More

    ಸುಶಾಂತ್​ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಹೆಸರು ಎಂಟ್ರಿ: ಯಾರು ಈ ಶ್ರುತಿ ಮೋದಿ?

    ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣ ಸಿಬಿಐ ಕೈಗೆತ್ತಿಕೊಳ್ಳುತ್ತಿದ್ದಂತೆ ಆರು ಮಂದಿಯ ವಿರುದ್ಧ ಎಫ್​ಐಆರ್ ದಾಖಲಿಸಿದೆ. ಆ ಪೈಕಿ ಸೆಲೆಬ್ರಿಟಿ ಮ್ಯಾನೇಜರ್ ಆಗಿ ಹಲವು ಸಿನಿಮಾದವರ ಜತೆ ಕೆಲಸ ಮಾಡಿದ್ದ ಶ್ರುತಿ ಮೋದಿ ವಿರುದ್ಧವೂ ದೂರು ದಾಖಲಾಗಿದೆ. ಹಾಗಾದರೆ ಯಾರು ಈ ಶ್ರುತಿ ಮೋದಿ? ಸುಶಾಂತ್ ಪ್ರಕರಣದಲ್ಲಿ ಶ್ರುತಿ ಪಾತ್ರ ಇದೆಯೇ? ಅವರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

    ಶ್ರುತಿ ಮೋದಿ ಗುಜರಾತಿ ಮೂಲದವರಾದರೂ ಹುಟ್ಟಿ, ಬೆಳೆದಿದ್ದು ಮುಂಬೈನಲ್ಲಿ. 1993ರಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಶ್ರುತಿಗೆ ಚಿಕ್ಕಂದಿನಿಂದ ಸಿನಿಮಾ ಹುಚ್ಚು. ಸ್ಟಾರ್​ಗಳ ಜತೆ ಗುರುತಿಸಿಕೊಳ್ಳಬೇಕು ಅವರೊಟ್ಟಿಗೆ ಕೆಲಸ ಮಾಡಬೇಕು ಎಂಬ ಆಸೆ. ಅದರಂತೆ ಮುಂಬೈ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು ಸೆಲೆಬ್ರಿಟಿ ಮ್ಯಾನೇಜರ್​ ಕೋರ್ಸ್ ಮಾಡಿದ್ದ ಶ್ರುತಿ ಆರಂಭದಲ್ಲಿ ಅವರಿವರ ಜತೆ ಕೆಲಸ ಮಾಡಿ, ಸುಶಾಂತ್​ ಸಿಂಗ್​ ಮ್ಯಾನೇಜರ್​ ಆಗಿ ಸೇರಿಕೊಂಡಿದ್ದರು. 2019ರ ಜುಲೈನಿಂದ 2020ರ ಫೆಬ್ರವರಿ ವರೆಗೂ ಸುಶಾಂತ್ ಮ್ಯಾನೇಜರ್​ ಆಗಿದ್ದರು. ಅಷ್ಟೇ ಅಲ್ಲ ರಿಯಾ ಚಕ್ರವರ್ತಿ ಸಹೋದರ ಶೋವಿಕ್​ ಚಕ್ರವರ್ತಿ ಅವರಿಗೂ ಮ್ಯಾನೇಜರ್​ ಆಗಿದ್ದರು ಶ್ರುತಿ.

    ಇದನ್ನೂ ಓದಿ: ಸುಶಾಂತ್ ಪ್ರಕರಣಕ್ಕೆ ಹೊಸ ತಿರುವು

    ಅಚ್ಚರಿ ವಿಚಾರ ಏನೆಂದರೆ, ಸುಶಾಂತ್​ ಸಾವಿಗೂ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದ ಎಕ್ಸ್ ಮ್ಯಾನೇಜರ್​ ದಿಶಾ ಸಾಲಿಯಾನ್​ ಮತ್ತು ಶ್ರುತಿ ಮೋದಿ ಒಂದೇ ಏಜೆನ್ಸಿಯಲ್ಲಿದ್ದವರು. ಅದಾದ ಬಳಿಕ ಕೆಲ ಬದಲಾವಣೆಗಳಾಗಿ ಶ್ರುತಿ ಸ್ಥಾನಕ್ಕೆ ದಿಶಾ ಸಾಲಿಯಾನ್​ ಸುಶಾಂತ್​ಗೆ ಮ್ಯಾನೇಜರ್​ ಆಗಿ ಸೇರಿಕೊಂಡರು. ಈ ಬೆಳವಣಿಗೆಯೂ ಪ್ರಕರಣದಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.

    ಶ್ರುತಿ ಮೋದಿ ಸುಶಾಂತ್​ ಮತ್ತು ರಿಯಾ ಚಕ್ರವರ್ತಿಗೆ ಆಪ್ತೆ. ಶ್ರುತಿ ಇನ್​ಸ್ಟಾಗ್ರಾಂ ಖಾತೆಯನ್ನು ಸ್ವತಃ ಸುಶಾಂತ್​ ಮತ್ತು ರಿಯಾ ಫಾಲೋ ಮಾಡುತ್ತಿದ್ದರು. ಇದೆಲ್ಲವನ್ನು ಪರಿಗಣಿಸಿ, ಪ್ರಕರಣದಲ್ಲಿ ಇವರ ಸಹಭಾಗಿತ್ವ ಇರಬಹುದು ಎಂಬ ಶಂಕೆ ಮೇಲೆ ಹಲವು ಪ್ರಕರಣಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

    ಇದನ್ನೂ ಓದಿ: ತಿಂಗಳ ಕೊನೆಗೆ ಮಜಾ ವರ್ಷದ ಕೊನೆಗೆ ಬಿಗ್ ಬಾಸ್ ಶುರು ಹೌದು ಸ್ವಾಮಿ…

    ಈ ಮೊದಲು ಮುಂಬೈ ಪೊಲೀಸ್​ ಶ್ರುತಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಆಗ ಅವರ ಆದಾಯ ಹಣಕಾಸಿನ ಸ್ಥಿತಿಗತಿ ಹೇಗಿತ್ತು ಎಂಬುದರ ಬಗ್ಗೆ ಅವರು ಮಾಹಿತಿ ನೀಡಿದ್ದರು. ‘ಸುಶಾಂತ್​ ಹಣಕಾಸು ಸ್ಥಿತಿ ಚೆನ್ನಾಗಿತ್ತು. ಒಂದು ತಿಂಗಳಿಗೆ 10 ಲಕ್ಷ ಖರ್ಚು ಮಾಡುತ್ತಿದ್ದರು. ಬಾಂದ್ರಾದಲ್ಲಿನ ಮನೆಗೆ ಬಾಡಿಗೆ ರೂಪದಲ್ಲಿ 4.5 ಲಕ್ಷ ಹಣ ಪಾವತಿಸುತ್ತಿದ್ದರು. ಲೋನಾವಾಲಾದಲ್ಲಿನ ಫಾರ್ಮ್​ಹೌಸ್​ಗೂ ಲಕ್ಷಾಂತರ ರೂ. ಬಾಡಿಗೆ ನೀಡುತ್ತಿದ್ದರು’ ಎಂಬ ಮಾಹಿತಿ ನೀಡಿದ್ದರು.

    ಇದೀಗ ಇದೇ ಸುಶಾಂತ್​ ಸಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ಸೇರಿ ಸಹೋದರ ಶೋವಿಕ್​ ಚಕ್ರವರ್ತಿ, ತಾಯಿ ಸಂಧ್ಯಾ ಚಕ್ರವರ್ತಿ, ತಂದೆ ಇಂದ್ರಜಿತ್​ ಚಕ್ರವರ್ತಿ, ಸುಶಾಂತ್​ ಮನೆ ಮ್ಯಾನೇಜರ್​ ಸ್ಯಾಮ್ಯೂಲ್​ ಚಕ್ರವರ್ತಿ ಮತ್ತು ಮಾಜಿ ಮ್ಯಾನೇಜರ್​ ಶ್ರುತಿ ಮೋದಿ ವಿರುದ್ಧ ಸಿಬಿಐ ಎಫ್​ಐಆರ್ ದಾಖಲಿಸಿದೆ. (ಏಜೆನ್ಸೀಸ್​)

    VIDEO: 10 ಸಾವಿರ ರೂ. ನೀಡಲಿಲ್ಲ ಎಂಬ ಕಾರಣಕ್ಕೆ ಫೇಸ್​ಬುಕ್​ ಲೈವ್​ ಬಂದು ಆತ್ಮಹತ್ಯೆಗೆ ಶರಣಾದ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts