More

    ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ

    ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ ಆತ್ಮಹತ್ಯೆ ಸುದ್ದಿ ಇಡೀ ಚಿತ್ರರಂಗವನ್ನು ಶಾಕ್​ಗೆ ತಳ್ಳಿದೆ.
    ಕಡೆಯ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಸುಶಾಂತ್​ ಕವನವೊಂದನ್ನು ಬರೆದುಕೊಂಡು ಅದರಲ್ಲಿ ತಾಯಿಯನ್ನು ಸ್ಮರಿಸಿಕೊಂಡಿದ್ದರು. ಬದುಕನ್ನು ಕ್ಷಣಿಕ ಎಂದು ಬಣ್ಣಿಸಿ ತಾಯಿಯ ಪೋಟೊವೊಂದನ್ನು ಅಪ್​ಲೋಡ್​ ಮಾಡಿದ್ದರು.

    ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸತ್ಯವನ್ನು ಇನ್ನೂ ಅವರ ಅಭಿಮಾನಿಗಳು ಹಾಗೂ ಕುಟುಂಬದವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ತಿಂಗಳ ಆರಂಭದಲ್ಲಿಯೇ ತಾಯಿಯ ನೆನಪಿನಲ್ಲಿ ಬರೆದುಕೊಂಡಿದ್ದ ಪೋಸ್ಟ್​ವೊಂದನ್ನು ಶೇರ್​ ಮಾಡಿಕೊಂಡಿದ್ದರು.

    ತಾಯಿಯ ಕಪ್ಪು ಬಿಳುಪಿನ ಫೊಟೋದೊಂದಿಗೆ ತನ್ನದೂ ಕಪ್ಪುಬಿಳುಪಿನ ಫೋಟೋವನ್ನು ಫೋಟೋವನ್ನು ಕೊಲಾಜ್​ ಮಾಡಿ ಜೂನ್​ 3ರಂದು ಇನ್​ಸ್ಟಾಗ್ರಾಂನಲ್ಲಿ ಹಾಕಿದ್ದರು.

    ಇದನ್ನೂ ಓದಿ; ‘ಸೇಲ್ಸ್​ಮನ್​’ ಆಗಲಿಲ್ಲ ಶಿಕ್ಷಕ; ವಜಾಗೊಳಿಸಿದ ಸಂಸ್ಥೆ; ಬಾಳೆಹಣ್ಣು ಮಾರಾಟಕ್ಕಿಳಿದವನ ಕೈಹಿಡಿದ ವಿದ್ಯಾರ್ಥಿಗಳು

    ‘ಮಸುಕಾದ ಗತಕಾಲವು ಕಣ್ಣಾಲಿಗಳೊಂದಿಗೆ ಬಾಷ್ಪೀಕರಣವಾಗುತ್ತಿದೆ… ಮುಗಿಯದ ಕನಸುಗಳು ನಗುವಿನ ಕಮಾನು ಕಟ್ಟಿವೆ….. ಕ್ಷಣಿಕವಾದ ಬದುಕು ಇವೆರಡರ ನಡುವಿನ ಹೊಯ್ದಾಟದಲ್ಲಿದೆ….’ ಎಂದು ಸುಶಾಂತ್​ ಬರೆದುಕೊಂಡಿದ್ದರು. ಇದಕ್ಕೆ ಆತನ ಗೆಳತಿ ಎಂದೇ ಬಿಂಬಿಸಲಾದ ರಿಯಾ ಚಕ್ರವರ್ತಿ ‘ರೆಡ್​ ಹಾರ್ಟ್’​ ಸಿಂಬಲ್​ಗಳನ್ನು ಕಾಮೆಂಟ್​ಗಳಾಗಿಸಿದ್ದಳು.

    ತಾಯಿಯ ಬಗ್ಗೆ ಸುಶಾಂತ್​ ಅತ್ಯಂತ ಭಾವುಕರಾಗಿದ್ದರು. ಧೋನಿ; ಅನ್​ಟೋಲ್ಡ್​ ಸ್ಟೋರಿ ಚಿತ್ರ ಬಿಡುಗಡೆ ಅವಧಿಯಲ್ಲಿ ‘ಜೀವನದಲ್ಲಿ ನಾನು ಯಶಸ್ಸು ಗಳಿಸುವುದನ್ನು ನೋಡಲು ಆಕೆ ಬದುಕಿರಬೇಕಿತ್ತು’ ಎಂದು ಹೇಳಿಕೊಂಡಿದ್ದರು. ಆಕೆ ನನ್ನ ಬಗ್ಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆ ಪಡುತ್ತಿದ್ದಳು ಎಂದಿದ್ದರು.

    ಇದನ್ನೂ ಓದಿ; ಸಾಲ್ಮನ್​ ಮೀನಿನಲ್ಲಿತ್ತು ಕರೊನಾ ವೈರಸ್​; ಮಾರಾಟ ಬಂದ್​, ಮಾರುಕಟ್ಟೆ ಸ್ಥಗಿತ 

    ತಾಯಿ ಬದುಕಿದ್ದರೆ ಈಗ ನಾನೇನಾಗಿದ್ದೆಯೋ ಅದಕ್ಕಿಂತ ಭಿನ್ನ ವ್ಯಕ್ತಿಯಾಗಿರುತ್ತಿದ್ದೆ. ಈಗ ನೋಡುತ್ತಿರುವ ಜಗತ್ತು ಸಂಪೂರ್ಣ ಬದಲಾಗಿರುತ್ತಿತ್ತು. ಆದರೆ, ನಾವು ಮತ್ತೆ ಗತಕಾಲಕ್ಕೆ ಹೋಗುವುದು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು.

    ಈ ಹಿಂದೆ ನನ್ನನ್ನು ರೋಮಾಂಚನಗೊಳಿಸುತ್ತಿದ್ದ ಸಂಗತಿಗಳೀಗ ನನಗೆ ಸಾಮಾನ್ಯ ಎನಿಸುತ್ತಿವೆ. ಏಕೆಂದರೆ ನನ್ನೊಳಗೊಂದು ಬದಲಾವಣೆಯಾಗಿದೆ. ಸಂಬಂಧಗಳು, ಯಶಸ್ಸು, ಯಾವುದು ಕೂಡ ನನಗೆ ಮಹತ್ತರವಾದುದು ಎನಿಸುತ್ತಿಲ್ಲ ಎಂದು ಸುಶಾಂತ್​ ಹೇಳಿದ್ದರು.
    ಈ ಹಿಂದೆಯೂ ಸುಶಾಂತ್​ ಅಮ್ಮನ ಬಗ್ಗೆ ಹಲವು ಕವನಗಳನ್ನು ರಚಿಸಿ ಶೇರ್​ ಮಾಡಿಕೊಂಡಿದ್ದರು. ಇದೀಗ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

    ಜೂನ್​ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್​ ; ಇಲ್ಲಿದೆ ಫ್ಯಾಕ್ಟ್​ಚೆಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts