More

    ೩೦ರಂದು ಸುರಪುರದಲ್ಲಿ ಜನತಾ ದರ್ಶನ

    ಸುರಪುರ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅ.೩೦ರಂದು ಜನತಾ ದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುನೀಲಾ ಬಿ.ಹೇಳಿದರು.

    ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಕರೆದಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರು ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಲು ಇದೊಂದು ಉತ್ತಮ ಯೋಜನೆಯಾಗಿದ್ದು, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ವಾರ್ಡ್ಗಳಲ್ಲಿ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ಡಂಗುರ, ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಬೇಕು. ನಗರದ ಜನಸಂದಣಿ ಇರುವ ಪ್ರದೇಶಗಳ ವೃತ್ತಗಳಲ್ಲಿ ಬ್ಯಾನರ್ ಹಾಕಿಸಬೇಕು. ಜನತಾ ದರ್ಶನದ ಬಗ್ಗೆ ಮಾಹಿತಿ ತಲುಪುವಂತೆ ಮಾಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

    ತಮ್ಮ ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಅರ್ಜಿಗಳನ್ನು ಸ್ವೀಕರಿಸಿ ಅರ್ಜಿದಾರರು ನೀಡುವ ಎಲ್ಲ ಮಾಹಿತಿ ಪಡೆದುಕೊಳ್ಳಬೇಕು. ವಿಳಾಸ ಸರಿಯಾಗಿ ಬರೆದುಕೊಂಡು ದೂರು ನೀಡಿದವರಿಗೆ ತಲುಪಿಸುವಂತಹ ಕೆಲಸ ಮಾಡಬೇಕು. ಸುರಪುರ ಮತಕ್ಷೇತ್ರದಲ್ಲಿ ಕುಂದು-ಕೊರತೆ ಕುರಿತು ಬರುವ ಅರ್ಜಿಗಳನ್ನು ಆಲಿಸಿ ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಜನತಾ ದರ್ಶನಕ್ಕೆ ಕಡಿಮೆ ಸಮಯ ಇರುವುದರಿಂದ ಎಲ್ಲೆಡೆ ಪ್ರಚಾರ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಯಾದಗಿರಿಯಲ್ಲಿ ನಡೆದ ಜನತಾ ದರ್ಶನದಲ್ಲಿ ೨೫೪ ಸಮಸ್ಯೆ ಬಗೆಹರಿಸಲಾಗಿದ್ದು, ಅರ್ಜಿದಾರರಿಗೆ ತಲುಪಿಸಲು ವಿಳಾಸ ಪರಿಪೂರ್ಣವಾಗಿಲ್ಲ. ಆದ್ದರಿಂದ ವಿಳಾಸ ಖಚಿತವಾಗಿರಬೇಕು. ದೂರು ಸ್ವೀಕರಿಸುವ ಜತೆಗೆ ಸರಿಯಾದ ವಿಳಾಸ ಬರೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಕಂಪ್ಯೂಟರ್ ಆಪರೇಟರ್‌ಗಳಿಗೆ ತರಬೇತಿ ನೀಡಲಾಗಿದೆ. ಅವರಲ್ಲದೆ ಇನ್ನೂ ಹೆಚ್ಚಿನ ಆಪರೇಟರ್‌ಗಳು ಸಿದ್ಧತೆಯಲ್ಲಿರಬೇಕು. ದೂರನ್ನು ಸರಿಯಾದ ಕ್ರಮದಲ್ಲಿ ಪರಿಶೀಲಿಸಿ, ಸಮಸ್ಯೆ ಇತ್ಯರ್ಥಗೊಳಿಸಿದಾಗ ಜನತಾದರ್ಶನಕ್ಕೆ ಒಂದು ಅರ್ಥ ಬರುತ್ತದೆ. ಆದ್ದರಿಂದ ಶಕ್ತಿಮೀರಿ ಕೆಲಸ ಮಾಡಬೇಕು ಎಂದು ತಿಳಿಸಿದರು.

    ಜನತಾ ದರ್ಶನ ಆಯೋಜಿಸಿರುವ ಸ್ಥಳದಲ್ಲಿ ಮೂಲಸೌಕರ್ಯ ಪರಿಶೀಲಿಸಲಾಗಿದೆ. ನೀರು, ಶೌಚಗೃಹ, ವಿದ್ಯುತ್ ಸುಸ್ಥಿತಿಯಲ್ಲಿವೆ. ಜನತಾ ದರ್ಶನಕ್ಕಾಗಿಯೇ ಸಮಿತಿಗಳನ್ನು ರಚಿಸಲಾಗಿದೆ. ರೈತರಿಗೆ ಉಂಟಾಗುವ ಇಕೆವೈಸಿ ತೊಂದರೆಗಳನ್ನು ಸರಿಪಡಿಸಿ ಪ್ರಗತಿ ಸಾಧಿಸಬೇಕು. ರೈತರಿಗೆ ಮತ್ತು ಸಾರ್ವಜನಿಕರಿಗೆ ಬ್ಯಾಂಕ್‌ನಿAದಾಗುವ ಸಮಸ್ಯೆಯನ್ನು ಪರಿಹರಿಸಲು ಬ್ಯಾಂಕ್ ಸಿಬ್ಬಂದಿ ಸ್ಥಳದಲ್ಲಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಜಿಪಂ ಉಪ ಕರ‍್ಯದರ್ಶಿ ಶರಣಬಸವರಾಜ, ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಅಭಿಯಂತರ ಅಭಿಮನ್ಯು ಶೃಂಗೇರಿ, ತಹಸೀಲ್ದಾರ್ ಕೆ.ವಿಜಯಕುಮಾರ್, ಬಸವರಾಜ, ಸಿಪಿಐ ಆನಂದ, ಎಡಿ ರವಿಚಂದ್ರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

    ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ಸ್ಥಳದಲ್ಲಿರಬೇಕು. ಬೆಳಗ್ಗೆ ೯ರಿಂದ ಅರ್ಜಿ ಸ್ವೀಕರಿಸಲಾಗುತ್ತದೆ. ಕಾರ್ಯಕ್ರಮ ೧೧ಕ್ಕೆ ಆರಂಭವಾದರೂ ಅರ್ಜಿಗಳನ್ನು ಅಧಿಕಾರಿಗಳು ಸ್ವೀಕರಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕು.
    | ಡಾ. ಸುಶೀಲಾ ಬಿ. ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts