More

    ವಿದೇಶದಿಂದ ಬಂದವರ ಮಾಹಿತಿ ತಿಳಿಸಿ

    ಸುರಪುರ: ಕಳೆದ ಕೆಲ ದಿನಗಳಿಂದ ಕಲಬುರಗಿ ಮತ್ತು ದೇಶದ ಇನ್ನಿತರ ಕಡೆಗಳಲ್ಲಿ ಬಾಧಿಸುತ್ತಿರುವ ಕರೊನ ವೈರಸ್ ತಡೆಗಟ್ಟಲು ನಗರದ ಜನತೆ ಸಹಕಾರ ನೀಡುವಂತೆ ತಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ ನಾಯಕ ತಿಳಿಸಿದರು.

    ಇಲ್ಲಿನ ನಗರಸಭೆ ಕಚೇರಿಯಲ್ಲಿ ಬುಧವಾರ ನಗರಸಭೆ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿನ ವಾರ್ಡ್​ಗಳಲ್ಲಿ ಜನತೆ ವಿದೇಶದಿಂದ ಬಂದರೆ ತಕ್ಷಣ ನಮಗೆ ಮಾಹಿತಿ ನೀಡಬೇಕು. ಈ ಸೊಂಕನ್ನು ಗುಣಪಡಿಸಬಹುದಾಗಿದ್ದು, ಜನತೆ ಅನವಶ್ಯಕವಾಗಿ ಆತಂಕ ಪಟ್ಟುಕೊಳ್ಳಬಾರದು ಎಂದು ಮನವಿ ಮಾಡಿದರು.

    ರಾಜ್ಯದಲ್ಲಿ ಈಗಾಗಲೆ 11 ಜನರಿಗೆ ವೈರಸ್ ತಗುಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲಿ 6 ಜನರು ಗುಣಮುಖರಾಗಿದ್ದಾರೆ. ಬಹುತೇಕ ವಾರ್ಡ್ಗಳಲ್ಲಿ ಚರಂಡಿ ಮತ್ತು ತ್ಯಾಜ್ಯಗಳನ್ನು ಬಿಸಾಕುತ್ತಿದ್ದಾರೆ ಅವುಗಳನ್ನು ಸ್ವಚ್ಛ್ಛಗೊಳಿಸಬೇಕು ಮತ್ತು ಈ ಸೊಂಕಿನ ಕುರಿತು ಜನರಿಗೆ ಸದಸ್ಯರು ಕೂಡಾ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.

    ಪೌರಾಯುಕ್ತ ಜೀವನ ಕುಮಾರ, ಸದಸ್ಯರಾದ ರಾಜಾ ಪಿಡ್ಡನಾಯಕ (ತಾತಾ), ವೇಣುಮಾಧವ ನಾಯಕ, ವೇಣುಗೋಪಾಲ ಜೇವರ್ಗಿ, ನರಿಸಿಂಹ ಪಂಚಮಗಿರಿ, ಜುಮ್ಮಣ್ಣ, ಅಯ್ಯಪ್ಪ, ಮಾನಪ್ಪ ಚಳ್ಳಿಗಿಡ, ಶಿವುಕುಮಾರ ಕಟ್ಟಿಮನಿ, ಕಮುರುದ್ದಿನ, ಮಹ್ಮದ್ ಗೌಸ್, ಧರ್ಮಣ್ಣ, ಮಲ್ಕಪ್ಪಗೌಡ, ಶಕೀಲ ಅಹ್ಮದ್ ಸೇರಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts