More

    ಭಾರತದ ಮಕ್ಕಳ ಮಿಡ್​- ಡೇ ಮೀಲ್ಸ್​ ಗಾಗಿ ಅಮೆರಿಕದಲ್ಲಿ 9.5 ಲಕ್ಷ ಡಾಲರ್​ ದೇಣಿಗೆ ಸಂಗ್ರಹಿಸಿದ ಅಕ್ಷಯ ಪಾತ್ರ

    ಹೂಸ್ಟನ್​:ಭಾರತದ ಸರ್ಕಾರೇತರ ಸಂಸ್ಥೆ ಅಕ್ಷಯ ಪಾತ್ರ ಭಾರತದ ಮಕ್ಕಳ ಮಿಡ್-ಡೇ ಮೀಲ್ಸ್​ ಹೆಸರಿನಲ್ಲಿ ಅಮೆರಿಕದಲ್ಲಿ 9.5 ಲಕ್ಷ ಡಾಲರ್​ (ಅಂದಾಜು 7.12 ಕೋಟಿ ರೂಪಾಯಿ) ದೇಣಿಗೆ ಸಂಗ್ರಹಿಸಿದೆ. ಅಕ್ಷಯ ಪಾತ್ರದ ಟೆಕ್ಸಾಸ್ ಘಟಕ ವರ್ಚುವಲ್ ಗಾಲಾ – ಟೆಕ್ನಾಲಜಿ ಫಾರ್​ ಚೇಂಜ್ ಎಂಬ ಕಾರ್ಯಕ್ರಮ ಆಯೋಜಿಸಿ ಅದರ ಮೂಲಕ ಈ ಹಣವನ್ನು ಸಂಗ್ರಹಿಸಿದೆ.

    ಈ ಕಾರ್ಯಕ್ರಮದಲ್ಲಿ ಜಗತ್ತಿನ ನಾನಾ ಭಾಗಗಳ 1,000ಕ್ಕೂ ಹೆಚ್ಚು ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಇತರೆ ಗಣ್ಯರು ಭಾಗವಹಿಸಿದ್ದರು.ಭಾರತದಲ್ಲಿನ ಮಕ್ಕಳ ಹಸಿವು ನೀಗಿಸುವುದು ಮತ್ತು ಅವರಿಗೆ ಶಿಕ್ಷಣ ಒದಗಿಸುವುದಕ್ಕೆ ಉತ್ತೇಜನ ನೀಡುವ ಉದ್ದೇಶವನ್ನು ಮುಂದಿಟ್ಟುಕೊಂಡು ಅಕ್ಷಯ ಪಾತ್ರ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

      ಇದನ್ನೂ ಓದಿಸುದ್ದಿ ಸಮಗ್ರ: ಪ್ರಮುಖ ಮಂದಿರಗಳ ಖಜಾನೆ ಖಾಲಿ ಖಾಲಿ

    ಟೆಕ್ಸಾಸ್ ಗಾಲಾ ಕಾರ್ಯಕ್ರಮವು ಜುಲೈ25ರಂದು ಆಸ್ಟಿನ್, ಡಲ್ಲಾಸ್​ ಮತ್ತು ಹೂಸ್ಟನ್​ಗಳಲ್ಲಿ ಆಯೋಜಿಸಲಾಗಿತ್ತು.ಅಕ್ಷಯ ಪಾತ್ರದ ಈ ಘಟಕಗಳ ಸ್ವಯಂ ಸೇವಕರು ಇದಕ್ಕಾಗಿ ಬಹಳಷ್ಟು ಶ್ರಮವಹಿಸಿದ್ದರು.ಇನ್ಫೋಸಿಸ್ ನಾರಾಯಣಮೂರ್ತಿ ಅವರೊಂದಿಗೆ ವೆಸ್ಟರ್ನ್​ ಡಿಜಿಟಲ್​ನ ಪ್ರೆಸಿಡೆಂಠ್​ ಶಿವ ಶಿವರಾಮ್ ಅವರ ಸಂವಾದವೂ ಈ ಕಾರ್ಯಕ್ರಮದ ಭಾಗವಾಗಿತ್ತು. ಶಿವ ಶಿವರಾಂ ಅವರು ಅಕ್ಷಯ ಪಾತ್ರ ಫೌಂಡೇಷನ್ ಯುಎಸ್​ಎ ಯ ಚೇರ್​ಮನ್ ಆಗಿ ನೇಮಕವಾಗಿದ್ದಾರೆ. ಅವರ ಜತೆಗೆ ಫೌಂಡೇಷನ್​ನ ವೈಸ್ ಚೇರ್ಮನ್ ಶ್ರೀವತ್ಸನ್ ರಾಜನ್ ಕೂಡ ಇದ್ದರು. ಜಯಶ್ರೀ ರಾಮನಾಥ್ ಅವರ ಕರ್ನಾಟಿಕ್ ಸಂಗೀತ ಈ ವರ್ಚುವಲ್ ಮೀಟಿಂಗ್​ನ ವಿಶೇಷವಾಗಿತ್ತು.

    ಅಕ್ಷಯ ಪಾತ್ರ ಫೌಂಡೇಷನ್ ಜಗತ್ತಿನ ಅತಿದೊಡ್ಡ ಲಾಭೋದ್ದೇಶ ರಹಿತ ಸಂಘಟನೆಯಾಗಿದ್ದು, ಮಿಡ್​-ಡೇ ಮೀಲ್​ ಯೋಜನೆಯನ್ನು ಮುನ್ನಡೆಸುತ್ತಿದೆ. ಇದರ ಮೂಲಕ ಭಾರತದ 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 19,039 ಶಾಲೆಗಳ 18 ಲಕ್ಷ ವಿದ್ಯಾರ್ಥಿಗಳ ಹಸಿವು ನೀಗಿಸುತ್ತಿದೆ.(ಏಜೆನ್ಸೀಸ್)

    ಕರೊನಾ ಕೇಸ್​: ಸಕ್ರಾ ಸೇರಿ ಐದು ಆಸ್ಪತ್ರೆಗಳ ವಿರುದ್ಧ ಎಫ್​ಐಆರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts