More

    VIDEO | ಕ್ವಾರಂಟೈನ್‌ನಲ್ಲಿ ಗಾಯಕರಾದ ಕ್ರಿಕೆಟಿಗ ಸುರೇಶ್ ರೈನಾ

    ಬೆಂಗಳೂರು: ಐಪಿಎಲ್ 13ನೇ ಆವೃತ್ತಿಗಾಗಿ ಯುಎಇ ತಲುಪಿದ ಮೊದಲ 6 ದಿನಗಳಲ್ಲಿ ಎಲ್ಲ ಕ್ರಿಕೆಟಿಗರೂ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ. ಈ ವೇಳೆ ಹೆಚ್ಚಿನ ಆಟಗಾರರು ಫಿಟ್ನೆಸ್‌ನತ್ತ ಗಮನಹರಿಸಿದ್ದು, ವಿವಿಧ ರೀತಿಯ ವರ್ಕ್‌ಔಟ್‌ಗಳ ಮೂಲಕ ಗಮನಸೆಳೆಯುತ್ತಿದ್ದಾರೆ. ಈ ನಡುವೆ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಉಪನಾಯಕ ಸುರೇಶ್ ರೈನಾ, ರ‌್ಯಾಪರ್ ಆಗಿ ಬದಲಾಗಿದ್ದಾರೆ. ಅವರ ಹಾಡಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಗಮನಸೆಳೆದಿದ್ದಾರೆ.

    ಸಿಎಸ್‌ಕೆ ತಂಡ ಯುಎಇಯ ಪ್ರತಿಷ್ಠಿತ ಕಟ್ಟಡ ಬುರ್ಜ್ ಖಲೀಫಾದ ಪಕ್ಕದ ಹೋಟೆಲ್‌ನಲ್ಲೇ ವಾಸ್ತವ್ಯ ಹೂಡಿದ್ದು, ಸುರೇಶ್ ರೈನಾ ಅವರು ಅದರ ಬಗ್ಗೆಯೇ ಹಾಡು ಹಾಡಿರುವುದು ವಿಶೇಷವಾಗಿದೆ.

    ಇದನ್ನೂ ಓದಿ: ಐಪಿಎಲ್ ಉದ್ದೀಪನ ಪರೀಕ್ಷೆಯಲ್ಲಿ ಸ್ಟಾರ್ ಕ್ರಿಕೆಟಿಗರೇ ಟಾರ್ಗೆಟ್!

    ‘ಕ್ವಾರಂಟೈನ್ ಹೋ ಚಾಹೇ 4 ದಿನ್, ಯಾ ಚಾಹೇ ಏಕ್ ಪೂರಾ ವೀಕ್, ಮೈನ್ ಹೂಂ ಅಂದರ್ ಪರ್ ನಿಕಲ್ತಾ ಬಾಹರ್ ಮೇರಾ ಫಿಟ್ನೆಸ್ ಫ್ರೀಕ್. ವರ್ಕ್‌ಔಟ್ ಔರ್ ನೆಟ್‌ಫ್ಲಿಕ್ಸ್ ಸೆ ಗುಜ್ರಾ ಪೂರಾ ದಿನ್ ಮೇರಾ, ಅಬ್ ತೋ ಬುರ್ಜ್ ಖಲೀಫಾ ಕಲ್ ಸೇ ಲಗ್‌ರಹಾ ಹೈ ಔರ್ ಬಡಾ’ (ಕ್ವಾರಂಟೈನ್ ಅವಧಿ 4 ದಿನ ಅಥವಾ ಸಂಪೂರ್ಣ ವಾರವೇ ಇರಬಹುದು. ನಾನಂತೂ ಒಳಗೆಯೇ ಇದ್ದು, ನನ್ನ ಫಿಟ್ನೆಸ್ ಹುಚ್ಚು ಹೊರಹಾಕುತ್ತಿದ್ದೇನೆ. ವರ್ಕ್‌ಔಟ್ ಮತ್ತು ನೆಟ್‌ಫ್ಲಿಕ್ಸ್ ಮೂಲಕ ನನ್ನ ಇಡೀ ದಿನವನ್ನು ಕಳೆದೆ. ಈಗಂತೂ ಬುರ್ಜ್ ಖಲೀಫಾ ಇನ್ನಷ್ಟು ದೊಡ್ಡದಾಗಿ ಕಾಣಿಸುತ್ತಿದೆ) ಎಂದು ಸುರೇಶ್ ರೈನಾ ಅವರು ರ‌್ಯಾಪ್ ಹಾಡನ್ನು ಹಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts