More

    ನಾಲ್ಕು ಕಾಲಘಟ್ಟದಲ್ಲಿ ನಡೆಯಲಿದೆ ತಮಿಳು ನಟ ಸೂರ್ಯ ಅಭಿನಯದ ಸೂರರೈ ಪೊಟ್ಟರು ಸಿನಿಮಾ: ಕನ್ನಡದಲ್ಲೂ ಬಿಡುಗಡೆ

    ಬೆಂಗಳೂರು: ತಮಿಳು ಸೂಪರ್ ಸ್ಟಾರ್ ಸೂರ್ಯ ಅಭಿನಯದ ‘ಸೊರರೈ ಪೊಟ್ಟರು’ ನಾಲ್ಕು ಕಾಲ ಘಟ್ಟದಲ್ಲಿ ಜರಗುವ ಸಿನಿಮಾ ಆಗಿದ್ದು, ಇತ್ತೀಚೆಗಷ್ಟೇ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಚಿತ್ರವು ಏಪ್ರಿಲ್ ವೇಳೆಗೆ ತೆರೆಗೆ ಬರಲಿದೆ.

    ಈ ಚಿತ್ರ ಕನ್ನಡದಲ್ಲೂ ಏಕ ಕಾಲದಲ್ಲಿ ಡಬ್ ಆಗಿ ರಾರಾಜಿಸಲಿದೆ. ಕನ್ನಡದ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗುತ್ತಿದ್ದು, ಶೀರ್ಷಿಕೆಯನ್ನು ಸದ್ಯದಲ್ಲೇ ಚಿತ್ರತಂಡ ತಿಳಿಸಲಿದೆ. ಹೆಸರಾಂತ ಕನ್ನಡಿಗ ಜಿ. ಆರ್.ಗೋಪಿನಾಥ್ ಏರ್ ಡೆಕ್ಕನ್ ಸಂಸ್ಥೆಯ ಸಂಸ್ಥಾಪಕರ ಅವಧಿಯಲ್ಲಿ ನಡೆದ ಘಟನೆಗಳು ಚಿತ್ರಕ್ಕೆ ಸ್ಪೂರ್ತಿಯಾಗಿದೆ.

    ನಟ ಸೂರ್ಯ ಅರ್ಪಿಸುವ 2ಡಿ ಎಂಟರ್ಟೈನ್ಮೇಂಟ್ ಪ್ರೊಡಕ್ಷನ್ ಅಡಿಯಲ್ಲಿ ‘ಸೊರರೈ ಪೊಟ್ಟರು’ ಚಿತ್ರ ನಿರ್ಮಾಣವಾಗಿದೆ. ಜನಪ್ರಿಯ ಸಿನಿಮಾ ‘ಇರುಧಿ ಸುಟ್ರು’ ಮಹಿಳಾ ನಿರ್ದೇಶಕಿ ಸುಧಾ ಕೊಂಗಾರ ನಿರ್ದೇಶನ ಮಾಡಿದ್ದಾರೆ. ಸೂರ್ಯ ಜತೆ ಅಪರ್ಣ ಬಾಲಮುರಳಿ, ಮೋಹನ್ ಬಾಬು, ಪರೇಶ್ ರಾವಲ್, ಊರ್ವಶಿ, ಕರುಣಾಸ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಜಿ. ವಿ. ಪ್ರಕಾಶ್ ಸಂಗೀತ ಒದಗಿಸಿದ್ದು, ಸಾಹಸವನ್ನು ಹಾಲಿವುಡ್​ನಲ್ಲಿ ‘ಫಾಸ್ಟ್ ಅಂಡ್ ಫ್ಯೂರಿಯಸ್’ ಮತ್ತು ‘ಜೇಮ್ಸ್ ಬಾಂಡ್’ ಸಿನಿಮಾಗಳಿಗೆ ಕೌಶಲವನ್ನು ತೋರಿದ ಗ್ರೆಗ್ ಪೊವೆಲ್ ಹಾಗೂ ವಿಕ್ಕಿ ನೀಡಿದ್ದಾರೆ. ನಂದಗೋಪಾಲ್ ಉಸ್ತುವಾರಿಯಲ್ಲಿ ಸಾಹಸ ಸನ್ನಿವೇಶಗಳ ಚಿತ್ರಣ ನಡೆದಿದೆ. ನಿಕೇತ್ ಬೊಮ್ಮಿರೆಡ್ಡಿ ಈ ಚಿತ್ರದ ಛಾಯಾಗ್ರಾಹಕರು.

    ಸುಮಾರು 70 ಸ್ಥಳಗಳಲ್ಲಿ ಈ ‘ಸೊರರೈ ಪೊಟ್ಟರು’ ಸಿನಿಮಾಕ್ಕೆ ಚಿತ್ರೀಕರಣ ಮಾಡಿರುವುದು ಸಹ ವಿಶೇಷ. ಚೆನ್ನೈ, ಹೈದರಾಬಾದ್, ಹೊಸೂರು, ಛತ್ತೀಸ್ಗಢ ಮಧುರೈ ಹಾಗೂ ಇನ್ನಿತರ ಸ್ಥಳಗಳಲ್ಲಿ ಪ್ರಮುಖ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಸತೀಶ್ ಸೂರ್ಯ ಸಂಕಲನ ಹಾಗೂ ಜಾಕಿ ಕಲಾ ನಿರ್ದೇಶನ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts