More

    ಸತತ ಎರಡನೇ ವರ್ಷವೂ ಐಸಿಸಿ ಪ್ರಶಸ್ತಿ ಒಲಿಸಿಕೊಂಡ ಸೂರ್ಯಕುಮಾರ್​

    ದುಬೈ: ವಿಶ್ವ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಸತತ ಎರಡನೇ ಬಾರಿಗೆ ‘ಐಸಿಸಿ ವರ್ಷದ ಟಿ20 ಕ್ರಿಕೆಟಿಗ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಐಸಿಸಿಯ ವರ್ಷದ ಟಿ20 ತಂಡಕ್ಕೆ ನಾಯಕನಾಗಿಯೂ ನೇಮಕಗೊಂಡಿದ್ದ ಸೂರ್ಯಕುಮಾರ್​ಗೆ ಅವಳಿ ಗೌರವ ಸಂದಿದೆ. ಕಳೆದ ಬಾರಿಯೂ ಸೂರ್ಯಕುಮಾರ್​ಗೆ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ಒಲಿದಿತ್ತು. ಐಸಿಸಿ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ ಬೆಂಗಳೂರು ಮೂಲದ ನ್ಯೂಜಿಲೆಂಡ್ ತಂಡದ ಆಲ್ರೌಂಡರ್ ರಚಿನ್ ರವೀಂದ್ರಗೆ ಒಲಿದಿದೆ.

    ಸ್ಪೋಟಕ ಬ್ಯಾಟರ್ ಸೂರ್ಯ ಅವರ ಅದ್ಭುತ ನಿರ್ವಹಣೆಗೆ ‘ಟೀಮ್ ಇಂಡಿಯಾ ಮಧ್ಯಮಕ್ರಮಾಂಕದ ಬೆನ್ನೆಲುಬು’ ಎಂದು ಐಸಿಸಿ ಬಣ್ಣಿಸಿದೆ. 33 ವರ್ಷದ ಸೂರ್ಯಕುಮಾರ್ 2023ರ ಸಾಲಿನ ಟಿ20 ಕ್ರಿಕೆಟ್​ನಲ್ಲಿ ಆಡಿದ 18 ಪಂದ್ಯಗಳಲ್ಲಿ 50ರ ಸರಾಸರಿಯಲ್ಲಿ 733 ರನ್​ಗಳಿಸಿದ್ದಾರೆ. ಇದರಲ್ಲಿ 2 ಶತಕ ಸೇರಿವೆ. ಸೂರ್ಯಕುಮಾರ್ ಎರಡು ಬಾರಿ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ಗೆದ್ದ ಮೊದಲ ಆಟಗಾರ. ನ್ಯೂಜಿಲೆಂಡ್​ನ ಮಾರ್ಕ್ ಚಾಪ್​ವುನ್, ಜಿಂಬಾಬ್ವೆಯ ಸಿಕಂದರ್ ರಾಜಾ ಹಾಗೂ ಉಗಾಂಡದ ಅಲ್ಪೇಶ್ ರಾಜಮನಿ ಪ್ರಶಸ್ತಿ ರೇಸ್​ನಲ್ಲಿದ್ದ ಇತರ ಆಟಗಾರರು.

    ಏಕದಿನ ವಿಶ್ವಕಪ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಯುವ ಎಡಗೈ ಆಲ್ರೌಂಡರ್ ರಚಿನ್ ರವೀಂದ್ರ 2023ರ ಐಸಿಸಿ ವರ್ಷದ ಉದಯೋನ್ಮುಖ ಆಟಗಾರ ಎನಿಸಿದ್ದಾರೆ. ಏಕದಿನದಲ್ಲಿ 820 ರನ್, 18 ವಿಕೆಟ್ ಕಬಳಿಸಿದ ರಚಿನ್, ಟಿ20ಯಲ್ಲಿ 91 ರನ್, 5 ವಿಕೆಟ್ ಪಡೆದಿದ್ದಾರೆ. ಏಕದಿನ ವಿಶ್ವಕಪ್​ನಲ್ಲಿ 578 ರನ್​ಗಳಿಸಿದ ರಚಿನ್ ಟೂರ್ನಿಯ 4ನೇ ಗರಿಷ್ಠ ಸ್ಕೋರರ್ ಆಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts