜೂನ್​ನಲ್ಲಿ ಅವರನ್ನು ಮತ್ತೊಮ್ಮೆ ಭೇಟಿಯಾಗಿದ್ದೆ ಎಂದು ಹೇಳಿದ್ದಾರೆ.

    ಇವರಿಬ್ಬರೂ ಒಟ್ಟಾಗಿ ಮೊದಲ ಬಾರಿಗೆ ಭೇಟಿಯಾದಾಗ ಪರಸ್ಪರರ ಬಗ್ಗೆ ಇವರಿಬ್ಬರಿಗೂ ಇದ್ದ ಕಾಳಜಿ, ಪ್ರೀತಿ ಮತ್ತು ಬೆಂಬಲ ನೋಡಿ ನಾನು ಪ್ರಭಾವಿತಳಾಗಿದ್ದೆ. ಇದರಿಂದ ಅವರಿಬ್ಬರೂ ತುಂಬಾ ಆಪ್ತವಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಸುಶಾಂತ್​ ನನ್ನನ್ನು ಭೇಟಿಯಾಗಬೇಕಾದ ದಿನಾಂಕಗಳನ್ನು ನಿಖರವಾಗಿ ನೆನಪಿಟ್ಟುಕೊಂಡು, ತುಂಬಾ ಹೆದರಿಕೊಂಡಿರುತ್ತಿದ್ದ ಅವರಿಗೆ ನನ್ನನ್ನು ಭೇಟಿಯಾಗಲು ರಿಯಾ ಪ್ರೋತ್ಸಾಹಿಸುತ್ತಿದ್ದರು ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ನಯವಂಚಕನ ಚಪ್ಪಲಿ, ಶೂ ಪ್ರೇಮ; ಈತನಲ್ಲಿದೆ ವೈವಿಧ್ಯಮಯ ಸಂಗ್ರಹ

    ಸುಶಾಂತ್​ ಅವರು ದ್ವಿವ್ಯಕ್ತಿತ್ವದ ಸಮಸ್ಯೆಯಿಂದ ಬಳಲುತ್ತಿದ್ದರು. ಇದೊಂದು ಮಾನಸಿಕ ಕಾಯಿಲೆಯಾಗಿದ್ದು, ಇದು ಅಟ್ಯಾಕ್​ ಆದಾಗ ಆ ವ್ಯಕ್ತಿಯನ್ನು ತುಂಬಾ ಬಳಲಿಸಿಬಿಡುತ್ತದೆ. ಈ ಸಂದರ್ಭದಲ್ಲಿ ಆ ವ್ಯಕ್ತಿಯು ತೀವ್ರವಾದ ವ್ಯಾಕುಲತೆ, ಖಿನ್ನತೆ ಮತ್ತು ಕೆಲವೊಮ್ಮೆ ವಿಪರೀತವಾದ ಆಲೋಚನಾ ಕ್ರಮದಂಥ ಸಮಸ್ಯೆಗಳು ಕಾಣಿಸಿಕೊಳ್ಳುವ ಜತೆಗೆ ಬುದ್ಧಿವಿಕಲ್ಪಕ್ಕೆ ಒಳಗಾಗುತ್ತಾನೆ ಎಂದು ವಿವರಿಸಿದ್ದಾರೆ.

    ಸುಶಾಂತ್​ ಅವರಿಗೆ ತುಂಬಾ ಗಂಭೀರ ಎನ್ನಬಹುದಾದ ರೀತಿಯಲ್ಲಿ ಇಂಥ ಅಟ್ಯಾಕ್​ಗಳು ಪದೇಪದೆ ಬರುತ್ತಿದ್ದವು. ಇಂಥ ಸಂದರ್ಭದಲ್ಲಿ ಅವರು ಅರೆಹುಚ್ಚನಂತೆ ಆಗುತ್ತಿದ್ದರು. ಆಗ ಅವರೊಂದಿಗೆ ಇದ್ದು ತಾಯಿಯಂತೆ ಆರೈಕೆ ಮಾಡುತ್ತಾ, ಅವರನ್ನು ಶಾಂತಗೊಳಿಸಿ ಬೆಂಬಲವಾಗಿ ನಿಲ್ಲುತ್ತಿದ್ದವರು ರಿಯಾ ಚಕ್ರವರ್ತಿ ಎಂದು ಹೇಳಿದ್ದಾರೆ.

    ಅವರು ಹುಷಾರು ತಪ್ಪಿದಾಗಲೆಲ್ಲವೂ ರಿಯಾ ಅವರ ಪಕ್ಕದಲ್ಲಿ ಇರುತ್ತಿದ್ದರು. ತುಂಬಾ ತಾಳ್ಮೆಯಿಂದ, ಅತ್ಯಂತ ಪ್ರೀತಿಯಿಂದ ಅವರು ಈ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಕುಟುಂಬದ ಸದಸ್ಯರಲ್ಲಿ ಯಾರಾದರೂ ಒಬ್ಬರಿಗೆ ಈ ರೀತಿ ಮಾನಸಿಕ ಸಮಸ್ಯೆ ಉಂಟಾದರೆ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಆದರೆ, ತಮಗೆ ಸಂಬಂಧವಿಲ್ಲದ ಸುಶಾಂತ್​ ಅವರನ್ನು ತನ್ನವರೇ ಎಂದು ಭಾವಿಸಿ ರಿಯಾ ಆರೈಕೆ ಮಾಡುತ್ತಿದ್ದರು. ಈ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳುವ ಜತೆಗೆ ಇದೆಲ್ಲವನ್ನೂ ಮೌನವಾಗಿ ಸಹಿಸಬೇಕಾಗುತ್ತದೆ. ಸುಶಾಂತ್​ಗಾಗಿ ರಿಯಾ ಅವರು ಇಷ್ಟೆಲ್ಲ ಮಾಡಿದರೂ ಅನಗತ್ಯವಾಗಿ ತುಂಬಾ ಸೂಕ್ಷ್ಮ ಸ್ವಭಾವದ ಅವರನ್ನು ನಿಂದಿಸಲಾಗುತ್ತಿದೆ. ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಮಾಡಲಾಗುತ್ತಿರುವ ಅಪಪ್ರಚಾರ, ಅಪನಿಂದನೆಗಳನ್ನು ಕಂಡು ನನಗೆ ತುಂಬಾ ಆಘಾತವಾಗಿದೆ ಎಂದು ಹೇಳಿದ್ದಾರೆ.

    ಭಾರತದ ಮಕ್ಕಳ ಮಿಡ್​- ಡೇ ಮೀಲ್ಸ್​ ಗಾಗಿ ಅಮೆರಿಕದಲ್ಲಿ 9.5 ಲಕ್ಷ ಡಾಲರ್​ ದೇಣಿಗೆ ಸಂಗ್ರಹಿಸಿದ ಅಕ್ಷಯ ಪಾತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts