More

    ಸ್ವಾಮೀಜಿಯ ಇಶಾರೆಗೇ ತಂತಾನೇ ಚಲಿಸಿ ತೇರುಮನೆ ಸೇರಿಕೊಂಡ ರಥ; ವಿಡಿಯೋ ವೈರಲ್​..

    ರಾಯಚೂರು: ಯಾವುದೇ ಒಂದು ದೇವಸ್ಥಾನದ ರಥ ಒಂದಿಂಚು ಜರುಗಬೇಕೆಂದರೂ ನೂರಾರು ಮಂದಿ, ಕಡೇಪಕ್ಷ ಹತ್ತಾರು ಜನರಾದರೂ ಕೈಜೋಡಿಸಬೇಕು. ಆದರೆ ಇಲ್ಲೊಂದು ಕಡೆ ಅಚ್ಚರಿ ಎಂಬಂತೆ ಸ್ವಾಮೀಜಿಯೊಬ್ಬರ ಬರಿಯ ಇಶಾರೆಗೇ ತೇರು ತಂತಾನೇ ಚಲಿಸುವ ಮೂಲಕ ಕುತೂಹಲ ಕೆರಳಿಸಿದೆ.

    ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಬೂದಿಬಸವೇಶ್ವರ ಮಠದಲ್ಲಿ ಇಂಥದ್ದೊಂದು ಅಚ್ಚರಿ ವಿದ್ಯಮಾನ ಕಂಡುಬಂದಿದೆ. ಫೆ. 24ರಂದು ಇಲ್ಲಿ ರಥೋತ್ಸವ ನಡೆದಿದ್ದು, ನಿನ್ನೆ ಹುಣ್ಣಿಮೆಯಂದು ರಥ ತೇರುಮನೆ ಸೇರಿದೆ. ವಿಶೇಷವೆಂದರೆ ರಥ ಹೀಗೆ ತೇರುಮನೆ ಸೇರುವಾಗ ಹತ್ತಾರು ಅಥವಾ ನೂರಾರು ಮಂದಿ ಸೇರಿ ತಳ್ಳುವುದಿಲ್ಲ. ಬದಲಿಗೆ ಶ್ರೀಬೂದಿಬಸವೇಶ್ವರ ಶಿವಾಚಾರ್ಯರ ಕೈ ಇಶಾರೆಯೊಂದರ ಮೇರೆಗೇ ಈ ರಥ ತೇರುಮನೆಯನ್ನು ಸೇರುತ್ತದೆ.

    ಹೀಗೆ ಮೂರ್ನಾಲ್ಕು ಅಡಿಗಳ ದೂರ ರಥ ತಂತಾನೇ ಚಲಿಸಿ ತೇರುಮನೆಯನ್ನು ಸೇರುವುದು ಹಲವಾರು ವರ್ಷಗಳಿಂದ ನಡೆಯುತ್ತಿದ್ದು, ಇಂದಿಗೂ ಕೌತುಕವಾಗಿ ಪರಿಣಮಿಸಿದೆ. ಈ ದೃಶ್ಯದ ವಿಡಿಯೋ ಇದೀಗ ವೈರಲ್​ ಆಗಿದ್ದು, ಇಂದು ನ್ಯಾಷನಲ್​ ಸೈನ್ಸ್​ ಡೇ ಗುಂಗಿನಲ್ಲಿ ಇರುವವರಿಗೂ ಉತ್ತರವಿಲ್ಲದ ಕುತೂಹಲಕಾರಿ ಘಟನೆಯಾಗಿ ಪರಿಣಮಿಸಿದೆ. ನಿನ್ನೆಯ ಹುಣ್ಣಿಮೆಯಿಂದ ಅದರ ಹಿಂದಿನ ಹುಣ್ಣಿಮೆವರೆಗೆ ಒಂದು ತಿಂಗಳ ಕಾಲ ಇಲ್ಲಿ ಉತ್ಸವ ಇರುತ್ತದೆ.

     

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ನೀವೂ ಬಿಗ್​ಬಾಸ್​ ಮನೆಯೊಳಗೆ ಹೋಗಬಹುದು! ಇಲ್ಲಿದೆ ನೋಡಿ ಅವಕಾಶ

    ಸಲಿಂಗಕಾಮಿ ಸೋದರನಿಗಾಗಿ ಬಾಡಿಗೆ ತಾಯಿಯಾದಳು; ಆರು ಮಕ್ಕಳ ತಾಯಿಯಿಂದ ವಿಶೇಷ ಪ್ರಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts