More

    ಯುವ ಮತದಾರರೇ ನೋಂದಣಿ ಮಾಡಿಕೊಳ್ಳಿ

    ಸುರಪುರ: ನಗರಸಭೆ ವ್ಯಾಪ್ತಿಯ ೪೫ ಮತಗಟ್ಟೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಯುವ ಮತದಾರರಲ್ಲಿ ಜಾಗೃತಿ ಮೂಡಿಸಿ ಮತ ಮತದಾರರ ಪಟ್ಟಿಗೆ ಸೇರ್ಪಡಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಹೇಳಿದರು.

    ನಗರದ ನಗರಸಭೆ ವ್ಯಾಪ್ತಿಯಲ್ಲಿ ಭಾನುವಾರ ಮನೆ ಮನೆಗೆ ಭೇಟಿ ನೀಡಿ ಯುವ ಮತದಾರರಲ್ಲಿ ಜಾಗೃತಿ ಮೂಡಿಸಿ ಮಾತನಾಡಿದ ಅವರು, ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಮ್ಮ ದಾಖಲಾತಿ ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡು ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು ಎಂದರು.
    ಭಾರತ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಮತದಾರರೇ ಇಲ್ಲಿ ಪ್ರಭುಗಳಾಗಿರುವುದರಿಂದ ಮತದಾರರು. ಹೀಗಾಗಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಂಡು ಮುಂಬರುವ ಲೋಕಸಭಾ ಮತ್ತು ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಸೇರಿ ವಿವಿಧ ಚುನಾವಣೆಗಳಲ್ಲಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿದರು.

    ಮತಗಟ್ಟೆ ಮೇಲ್ವಿಚಾರಕ ಪ್ರದೀಪ, ಮತಗಟ್ಟೆ ಅಧಿಕಾರಿ ದತ್ತು ನಾಗಭುಜಂಗಿ, ನಗರಸಭೆ ಮೇಲ್ವಿಚಾರಕ ಯಲ್ಲಪ್ಪ ನಾಯಕ ಡೊಣ್ಣಿಗೇರಾ, ಕಂದಾಯ ನಿರೀಕ್ಷಕರಾದ ವೆಂಕಟೇಶ ಕಲ್ಬುರ್ಗಿ, ಸಲೀಂ ಮಲ್ಲಿಕ್, ನಗರಸಭೆ ಜೆಇ ಮಹೇಶ ಚವ್ಹಾಣ್, ಎಸ್‌ಐಗಳಾದ ಶಿವಪುತ್ರ, ಗುರುಸ್ವಾಮಿ, ಬಿಲ್ ಕಲೆಕ್ಟರ್ ಬಾಬುರಾವ್, ಹನುಮಂತ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts