More

    ಸುಶಾಂತ್ ಸಿಂಗ್ ಅ​ಜರಾಮರ; ಕುಟುಂಬದಿಂದ ಹೊಸ ನಿರ್ಧಾರ…

    ಸುಶಾಂತ್​ ಸಿಂಗ್​ ರಜಪೂತ್​. ಬಾಲಿವುಡ್​ನ 34 ವರ್ಷದ ಯುವ ನಟ. ಆದರೆ, ಇದೀಗ ಈ ನಟ ನೆನಪು ಮಾತ್ರ. ಆ ನೆನಪನ್ನೇ ಚಿರಸ್ಥಾಯಿಯಾಗಿ ಉಳಿಸಿಕೊಳ್ಳಲು ಅವರ ಕುಟುಂಬ ನಿರ್ಧರಿಸಿದೆ. ಸುಶಾಂತ್​ ಸಿಂಗ್​ ರಜಪೂತ್​ ಫೌಂಡೇಷನ್​ ಹೆಸರಿನಲ್ಲಿ ಸಂಸ್ಥೆ ತೆರೆದು, ಆ ಮೂಲಕ ಒಂದಷ್ಟು ಉತ್ಸಾಹಿ ಯುವಕರ ಬೆನ್ನಿಗೆ ನಿಲ್ಲಲು ನಿರ್ಧರಿಸಿದೆ.
    ಹೌದು, ಇಂಜಿನಿಯರಿಂಗ್​ ವಿದ್ಯಾರ್ಥಿಯಾಗಿದ್ದ ಸುಶಾಂತ್​ಗೆ ಕೇವಲ ಸಿನಿಮಾವೊಂದೇ ಇಷ್ಟದ ಕ್ಷೇತ್ರವಾಗಿರಲಿಲ್ಲ. ಸೈನ್ಸ್, ಕ್ರೀಡೆಯೂ ಇಷ್ಟದ ಕ್ಷೇತ್ರವಾಗಿತ್ತು. ಅದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಪ್ರೀತಿಯ ಪುತ್ರನ ಹೆಸರಿನಲ್ಲಿ ಫೌಂಡೇಷನ್​ ತೆರೆಯಲು ತೀರ್ಮಾನಿಸಿದ್ದಾರೆ.

    ಇದನ್ನೂ ಓದಿ: ‘ಇಂಡಸ್ಟ್ರಿ ಪೆದ್ದ’ ಆಗುವುದಕ್ಕೆ ಹೊರಟಿದ್ದಾರಾ ಮೆಗಾಸ್ಟಾರ್​?

    ಬಾಲ್ಯದ ದಿನಗಳನ್ನು ಕಳೆದ ಪಾಟ್ನಾದ ರಾಜೀವ್​ ನಗರದಲ್ಲಿನ ಮನೆಯನ್ನು ಸ್ಮಾರಕ ರೂಪದಲ್ಲಿ ಹೊರತರಲು ತಂದೆ ಕೆಕೆ ಸಿಂಗ್​ ಕನಸಿಟ್ಟುಕೊಂಡಿದ್ದಾರೆ. ಸುಶಾಂತ್​ಗೆ ಕಲೆಹಾಕಿದ ಸಾಕಷ್ಟು ಪುಸ್ತಕಗಳು, ಪ್ರಶಸ್ತಿಗಳು ಎಲ್ಲದಕ್ಕಿಂತ ಹೆಚ್ಚಾಗಿ ಅತೀ ದುಬಾರಿ ಮೊತ್ತದ ಟೆಲಿಸ್ಕೋಪ್​ ಸಹ ಆ ಮೆಮೊರಿಯಲ್​ನಲ್ಲಿ ಸ್ಥಾನ ಪಡೆಯಲಿದೆ. ಅಷ್ಟೇ ಅಲ್ಲ ಸುಶಾಂತ್​ ಸಿಂಗ್​ ಹೆಸರಿನಲ್ಲಿನ ಇನ್ಸ್ಟಾ, ಟ್ವಿಟರ್​, ಫೇಸ್​ಬುಕ್​ ಸಹ ಎಂದಿನಂತೆ ಕಾರ್ಯನಿರ್ವಹಿಸಲಿವೆ.

    ಇದನ್ನೂ ಓದಿ: ಸುಶಾಂತ್​, ಟಿಕ್​ಟಾಕ್​ ಸ್ಟಾರ್​ ಸಿಯಾ ಆತ್ಮಹತ್ಯೆಗೂ ಸಂಬಂಧವಿದೆಯಾ? ಪೊಲೀಸರಿಗೇಕೆ ಸಂಶಯ?

    ಅಂದಹಾಗೆ, ಜೂ. 14ರಂದು ಮುಂಬೈನ ಬಾಂದ್ರಾದಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆತ್ಮಹತ್ಯೆ ಎಂದು ಸಾಬೀತಾದರೂ, ತನಿಖೆ ಮಾತ್ರ ನಿಂತಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts