More

    ಮುಂಬೈನ ಡ್ರ್ಯಾಗನ್​ಫ್ಲೈ ಕ್ಲಬ್​ ಮೇಲೆ ದಾಳಿ: ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಬಂಧನ!

    ಮುಂಬೈ: ವಾಣಿಜ್ಯ ನಗರಿ ಮುಂಬೈ ವಿಮಾನ ನಿಲ್ದಾಣ ಬಳಿಯ ಡ್ರ್ಯಾಗನ್​ಫ್ಲೈ ಕ್ಲಬ್​ ಮೇಲೆ ನಡೆದ ದಾಳಿಯ ವೇಳೆ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಮತ್ತು ಗಾಯಕಿ ಗುರು ರಾಂಧವಾರನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಕೆಲವೇ ಸಮಯದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವುದು ಮಂಗಳವಾರ ವರದಿಯಾಗಿದೆ.

    ಕೋವಿಡ್​ ನಿಯಮ ಉಲ್ಲಂಘನೆ ಆರೋಪದಡಿಯಲ್ಲಿ ಕ್ಲಬ್​ನ ಏಳು ಸಿಬ್ಬಂದಿ ಸೇರಿದಂತೆ ಒಟ್ಟು 34 ಮಂದಿಯನ್ನು ದಾಳಿಯ ವೇಳೆ ಬಂಧಿಸಲಾಗಿದೆ. ಬಾಲಿವುಡ್​ ಸೆಲೆಬ್ರಿಟಿ ಸುಸ್ಸನ್ನೆ ಖಾನ್​ ಸಹ ಬಂಧಿಯಾಗಿದ್ದು, ಕೆಲ ಸಮಯದ ಬಳಿಕ ಎಲ್ಲರನ್ನು ಜಾಮೀನಿನ ಮೇಲೆ ಬಿಡಗಡೆ ಮಾಡಲಾಗಿದೆ.

    ಇದನ್ನೂ ಓದಿ: ಪತಿಗೆ ನನ್ನಲ್ಲಿ ಆಸಕ್ತಿಯಿಲ್ಲ- ಮಕ್ಕಳಾಗದ್ದಕ್ಕೆ ಅತ್ತೆ ನನ್ನನ್ನು ಹೀಯಾಳಿಸುತ್ತಿದ್ದಾರೆ… ಕುಗ್ಗಿ ಹೋಗಿದ್ದೇನೆ…

    ಆರೋಪಿಗಳ ಮೇಲೆ ಐಪಿಸಿ ಸೆಕ್ಸನ್​ 188 (ಸಾರ್ವಜನಿಕ ಸೇವಕರಿಂದ ಸರಿಯಾಗಿ ಘೋಷಿಸಲ್ಪಟ್ಟ ಆದೇಶಕ್ಕೆ ಅಸಹಕಾರ), 269 (ಕಾನೂನುಬಾಹಿರವಾಗಿ ಅಥವಾ ನಿರ್ಲಕ್ಷ್ಯದಿಂದ ಯಾವುದೇ ಕೃತ್ಯವನ್ನು ಮಾಡುವವನು ಮತ್ತು ತಿಳಿದಿರುವ ಅಥವಾ ನಂಬಲು ಕಾರಣವಿರುವ ಯಾವುದೇ ಸೋಂಕನ್ನು ಜೀವಕ್ಕೆ ಅಪಾಯಕಾರಿಯಾಗಿ ಹರಡುವ ಸಾಧ್ಯತೆ ಇದೆ), 34 (ಸಾಮಾನ್ಯ ಉದ್ದೇಶದ ಮುಂದುವರಿಕೆಯಲ್ಲಿ ಹಲವಾರು ವ್ಯಕ್ತಿಗಳು ಮಾಡಿದ ಕಾಯಿದೆಗಳು) ಅಡಿಯಲ್ಲಿ ಆರೋಪಿಗಳ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ನಿಗದಿತ ಸಮಯಕ್ಕಿಂತ ಹೆಚ್ಚಿನ ಅವಧಿಯವರೆಗೂ ಡ್ರ್ಯಾಗನ್​ಫ್ಲೈ ಪಬ್ ಅನ್ನು ತೆರೆಯುವ ಮೂಲಕ ಕೋವಿಡ್​ ನಿಯಮಗಳನ್ನು ಉಲ್ಲಂಘಿಸಿರುವುದು ಮುಂಬೈ ಪೊಲೀಸರ ಗಮನಕ್ಕೆ ಬಂದಿದ್ದರಿಂದ ದಾಳಿ ನಡೆಸಲಾಗಿದೆ. ಅಲ್ಲದೆ, ಕ್ಲಬ್​ನಲ್ಲಿ ಇದ್ದವರು ಯಾರು ಸಹ ಮಾಸ್ಕ್​ ಧರಿಸದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

    ಇದನ್ನೂ ಓದಿ: ನೀನು ದಪ್ಪ ಇದ್ದಿ, ಡಿವೋರ್ಸ್​ ಕೊಡುತ್ತೇನೆ ಎನ್ನುತ್ತಿದ್ದಾರೆ ಪತಿ- ಅವರಿಗೆ ವಿಚ್ಛೇದನ ಸಿಗುತ್ತಾ?

    ಇನ್ನು ಹೊಸ ರೂಪಾಂತರ ಕರೊನಾ ವೈರಸ್​ ಭೀತಿಯಿಂದಾಗಿ ಮಹಾರಾಷ್ಟ್ರ ಸರ್ಕಾರ ಸೋಮವಾರದಿಂದ ರಾತ್ರಿ ಕರ್ಪ್ಯೂ ಘೋಷಿಸಿದೆ. ಅಲ್ಲದೆ, ವರ್ಷಾಚರಣೆ ಹತ್ತಿರವಾಗುತ್ತಿರುವದರಿಂದ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಸಹ ಸರ್ಕಾರ ತೆಗೆದುಕೊಂಡಿರುವುದಾಗಿ ತಿಳಿಸಿದೆ. (ಏಜೆನ್ಸೀಸ್​)

    ಇಂಥವರೂ ಇರ್ತಾರೆ! ಹೋಟೆಲ್​ ಬಿಲ್ 75 ಪೈಸೆ… ಟಿಪ್ಸ್​ ಕೊಟ್ಟಿದ್ದು 4 ಲಕ್ಷ ರೂಪಾಯಿ!

    ಯಾವುದೇ ಪಕ್ಷಪಾತವಿಲ್ಲದೆ ಎಲ್ಲ ಜನರು ಅನುಕೂಲ ಪಡೆಯುವ ಹಾದಿಯಲ್ಲಿಂದು ದೇಶವಿದೆ: ಪ್ರಧಾನಿ ಮೋದಿ

    ನಸುಕಿನಲ್ಲಿ ಭೀಕರ ಅಪಘಾತ: ಕಾರು ಬೆಂಕಿಗಾಹುತಿ- ರಕ್ಷಿಸಲು ಜನರಿದ್ದಲ್ಲದೇ ಐವರ ಸಜೀವ ದಹನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts