More

  9 ಸೈಕೋಪಾಥ್​ಗಳ ಜತೆಗಿದ್ದೆ, ಮೊಟ್ಟೆ-ಬ್ರೆಡ್‌ ತಿಂದು ಜೀವಿಸಿದೆ; ಕಷ್ಟದ ದಿನಗಳ ನೆನೆದು ಭಾವುಕರಾದ ಬಿಗ್​ಬಾಸ್​ ಸ್ಪರ್ಧಿ!

  ಮುಂಬೈ: ಚಿತ್ರರಂಗಕ್ಕೆ ಬರುವ ಮುನ್ನ ಅನೇಕ ಕಲಾವಿದರು ಹಲವು ರೀತಿಯಲ್ಲಿ ತಮ್ಮ ಕಷ್ಟಕರ ದಿನಗಳನ್ನು ಎದುರಿಸಿ ಇಂದು ತಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗಿ ಹೊರಹೊಮ್ಮಿರುತ್ತಾರೆ. ಪ್ರಾರಂಭದ ದಿನಗಳಲ್ಲಿ ಸಹಿಸಲಾಗದ ಕಷ್ಟ, ಅನುಭವಿಸಲಾಗದ ದುಃಖ ಎಲ್ಲವೂ ತುಂಬಿ ತುಳಕಾಡುತ್ತಿರುತ್ತದೆ. ಇಂತಹ ಪರಿಸ್ಥಿತಿಯನ್ನು ಭೇದಿಸಿ ಸಾಧನೆ ಹಾದಿ ಹಿಡಿದು, ಎಲ್ಲರ ಮೆಚ್ಚುಗೆಗೆ ಪಾತ್ರರಾದವರ ಪೈಕಿ ಬಾಲಿವುಡ್​ ನಟಿ, ಮಾಜಿ ಬಿಗ್​ ಬಾಸ್​ ಸ್ಪರ್ಧಿ ನೋರಾ ಫತೇಹಿ ಕೂಡ ಒಬ್ಬರು.

  ಇದನ್ನೂ ಓದಿ: ಕೆಪಿಎಸ್‌ಸಿ ಸದಸ್ಯತ್ವದ ನೆಪದಲ್ಲಿ 4.10 ಕೋಟಿ ವಂಚನೆ; ಸಿಸಿಬಿಯಿಂದ ನಾಲ್ವರ ಸೆರೆ

  ಹಿಂದಿ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಂಡು ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಂಡ ನಟಿ ನೋರಾ ಫತೇಹಿ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ‘ಮಡ್ಗಾಂವ್ ಎಕ್ಸ್‌ಪ್ರೆಸ್’ ಚಿತ್ರದಲ್ಲಿನ ಪಾತ್ರಕ್ಕಾಗಿ ಗಮನ ಸೆಳೆದ ನಟಿ, ಆರಂಭಿಕ ದಿನಗಳಲ್ಲಿ ಮುಂಬೈನಲ್ಲಿದ್ದು ಅನುಭವಿಸಿದ ಕಷ್ಟಕರ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ.

  ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತನ್ನ ಸವಾಲಿನ ಜರ್ನಿ ಬಗ್ಗೆ ಮನಬಿಚ್ಚಿ ಕೆಲವು ವಿಷಯಗಳನ್ನು ಹಂಚಿಕೊಂಡ ನೋರಾ, “ಕೇವಲ 5000 ರೂಪಾಯಿಗಳೊಂದಿಗೆ ನಾನು ಭಾರತಕ್ಕೆ ಬಂದೆ. 1000 ಡಾಲರ್ ಬಿಲ್ ಹೇಗಿರುತ್ತದೆ ಎಂಬ ಪರಿಕಲ್ಪನೆಯೂ ಇರಲಿಲ್ಲ. ಅಂದು ಮುಂಬೈನ ಅಪಾರ್ಟ್ಮೆಂಟ್ನಲ್ಲಿ ಒಂಬತ್ತು ಇತರ ಹುಡುಗಿಯರೊಂದಿಗೆ 3 ಬಿಎಚ್​ಕೆಯಲ್ಲಿ ವಾಸವಿದ್ದೆ. ಅವರಲ್ಲಿ ಇಬ್ಬರೊಂದಿಗೆ ರೂಮ್​ನ ಶೇರ್​ ಮಾಡಿಕೊಳ್ಳಬೇಕಿತ್ತು” ಎಂದರು.

  ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು 267.05 ಕೋಟಿ ರೂ ಒಡೆಯ: ದುಬಾರಿ ಆಸ್ತಿಯಿದ್ದರೂ ಪತ್ನಿ ಬಳಿ ಕಾರಿಲ್ಲ

  “9 ಸೈಕೋಪಾಥ್​ಗಳ ಜತೆಗಿದ್ದೆ. ಆ ದಿನಗಳ ನೆನಪುಗಳು ಈಗಲೂ ನನ್ನನ್ನು ಕಾಡುತ್ತಿವೆ. ನಾನಲ್ಲಿ ಉಳಿದುಕೊಂಡು ಇಂತಹ ಪರಿಸ್ಥಿತಿಯನ್ನು ಎದುರಿಸುವಾಗ ಒಂದಂತು ಯೋಚನೆ ಮಾಡಿದೆ. ನಾನಿಲ್ಲಿ ಏನು ಮಾಡ್ತಿದ್ದೀನಿ? ಅಂತ ಒಂದು ಪ್ರಶ್ನೆಯನ್ನು ನನ್ನಲ್ಲೇ ಕೇಳಿಕೊಂಡೆ. ಹೊಸಬರು ಇಂಡಸ್ಟ್ರಿಗೆ ಬಂದರೆ ಯಾವ ರೀತಿ ಶೋಷಣೆಗಳು ಎದುರಾಗುತ್ತವೆ ಎಂಬುದನ್ನು ಅರಿತುಕೊಂಡೆ” ಎಂದರು.

  “ಏಜೆನ್ಸಿಯು ಕಮಿಷನ್‌ಗಳ ಹೆಸರಿನಲ್ಲಿ ಕೊಡಬೇಕಾದ ಹಣದಲ್ಲಿ ಕಡಿತಗೊಳಿಸಿ ಪೇಮೆಂಟ್ ಮಾಡುತ್ತಿದ್ದರು. ಇದರಿಂದ ತೀರ ಹಣದ ಅಭಾವ ಎದುರಾಗಿತ್ತು. ಆ ಸಮಯದಲ್ಲಿ ಮೊಟ್ಟೆ ಮತ್ತು ಬ್ರೆಡ್‌ನ ಆಹಾರವನ್ನಾಗಿ ಸೇವಿಸಿ ಜೀವನ ಮಾಡಿದೆ” ಎಂದು ಹೇಳಿದರು. ಈ ಹಿಂದೆ 2019ರಲ್ಲಿ ಇದೇ ರೀತಿಯ ಸಮಸ್ಯೆಗಳನ್ನು ತಿಳಿಸಿದ್ದ ನೋರಾ, ಒಂದು ವಾರ ತಳ್ಳಲು ನನ್ನ ಬಳಿ ಕೇವಲ 3000 ರೂಪಾಯಿಗಳು ಮಾತ್ರ ಇರುತ್ತಿತ್ತು ಎಂದು ಹೇಳಿಕೊಂಡಿದ್ದರು.

  ಇದನ್ನೂ ಓದಿ: ಟ್ಯಾಕ್ಸ್​ ಪಾವತಿದಾರರಿಗೆ ದೊಡ್ಡ ಸುದ್ದಿ… ಬೇಗನೆ ಕೆಲಸ ಮುಗಿಸಿಕೊಳ್ಳಲು 3 ಫಾರ್ಮ್​ಗಳು ಲಭ್ಯ..

  ವೃತ್ತಿಪರವಾಗಿ ನೋರಾ ‘ಸ್ತ್ರೀ’, ‘ಎಬಿಸಿಡಿ’, ‘ಸತ್ಯಮೇವ ಜಯತೆ’, ‘ಬಾಟ್ಲಾ ಹೌಸ್’, ‘ರಾಕಿ ಹ್ಯಾಂಡ್ಸಮ್‌’ ಸೇರಿದಂತೆ ಕುನಾಲ್ ಕೆಮ್ಮು ನಿರ್ದೇಶನದ ‘ಮಡ್ಗಾಂವ್ ಎಕ್ಸ್‌ಪ್ರೆಸ್’ನಲ್ಲಿನ ಪಾತ್ರಕ್ಕೆ ನಟಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು,(ಏಜೆನ್ಸೀಸ್).

  26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

  2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts